ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಸಿಕ್ಕ 4 ಮತ್ತುಗಳಿವು...!

First Published Dec 29, 2020, 4:30 PM IST

ಮೆಲ್ಬರ್ನ್‌: ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿದೆ.
ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಇನ್ನುಳಿದ ಪಂದ್ಯಗಳಲ್ಲೂ ಹೀನಾಯ ಸೋಲು ಕಾಣಲಿದೆ ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಆಮೇಲೆ ಆಗಿದ್ದೇ ಬೇರೆ. ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸಿಕ್ಕ 4 ಅಮೂಲ್ಯ ಮತ್ತುಗಳೇನು ಎನ್ನುವುದರ ವಿವರ ಇಲ್ಲಿದೆ ನೋಡಿ.
 

1. ಹೈದ್ರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಭರ್ಜರಿ ಪಾದಾರ್ಪಣೆ
undefined
ಹೈದ್ರಾಬಾದ್ ವೇಗಿ ಸಿರಾಜ್ ತಮ್ಮ ಪಾದಾರ್ಪಣಾ ಪಂದ್ಯದಲ್ಲೇ ಅಮೂಲ್ಯ 5 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಆಸೀಸ್‌ ಪರ ಸ್ಥಿರ ಪ್ರದರ್ಶನ ತೋರುತ್ತಿದ್ದ ಮಾರ್ನಸ್ ಲಬುಶೇನ್ ವಿಕೆಟ್ ಕಬಳಿಸಿ ಸಿರಾಜ್ ಪಂದ್ಯದ ದಿಕ್ಕನ್ನೇ ಬದಲಿಸಿದರು.
undefined
2. ತಾನೇನು ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ ಶುಭ್‌ಮನ್‌ ಗಿಲ್‌
undefined
ಟೀಂ ಇಂಡಿಯಾ ಆರಂಭಿಕರಾದ ಪೃಥ್ವಿ ಶಾ ಹಾಗೂ ಮಯಾಂಕ್‌ ಅಗರ್‌ವಾಲ್ ರನ್‌ ಗಳಿಸಲು ಪರದಾಡುತ್ತಿರುವಾಗಲೇ ಮೊದಲ ಪಂದ್ಯದಲ್ಲೇ ಗಿಲ್‌ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಪಾದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 45 ರನ್ ಬಾರಿಸಿದ್ದ ಗಿಲ್ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 35 ರನ್ ಬಾರಿಸುವ ಮೂಲಕ ತಾನೇನು ಕಮ್ಮಿಯಿಲ್ಲ ಎಂದು ಕ್ರಿಕೆಟ್‌ ಜಗತ್ತಿಗೆ ಸಾರಿ ಹೇಳಿದ್ದಾರೆ.
undefined
3. ಟೀಂ ಇಂಡಿಯಾಗೆ ಬಲ ತುಂಬಿದ ಜಡೇಜಾ ಎಂಟ್ರಿ
undefined
ಮೊದಲ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದ ಮೂಲಕ ತಾವು ಟೀಂ ಇಂಡಿಯಾದ ಆಸ್ತಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬ್ಯಾಟಿಂಗ್‌ನಲ್ಲಿ 57 ರನ್ ಬಾರಿಸಿದ್ದ ಜಡ್ಡು ಬೌಲಿಂಗ್‌ನಲ್ಲಿ 3 ವಿಕೆಟ್‌ ಜತೆಗೆ ಕ್ಷೇತ್ರರಕ್ಷಣೆಯಲ್ಲೂ ಗಮನ ಸೆಳೆದರು.
undefined
4. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪಂತ್ ಪಾಸ್
undefined
ಆರಂಭದಲ್ಲೇ ಕೆಲ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದ್ದೇ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ರಿಷಭ್ ಪಂತ್. ಪಂತ್ ಕೇವಲ 29 ರನ್ ಬಾರಿಸಿದರಾದರೂ, ಲೀಲಾಜಾಲವಾಗಿ ರನ್ ಬಾರಿಸಿದ್ದರಿಂದ ನಾಯಕ ರಹಾನೆ ಕೂಡಾ ಮೈಚಳಿ ಬಿಟ್ಟು ಆಡಲು ಮುಂದಾಗಿದ್ದು ತಂಡಕ್ಕೆ ಬಳಿಕ ಅನುಕೂಲವಾಗಿ ಪರಿಣಮಿಸಿತು.
undefined
click me!