ಜಸ್ಪ್ರೀತ್ ಬುಮ್ರಾ ಸೇರಿ ಈ ಮೂವರಿಗೆ ಗೇಟ್‌ಪಾಸ್ ನೀಡಲು ಮುಂದಾದ್ರಾ ಕೋಚ್ ಗೌತಮ್ ಗಂಭೀರ್?

Published : Aug 06, 2025, 03:08 PM IST

ಬೆಂಗಳೂರು: 2025-27ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಸರಣಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 2-2ರ ಸಮಬಲದೊಂದಿಗೆ ಅಭಿಯಾನ ಮುಗಿಸಿದೆ. ಇದರ ಬೆನ್ನಲ್ಲೇ  ಗೌತಮ್ ಗಂಭೀರ್ ಈ ಮೂವರಿಗೆ ಟೆಸ್ಟ್‌ ನಿಂದ ಗೇಟ್‌ಪಾಸ್ ನೀಡುವ ಸಾಧ್ಯತೆ ದಟ್ಟವಾಗಿದೆ.

PREV
110

ಹಲವು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸ ಮಾಡಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಸಾಧಿಸಿ ತವರಿಗೆ ಮರಳಿದೆ.

210

ಭಾರತ ತಂಡದ ಬಹುತೇಕ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಆಟಗಾರರು ಸಾಧಾರಣ ಪ್ರದರ್ಶನ ತೋರಿ ನಿರಾಸೆ ಮೂಡಿಸಿದ್ದಾರೆ.

310

ಇನ್ನು ಕಠಿಣ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಹೆಸರುವಾಸಿಯಾಗಿರುವ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ಮುಂಬರುವ ದಿನಗಳಲ್ಲಿ ಈ ಮೂವರು ಕ್ರಿಕೆಟಿಗರಿಗೆ ಟೆಸ್ಟ್‌ ಕ್ರಿಕೆಟ್‌ನಿಂದ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

410

ಇನ್ನು ಗೌತಮ್ ಗಂಭೀರ್ ಕಾರಣದಿಂದಲೇ ಭಾರತ ಟೆಸ್ಟ್‌ ತಂಡದಿಂದ ಹಿರಿಯ ಆಟಗಾರರಾದ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್‌ ಮಾದರಿಗೆ ಗುಡ್ ಬೈ ಹೇಳಿದ್ರು ಎನ್ನುವ ಚರ್ಚೆ ನಡೆಯುತ್ತಲೇ ಇದೆ.

510

ಇದೀಗ ವರ್ಕ್‌ಲೋಡ್ ಕಾರಣದಿಂದಾಗಿ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ ಜಸ್ಪ್ರೀತ್ ಬುಮ್ರಾ ಅವರಿಗೆ ಟೆಸ್ಟ್ ಮಾದರಿಯಿಂದ ಗೇಟ್‌ಪಾಸ್ ನೀಡಲು ಗೌತಮ್ ಗಂಭೀರ್ ಚಿಂತಿಸುತ್ತಿದ್ದಾರೆ ಎಂದು ವರದಿಯಾಗಿದೆ.

610

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯ ಹೊರತಾಗಿಯೂ ಟೀಂ ಇಂಡಿಯಾ, ಇಂಗ್ಲೆಂಡ್‌ ಎದುರು ಎಜ್‌ಬಾಸ್ಟನ್ ಹಾಗೂ ದಿ ಓವಲ್ ಟೆಸ್ಟ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಬುಮ್ರಾಗೆ ಟೆಸ್ಟ್‌ನಿಂದ ಗೇಟ್‌ಪಾಸ್ ಸಿಕ್ಕಿದರೂ ಅಚ್ಚರಿಯೇನಿಲ್ಲ.

710

ಇನ್ನು 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾದರು. ಕರುಣ್ ನಾಯರ್ 4 ಪಂದ್ಯಗಳನ್ನಾಡಿ 8 ಇನ್ನಿಂಗ್ಸ್‌ಗಳಿಂದ ಕೇವಲ 205 ರನ್ ಬಾರಿಸಲಷ್ಟೇ ಶಕ್ತರಾದರು.

810

ಭಾರತ ತಂಡದಲ್ಲಿ ಅವಕಾಶಕ್ಕಾಗಿ ಸರ್ಫರಾಜ್ ಖಾನ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿದ್ದು, ಕರುಣ್‌ ನಾಯರ್‌ಗೆ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಹಾದಿಯಂತೂ ಅಲ್ಲ.

910

ಇನ್ನು ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನದ ಮೂಲಕ ರನ್ ರಾಶಿಯನ್ನೇ ಗುಡ್ಡೆಹಾಕಿದ್ದ ಚೆನ್ನೈ ಮೂಲದ ಸಾಯಿ ಸುದರ್ಶನ್ ಕೂಡಾ ಇಂಗ್ಲೆಂಡ್‌ ಎದುರಿನ ಟೆಸ್ಟ್ ಸರಣಿಯಲ್ಲಿ ಕಮಾಲ್ ಮಾಡಲು ಫೇಲ್ ಆದರು.

1010

ಸಾಯಿ ಸುದರ್ಶನ್ ಮೂರು ಟೆಸ್ಟ್‌ ಪಂದ್ಯಗಳ ಆರು ಇನ್ನಿಂಗ್ಸ್‌ಗಳಿಂದ 140 ರನ್ ಬಾರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಸಾಯಿಗೂ ಮುಂಬರುವ ದಿನಗಳಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರುಹರಿಸಬೇಕಾಗಿ ಬರಬಹುದು.

Read more Photos on
click me!

Recommended Stories