ಕ್ರಿಸ್‌ ಗೇಲ್‌- ಸುರೇಶ್‌ ರೈನಾ: T20 World Cupನಲ್ಲಿ ಸೆಂಚುರಿ ಬಾರಿಸಿದ ಆಟಗಾರರಿವರು

First Published Oct 23, 2021, 4:33 PM IST

ಬೆಂಗಳೂರು: ಐಸಿಸಿ T20 ವಿಶ್ವಕಪ್ (World Cup) ಟೂರ್ನಿಯು 2007 ರಲ್ಲಿ ಆರಂಭವಾಯಿತು. ಮೊದಲ ಸೀಸನ್‌ನ ಟ್ರೋಫಿಯನ್ನು ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ ಗೆದ್ದು ಕೊಂಡಿತ್ತು. ಇಲ್ಲಿಯವರೆಗೆ 6 ಸೀಸನ್‌ಗಳು ಮುಗಿದಿದ್ದು, ಏಳನೇ ಸೀಸನ್ UAE ಮತ್ತು ಒಮಾನ್‌ನಲ್ಲಿ ಆಡಲಾಗುತ್ತಿದೆ. ಈ  ಟೂರ್ನಮೆಂಟ್‌ನಲ್ಲಿ  ಪ್ರತಿಯೊಬ್ಬ ಆಟಗಾರನು ದಿ ಬೆಸ್ಟ್‌ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾನೆ. ಚುಟುಕು ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದು ಸುಲಭದ ಮಾತಲ್ಲ. ವೆಸ್ಟ್ ಇಂಡೀಸ್ ದೈತ್ಯ ಬ್ಯಾಟರ್ ಕ್ರಿಸ್ ಗೇಲ್‌ನಿಂದ (Chris Gayle) ಹಿಡಿದು ಭಾರತೀಯ ಆಟಗಾರ ಸುರೇಶ್ ರೈನಾ (Suresh Raina)ವರೆಗೂ ಟಿ20 ಕ್ರಿಕೆಟ್‌ನಲ್ಲಿ ಕೆಲವೇ ಕೆಲವು ಬ್ಯಾಟರ್‌ಗಳು ಶತಕ ಗಳಿಸಿದ್ದಾರೆ. ಆದರೆ ಭಾರತದ ನಾಯಕ ವಿರಾಟ್ ಕೊಹ್ಲಿ (Virat Kohli) ಇನ್ನೂ ಟಿ20 ಶತಕಕ್ಕಾಗಿ ಕಾಯುತ್ತಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ  Century ಗಳಿಸಿದವರು ಯಾರಾರು ನೋಡಿ ಇಲ್ಲಿದೆ ಮಾಹಿತಿ. 

ಕ್ರಿಸ್ ಗೇಲ್:
ಟಿ20 ವಿಶ್ವಕಪ್ ನಲ್ಲಿ ಮೊದಲ ಶತಕ ಗಳಿಸಿದ ಕೀರ್ತಿ ಯೂನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಅವರಿಗೆ ಸೇರುತ್ತದೆ. ಅವರು ಸೆಪ್ಟೆಂಬರ್ 2007 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 57 ಎಸೆತಗಳಲ್ಲಿ 117 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದರು

ಸುರೇಶ್ ರೈನಾ:
ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಟೀಂ ಇಂಡಿಯಾದ  ಏಕೈಕ  ಆಟಗಾರ ಸುರೇಶ್ ರೈನಾ ಅವರಾಗಿದ್ದಾರೆ. ಸುರೇಶ್‌ ರೈನಾ ಅವರು 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ  60 ಎಸೆತಗಳಲ್ಲಿ 101 ರನ್ ಗಳಿಸಿದವರು.

ಮಹೇಲಾ ಜಯವರ್ಧನೆ :
2010 ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಮಹೇಲಾ ಜಯವರ್ಧನೆ ಜಿಂಬಾಬ್ವೆ ವಿರುದ್ಧ ಶತಕ ಗಳಿಸಿದ್ದರು. ಅವರು 64 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 100 ರನ್ ಗಳಿಸಿದರು.
 

ಬ್ರೆಂಡನ್ ಮೆಕಲಮ್ :
2012 ರ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ ಬಾಂಗ್ಲಾದೇಶದ ವಿರುದ್ಧ ಶತಕ ಗಳಿಸಿದ್ದರು. ಅವರು 58 ಎಸೆತಗಳಲ್ಲಿ 123 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಅಲೆಕ್ಸ್ ಹೇಲ್ಸ್:
2014 ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ 64 ಎಸೆತಗಳಲ್ಲಿ 116 ರನ್ ಗಳಿಸಿದ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ ಅವರು 11 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು  ಹೊಡೆದರು.

ಅಹ್ಮದ್ ಶಹಜಾದ್:
ಪಾಕಿಸ್ತಾನದ ಅಹ್ಮದ್ ಶಹಜಾದ್ ಕೂಡ ಈ ಪಟ್ಟಿಯಲ್ಲಿ ಬರುತ್ತಾರೆ. 2014 ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಗಳಿಸಿದವರು. ಈ ಪಂದ್ಯದಲ್ಲಿ  ಅವರು 62 ಎಸೆತಗಳಲ್ಲಿ 111 ರನ್‌ಗಳನ್ನು ಗಳಿಸಿ ಸೆಂಚುರಿ ಮಾಡಿದ್ದರು

ತಮೀಮ್ ಇಕ್ಬಾಲ್:
ಬಾಂಗ್ಲಾದೇಶದ ತಮೀಮ್ ಇಕ್ಬಾಲ್ ಟಿ 20 ವಿಶ್ವಕಪ್  2016 ರ ಸೀಸನ್‌ನಲ್ಲಿ ಓಮನ್ ವಿರುದ್ಧ ಶತಕ ಗಳಿಸಿದ್ದರು. ಅವರು 63 ಎಸೆತಗಳಲ್ಲಿ 103 ರನ್‌ಗಳ ಇನ್ನಿಂಗ್ಸ್ ಆಡಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿವೆ.

ಟಿ 20 ವಿಶ್ವಕಪ್‌ನಲ್ಲಿ ಎರಡು ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್. 2007 ರ ನಂತರ, ಅವರು 2016 ರಲಿ ಮತ್ತೊಮ್ಮೆ ಶತಕ ಗಳಿಸಿದರು. ಅವರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 48 ಎಸೆತಗಳಲ್ಲಿ 100 ರನ್ ಗಳಿಸಿದರು.

click me!