ಐಪಿಎಲ್ 2025: ರೂಲ್ಸ್‌ನಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್..!

First Published | Sep 2, 2024, 4:40 PM IST

ಮುಂಬರುವ 2025ರ ಐಪಿಎಲ್ ಟೂರ್ನಿಗಾಗಿ ಬಿಸಿಸಿಐ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಅಲ್ಲದೆ ಫ್ರಾಂಚೈಸಿಗಳೊಂದಿಗೆ ಸತತವಾಗಿ ಸಭೆಗಳನ್ನು ನಡೆಸುತ್ತಿದ್ದು, ಐಪಿಎಲ್ ಹೊಸ ನಿಯಮಗಳ ಕುರಿತು ಚರ್ಚೆ ನಡೆಸುತ್ತಿದೆ. ಇದರಿಂದಾಗಿ ಐಪಿಎಲ್ 2025 ಮೆಗಾ ಹರಾಜು ಕುತೂಹಲ ಹೆಚ್ಚಾಗುವಂತೆ ಮಾಡಿದೆ
 

ವಿರಾಟ್ ಕೊಹ್ಲಿ, ಐಪಿಎಲ್ 2025, ಐಪಿಎಲ್

ಬಿಸಿಸಿಐ ಮುಂಬರುವ 2025 ಐಪಿಎಲ್ ಟೂರ್ನಿಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಈ ಟೂರ್ನಿಗೂ ಮೊದಲು ಮೆಗಾ ಹರಾಜು ನಡೆಯಲಿದೆ. ಈ ಸಂದರ್ಭದಲ್ಲಿ, ಬಿಸಿಸಿಐ ಐಪಿಎಲ್‌ನಲ್ಲಿ ಹಲವಾರು ಹೊಸ ನಿಯಮಗಳನ್ನು ತರಲು ಮಾಸ್ಟರ್ ಪ್ಲಾನ್ ಮಾಡಿದೆ

ಈ ಕುರಿತಂತೆ ಬಿಸಿಸಿಐ ಶೀಘ್ರದಲ್ಲೇ ತನ್ನ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಹಿಂದೆ ಬಿಸಿಸಿಐ ಈ ವಿಷಯಗಳ ಕುರಿತು ಫ್ರಾಂಚೈಸಿಗಳೊಂದಿಗೆ ಹಲವಾರು ಬಾರಿ ಚರ್ಚೆ ನಡೆಸಿತ್ತು. ಆದರೆ, ಹಲವು ನಿಯಮಗಳು ಮತ್ತು ಬದಲಾವಣೆಗಳ ಕುರಿತು ಬಿಸಿಸಿಐ ಸಭೆಯಲ್ಲಿ  ಫ್ರಾಂಚೈಸಿಗಳು ಒಮ್ಮತಕ್ಕೆ ಬರಲಿಲ್ಲ. ಇದರಿಂದಾಗಿ ಬಿಸಿಸಿಐ ಆಗಲೇ ಅಂದುಕೊಂಡ ಬದಲಾವಣೆಗಳ ಕುರಿತು ತನ್ನ ನಿರ್ಧಾರವನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. 

Tap to resize

ಆದಾಗ್ಯೂ, ಆಟಗಾರರ ರೀಟೈನ್ ಸಂಬಂಧಿಸಿದ ನಿಯಮಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ. ಬಿಸಿಸಿಐ ಪ್ರಸ್ತುತ ದೇಶೀಯ ಮತ್ತು ಐಪಿಎಲ್ ಸೀಸನ್‌ಗೆ ಸಂಬಂಧಿಸಿದ ಎರಡು ಪ್ರಮುಖ ನಿಯಮಗಳ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ.

 ಈ ಪೈಕಿ ಐಪಿಎಲ್ ಮೆಗಾ ಹರಾಜಿಗೂ ಮುನ್ನ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು, ಒಂದೇ ಓವರ್‌ನಲ್ಲಿ ಎರಡು ಬೌನ್ಸರ್‌ಗಳಿಗೆ ಅವಕಾಶ ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬದಲಾಯಿಸುವುದರ ಕುರಿತಂತೆ ಬಿಸಿಸಿಐ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. 

ಪ್ರಸ್ತುತ ದೇಶೀಯ ಟಿ20 ಮತ್ತು ಐಪಿಎಲ್‌ನಲ್ಲಿ ಎರಡು ಬೌನ್ಸರ್‌ಗಳ ನಿಯಮವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. ಇದರ ಬಗ್ಗೆ ಮರುಚಿಂತನೆ ನಡೆಯುತ್ತಿದೆ.

Kohli Bouncer

ಕ್ರಿಕ್‌ಬಜ್‌ ವರದಿಯ ಪ್ರಕಾರ, ಈ ನಿಯಮಗಳ ಬಗ್ಗೆ ಸದ್ಯ ಪುರುಷರ ಟಿ20 ಅಂತರ-ರಾಜ್ಯ ಪಂದ್ಯಾವಳಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಗಮನಿಸಲಾಗುತ್ತಿದೆ. ಕಳೆದ ಋತುವಿನಲ್ಲಿ, ಎರಡು ಬೌನ್ಸರ್‌ಗಳ ನಿಯಮವನ್ನು ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ನಂತರ ಐಪಿಎಲ್‌ನಲ್ಲಿ ಪರಿಚಯಿಸಲಾಯಿತು. ಬೌಲರ್‌ಗಳು ಒಂದು ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲು ಇದು ಅವಕಾಶ ಮಾಡಿಕೊಟ್ಟಿತು.

ಒಂದೇ ಓವರ್‌ನಲ್ಲಿ ಎರಡು ಬೌನ್ಸರ್‌ಗಳು ಐಸಿಸಿ ನಿಯಮಗಳಿಗೆ ವಿರುದ್ಧವಾಗಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ 1 ಬೌನ್ಸರ್ ಮಾತ್ರ ಅವಕಾಶ ನೀಡಲಾಗಿದೆ. ಪ್ರಸ್ತುತ ಬಿಸಿಸಿಐ ಈ ನಿಯಮವನ್ನು ಪರಿಶೀಲಿಸುತ್ತಿದೆ. 

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಇನ್ನೂ ವಿವಾದ ನಡೆಯುತ್ತಿದೆ. ಅನೇಕ ಆಟಗಾರರು ಮತ್ತು ವಿಶ್ಲೇಷಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅಭಿಮಾನಿಗಳು ಮತ್ತು ಕ್ರಿಕೆಟ್ ಪರಿಣಿತರ ನಡುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಇತ್ತೀಚೆಗೆ ಈ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಇತ್ತೀಚೆಗೆ ಜಹೀರ್ ಖಾನ್ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಿಕೊಂಡಿದೆ. "ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನನಗೆ ಈ ನಿಯಮದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದು ಖಂಡಿತವಾಗಿಯೂ ಅನೇಕ ಭಾರತೀಯ ಆಟಗಾರರಿಗೆ ತಮ್ಮ ಪ್ರತಿಭೆಯನ್ನು  ಪ್ರದರ್ಶಿಸಲು ಅವಕಾಶವನ್ನು ನೀಡಿದೆ" ಎಂದು ಜಹೀರ್ ಹೇಳಿದರು.

Latest Videos

click me!