ಪರ-ವಿರೋಧದ ನಡುವೆ ಕೋಟ್ಲಾ ಮೈದಾನದಲ್ಲಿ ಜೇಟ್ಲಿ ಪುತ್ಥಳಿ ಅನಾವರಣ ಮಾಡಿದ ಶಾ!

First Published | Dec 28, 2020, 6:03 PM IST

ಪರ ವಿರೋಧದ ನಡುವೆ ಬಿಜೆಪಿ ನಾಯಕ, ದೆಹಲಿ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ, ದಿವಂಗತ ಅರುಣ್ ಜೇಟ್ಲಿ ಪ್ರತಿಮೆ ಅನಾವರಣಗೊಂಡಿದೆ. ಅರುಣ್ ಜೇಟ್ಲಿ ಜಯಂತಿಯಂದೆ ಪ್ರತಿಮೆ ಅನಾವರಣ ಮಾಡಲಾಗಿದೆ.  ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರತಿಮೆ ಅನಾವರಣ ಮಾಡಿದ್ದಾರೆ. ಜೇಟ್ಲಿ ಪ್ರತಿಮೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಯಾಕೆ? ಇಲ್ಲಿದೆ ವಿವರ.

Amit Shah unveils Arun Jaitley statue at Delhi District Cricket Association premise ckm
ದೆಹಲಿಯ ಅಂತಾರಾಷ್ಟ್ರೀಯ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ದಿವಗಂತ ನಾಯಕ, ದೆಹಲಿ ಕ್ರಿಕಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ.
Amit Shah unveils Arun Jaitley statue at Delhi District Cricket Association premise ckm
ಇಂದು(ಡಿ.28) ಅರುಣ್ ಜೇಟ್ಲಿ ಜಯಂತಿ. ಇದೇ ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೇಟ್ಲಿ ಪ್ರತಿಮೆ ಅನಾವರಣ ಮಾಡಿದ್ದಾರೆ. ಈ ಮೂಲಕ ಬಿಜೆಪಿ ದೆಹಲಿ ಕ್ರಿಕೆಟ್ ಸಂಸ್ಥೆಯ ಅಭಿವೃದ್ಧಿಗೆ ದುಡಿದ ಜೇಟ್ಲಿಗೆ ಗೌರವ ಸರ್ಪಿಸಿದೆ.
Tap to resize

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟಿಗ ಶಿಖರ್ ಧವನ್, ಸುರೇಶ್ ರೈನಾ, ಬಿಜೆಪಿ ನಾಯಕ ಅನುರಾಗ್ ಠಾಕೂರ್, ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತ ಹಲವರು ಪಾಲ್ಗೊಂಡಿದ್ದರು.
ಜೇಟ್ಲಿ ಪ್ರತಿಮೆ ಅನಾವರಣಕ್ಕೆ ಮಾಜಿ ಕ್ರಿಕೆಟಿಗ, ದೆಹಲಿ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದರು. ಇದರಲ್ಲಿ ಪ್ರಮುಖವಾಗಿ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.
ಜೇಟ್ಲಿ ಪ್ರತಿಮೆ ಅನಾವರಣಕ್ಕೆ ದೆಹಲಿ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ ಬಿಷನ್ ಸಿಂಗ್ ಬೇಡಿ ವಿರೋಧಿಸಿದ್ದರು. ಇಷ್ಟೇ ಅಲ್ಲ ಪ್ರತಿಮೆ ಅನಾವರಣ ಮಾಡುವುದಾದರೆ ತಮ್ಮ ಹೆಸರಿನ ಸ್ಟಾಂಡ್ ತೆಗೆದು ಹಾಕಲು ಸೂಚಿಸಿದ್ದರು.
ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ, ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿಗೆ ಸುದೀರ್ಘ ಪತ್ರ ಬರೆದಿದ್ದರು. ದೆಹಲಿ ಕ್ರಿಕೆಟ್ ಸಂಸ್ಥೆ ಸ್ವಜನಪಕ್ಷಪಾತ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ದೆಹಲಿ ಕ್ರಿಕೆಟ್ ಸಂಸ್ಥೆಗೆ ಅರುಣ್ ಜೇಟ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1999ರಿಂದ 2013ರ ವರೆಗೆ ದೆಹಲಿ ಕ್ರಿಕೆಟ್ ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದ್ದರು. ಹೀಗಾಗಿ ಡಿಡಿಸಿಎ 6 ಅಡಿ ಪ್ರತಿಮೆ ಅನಾವರಣ ಮಾಡಿದೆ.
2019ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದ ಹೆರಸನ್ನು ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿತ್ತು.

Latest Videos

click me!