ಅಬ್ಬಬ್ಬಾ BCCI ಬ್ಯಾಂಕ್ ಬ್ಯಾಲೆನ್ಸ್ ಇಷ್ಟೊಂದಾ? ಕಳೆದ ಐದು ವರ್ಷದ ಗಳಿಕೆಯೇ 14,627 ಕೋಟಿ ರುಪಾಯಿ!

Published : Sep 07, 2025, 03:11 PM IST

ಬೆಂಗಳೂರು: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಗುರುತಿಸಿಕೊಂಡಿರುವ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿರಬಹುದು ಎನ್ನುವ ಕುತೂಹಲ ನಿಮಗೂ ಇರಬಹುದು ಅಲ್ಲವೇ? ಬನ್ನಿ ನಾವಿಂದು ಬಿಸಿಸಿಐ ಸಂಪತ್ತಿನ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ ನೋಡಿ. 

PREV
19

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ಮಂಡಳಿ ಎನಿಸಿಕೊಂಡಿದೆ. ಬಿಸಿಸಿಐಗೂ ಜಗತ್ತಿನ ಉಳಿದ ಕ್ರಿಕೆಟ್ ಮಂಡಳಿಯ ಸಂಪತ್ತಿಗೂ ಅಜಗಜಾಂತರವಿದೆ.

29

ಆದರೆ ಕೆಲವು ದಶಕಗಳ ಹಿಂದೆ ಬಿಸಿಸಿಐ ಪರಿಸ್ಥಿತಿ ಹೀಗಿರಲಿಲ್ಲ. ಸಮಯ ಕಳೆದಂತೆ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಗಗನಕ್ಕೇರತೊಡಗಿತು. ಇದರ ಜತೆಗೆ ಬಿಸಿಸಿಐ ಕ್ರಿಕೆಟ್ ಜಗತ್ತಿನ ಸೂಪರ್ ಪವರ್ ಮಂಡಳಿಯಾಗಿ ಬೆಳೆದು ನಿಂತಿತು.

39

ಬೋರ್ಡ್‌ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ(ಬಿಸಿಸಿಐ)ನ ಬ್ಯಾಂಕ್ ಬ್ಯಾಲೆನ್ಸ್ ಕುರಿತಂತೆ ಕ್ರಿಕ್‌ಬಜ್‌ ತಮ್ಮ ರಿಪೋರ್ಟ್ ಬಹಿರಂಗ ಪಡಿಸಿದೆ. ಬಿಸಿಸಿಐ ಸಂಪತ್ತು ಕೇಳಿದರೇ ನಿಜಕ್ಕೂ ನೀವೆಲ್ಲರೂ ಅಚ್ಚರಿಗೊಳಗಾಗೋದು ಗ್ಯಾರಂಟಿ.

49

ಬಿಸಿಸಿಐ ಬಳಿ 2019ರವರೆಗೆ 6,059 ಕೋಟಿ ರುಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇತ್ತು. ಇನ್ನು ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

59

ಇದೀಗ 2024ರ ಅಂತ್ಯದ ವೇಳೆಗೆ ಬಿಸಿಸಿಐ ಬಳಿ ಇರುವ ಬ್ಯಾಂಕ್ ಬ್ಯಾಲೆನ್ಸ್ ಬರೋಬ್ಬರಿ 20,686 ಕೋಟಿ ರುಪಾಯಿಗಳು. ಅಂದರೆ 2019ರಿಂದ 2024ರ ಅವಧಿಯಲ್ಲಿ ಬಿಸಿಸಿಐ ಸಂಪತ್ತು ಬರೋಬ್ಬರಿ 14,627 ಕೋಟಿ ರುಪಾಯಿ ಸಂಪಾದಿಸಿದೆ.

69

ಕೇವಲ ಐದು ವರ್ಷಗಳಲ್ಲಿ ಇಷ್ಟೊಂದು ಆದಾಯ ಗಳಿಸುವುದು ಸಾಮಾನ್ಯ ಸಾಧನೆಯೇನಲ್ಲ. ಇನ್ನು 2023-24ರ ಫೈನಾನ್ಷಿಯಲ್ ವರ್ಷದಲ್ಲಿ ಬಿಸಿಸಿಐ ಬರೋಬ್ಬರಿ 3,150 ಕೋಟಿ ರುಪಾಯಿ ಆದಾಯ ತೆರಿಗೆ ಪಾವತಿಸಿದೆ ಎಂದು ವರದಿಯಾಗಿದೆ.

79

ಅಂದಹಾಗೆ ಬಿಸಿಸಿಐಗೆ ಇಷ್ಟೊಂದು ಆದಾಯ ಎಲ್ಲಿಂದ ಬರುತ್ತದೆ ಎನ್ನುವ ಕುತೂಹಲ ನಿಮಗೂ ಕಾಡುತ್ತಿರಬಹುದು ಅಲ್ಲವೇ? ಕ್ರಿಕ್‌ಬಜ್ ಬಿಸಿಸಿಐನ ಆಡಿಟ್ ಸ್ಟೇಟ್‌ಮೆಂಟ್‌ನಲ್ಲಿ ಈ ಬಗ್ಗೆಯೂ ಆಸಕ್ತಿಕರ ಮಾಹಿತಿಯನ್ನು ಬಿಚ್ಚಿಟ್ಟಿದೆ.

89

ಬಿಸಿಸಿಐ ಬೇರೆ ದೇಶಗಳಿಗೆ ಕ್ರಿಕೆಟ್ ಸರಣಿಯನ್ನಾಡಲು ಪ್ರವಾಸ ಮಾಡಿದಾಗ, ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಂಡಾಗ ಕೋಟ್ಯಾಂತರ ರುಪಾಯಿ ಆದಾಯ ಗಳಿಸುತ್ತದೆ. ಇದರ ಜತೆಗೆ ಬಿಸಿಸಿಐ ಕಡಿಮೆ ರಿಸ್ಕ್ ಇರುವ ಕಡೆ ಬಂಡವಾಳ ಹೂಡಿಕೆ ಮಾಡುತ್ತದೆ.

99

ಇನ್ನು ಬಿಸಿಸಿಐ, ಟೂರ್ನಿಯ ಟೈಟಲ್ ಸ್ಪಾನ್ಸರ್‌ಶಿಪ್, ಬ್ರಾಡ್‌ಕಾಸ್ಟಿಂಗ್ ಕಾಂಟ್ರ್ಯಾಕ್ಟ್, ಐಪಿಎಲ್‌ ಹಾಗೂ ಇನ್ನಿತರ ಮೂಲಗಳಿಂದ ಪ್ರತಿವರ್ಷ ಕೋಟ್ಯಾಂತರ ರುಪಾಯಿ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದೆ.

Read more Photos on
click me!

Recommended Stories