Vaibhav Sooryavanshi: ವೈಭವ್ ಸೂರ್ಯವಂಶಿಗೆ ಶಿಕ್ಷೆ ಕೊಡಿ ಎಂದವರಿಗೆ ಮುಟ್ಟಿ ನೋಡಿಕೊಳ್ಳೋ ಉತ್ತರ ಕೊಟ್ಟ ಬಿಸಿಸಿಐ!

Published : Jun 18, 2026, 09:22 PM IST

ಭಾರತ 'ಎ' ಮತ್ತು ಶ್ರೀಲಂಕಾ 'ಎ' ಪಂದ್ಯದ ವೇಳೆ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರನ ನಡುವೆ ನಡೆದ ಗಲಾಟೆಯ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದೆ.  ಇನ್ನು ವೈಭವ್‌ಗೆ ಶಿಕ್ಷೆ ಕೊಡಲೇಬೇಕು ಎಂದು ಪಟ್ಟು ಹಿಡಿದ ನೆಟ್ಟಿಗರಿಗೆ ಬಿಸಿಸಿಐ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ಕೊಟ್ಟಿದೆ.

PREV
15

ಭಾರತದ ಉದಯೋನ್ಮುಖ ಕ್ರಿಕೆಟ್ ತಾರೆ, 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತು ಶ್ರೀಲಂಕಾ 'ಎ' ತಂಡದ ಆಟಗಾರ ವಿಶೇನ್ ಹಲಂಬಗೆ ನಡುವೆ ಮೈದಾನದಲ್ಲಿ ನಡೆದ ಗಲಾಟೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈಭವ್ ವಿರುದ್ಧ ಬಿಸಿಸಿಐ (BCCI) ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ವದಂತಿಗಳು ಹರಡಿರುವ ಬೆನ್ನಲ್ಲೇ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

25

ಏನಿದು ಘಟನೆ?

ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಲಂಕಾ ಆಟಗಾರ ವಿಶೇನ್ ಹಲಂಬಗೆ ಅವರು ಭಾರತೀಯ ಬ್ಯಾಟರ್‌ಗಳ ಬಗ್ಗೆ ಪ್ರಚೋದನಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದರು ಎನ್ನಲಾಗಿದೆ. ಇದು ತಾರಕಕ್ಕೇರಿ ವೈಭವ್ ಸೂರ್ಯವಂಶಿ ಮತ್ತು ಹಲಂಬಗೆ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಇಬ್ಬರೂ ಪರಸ್ಪರ ಹತ್ತಿರ ಬಂದಾಗ, ವೈಭವ್ ಅವರು ಲಂಕಾ ಆಟಗಾರನನ್ನು ಕೈಯಿಂದ ತಳ್ಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

35

ಬಿಸಿಸಿಐ ಹೇಳಿದ್ದೇನು?

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, .ಬಿಸಿಸಿಐ ವೈಭವ್ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬ ವದಂತಿಗಳನ್ನು ನೋಡಿ ಆಶ್ಚರ್ಯವಾಯಿತು. ಮ್ಯಾಚ್ ರೆಫರಿಗಳ ಅಧಿಕಾರ ವ್ಯಾಪ್ತಿಯಲ್ಲಿ ಬಿಸಿಸಿಐ ಹಸ್ತಕ್ಷೇಪ ಮಾಡಬೇಕೆಂದು ನೀವು ಬಯಸುತ್ತೀರಾ? ಮೈದಾನದಲ್ಲಿ ನಡೆಯುವ ಘಟನೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಮ್ಯಾಚ್ ರೆಫರಿ ಮತ್ತು ಅಂಪೈರ್‌ಗಳಿದ್ದಾರೆ. ಬಿಸಿಸಿಐ ಅದರಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಹೊಂದಿಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ.

45

ಯಾರಿಗೆ ಎಷ್ಟು ದಂಡ?

ವರದಿಗಳ ಪ್ರಕಾರ, ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವೈಭವ್ ಸೂರ್ಯವಂಶಿ ಮತ್ತು ವಿಶೇನ್ ಹಲಂಬಗೆ ಇಬ್ಬರಿಗೂ ಅವರ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡ ವಿಧಿಸಲು ಶಿಫಾರಸು ಮಾಡಿದ್ದಾರೆ. ಅಲ್ಲದೆ, ಅಂಪೈರ್‌ಗಳ ಜೊತೆ ವಾಗ್ವಾದ ನಡೆಸಿದ ಕಾರಣಕ್ಕೆ ಭಾರತ ತಂಡದ ನಾಯಕ ತಿಲಕ್ ವರ್ಮಾ (Tilak Varma) ಅವರಿಗೆ ಶೇ. 30 ರಷ್ಟು ದಂಡ ವಿಧಿಸುವಂತೆ ಶಿಫಾರಸು ಮಾಡಲಾಗಿದೆ.

ಇದು 'ಎ' ತಂಡಗಳ ಪಂದ್ಯವಾಗಿರುವುದರಿಂದ ಐಸಿಸಿ ನೇರವಾಗಿ ದಂಡ ವಿಧಿಸುವುದಿಲ್ಲ. ಬದಲಾಗಿ ಮ್ಯಾಚ್ ರೆಫರಿ ನೀಡಿದ ವರದಿಯನ್ನು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ (BCCI ಮತ್ತು SLC) ಕಳುಹಿಸಲಾಗುತ್ತದೆ. ಈ ಮಂಡಳಿಗಳು ರೆಫರಿಯ ಶಿಫಾರಸನ್ನು ಒಪ್ಪಿ ದಂಡ ವಿಧಿಸಬೇಕೇ ಅಥವಾ ಬೇಡವೇ ಎಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿವೆ.

55

ತಿಲಕ್ ವರ್ಮಾ ವಾಗ್ವಾದಕ್ಕೆ ಕಾರಣವೇನು?

ಬೆಳಕಿನ ಕೊರತೆಯ ನಡುವೆಯೂ ಸೂಪರ್ ಓವರ್ ನಡೆಸುವಂತೆ ಅಂಪೈರ್‌ಗಳನ್ನು ಒತ್ತಾಯಿಸಿದ ಕಾರಣಕ್ಕೆ ತಿಲಕ್ ವರ್ಮಾ ಅವರು ದಂಡ ಎದುರಿಸುವಂತಾಗಿದೆ. ಮತ್ತೊಂದೆಡೆ, ಶ್ರೀಲಂಕಾದ ಹಿರಿಯ ಆಟಗಾರ ನಿರೋಶನ್ ಡಿಕ್ವೆಲ್ಲಾ ಕೂಡ ಅತಿಯಾದ ಅಪೀಲಿಂಗ್ ಮಾಡಿದ ಕಾರಣಕ್ಕೆ ರೆಫರಿಯಿಂದ ಎಚ್ಚರಿಕೆ ಅಥವಾ ದಂಡವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ವೈಭವ್ ಸೂರ್ಯವಂಶಿ ಅವರು ಬಿಸಿಸಿಐನಿಂದ ಯಾವುದೇ ಅಧಿಕೃತ ಅಮಾನತು ಅಥವಾ ದೊಡ್ಡ ಮಟ್ಟದ ಶಿಕ್ಷೆಗೆ ಒಳಗಾಗಿಲ್ಲ, ಕೇವಲ ದಂಡದ ಶಿಫಾರಸು ಮಾತ್ರ ನಡೆದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories