ನೂರಾರು ಆಟಗಾರರನ್ನು ಬದಲಿಸಿದರೂ ಆರ್‌ಸಿಬಿಗೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಏಕೆ? ಕೊನೆಗೂ ಬಯಲಾಯ್ತು ಸತ್ಯ..!

First Published | Aug 30, 2024, 1:58 PM IST

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ 17 ಆವೃತ್ತಿಗಳು ಯಶಸ್ವಿಯಾಗಿ ಮುಗಿದಿವೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಜಂಟಿ ಯಶಸ್ವಿ ತಂಡಗಳಾಗಿ ಹೊರಹೊಮ್ಮಿದರೆ, ಚೊಚ್ಚಲ ಆವೃತ್ತಿಯಿಂದಲೂ ಪಾಲ್ಗೊಳ್ಳುತ್ತಾ ಬಂದಿರುವ ಮೂರು ತಂಡಗಳು ಇದುವರೆಗೂ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂರು ತಂಡಗಳಿಗೆ ಯಾಕೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಜಗತ್ತಿನ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಏಕೆಂದರೆ ಕೋಟಿಗಟ್ಟಲೆ ಹಣವನ್ನು ಆಟಗಾರರು ಗಳಿಸುತ್ತಾರೆ  . ಐಪಿಎಲ್ ಟೂರ್ನಿಯಲ್ಲಿ ಆಡಿದ ಯಾವ ಆಟಗಾರನೂ ಇಲ್ಲಿಯವರೆಗೆ ನಷ್ಟ ಅನುಭವಿಸಿಲ್ಲ ಎಂದು ಇತಿಹಾಸ ಹೇಳುತ್ತದೆ.  

ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿಯನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇವೆ. ಈ ಎರಡು ತಂಡಗಳು ತಲಾ 5 ಬಾರಿ ಗೆದ್ದು ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿವೆ.

Latest Videos


ಇನ್ನು 2ನೇ ಸ್ಥಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 3 ಬಾರಿ ಟ್ರೋಫಿಯನ್ನು ಗೆದ್ದಿದೆ. ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಡೆಕ್ಕನ್ ಚಾರ್ಜರ್ಸ್, ರಾಜಸ್ಥಾನ್ ರಾಯಲ್ಸ್ ತಂಡಗಳು ತಲಾ ಒಂದು ಬಾರಿ ಮಾತ್ರ ಐಪಿಎಲ್ ಟ್ರೋಫಿಯನ್ನು ಗೆದ್ದಿವೆ.

ಆದರೆ, ಐಪಿಎಲ್ ಸೀಸನ್ ಆರಂಭದಿಂದಲೂ ಒಮ್ಮೆಯೂ ಟ್ರೋಫಿಯನ್ನು ಗೆಲ್ಲದ ತಂಡಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂ. 1 ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತು 3ನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡಗಳಿವೆ.

ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರೂನ್ ಗ್ರೀನ್ ಎಂಬ ದಿಗ್ಗಜ ಆಟಗಾರರಿದ್ದರೂ ಆರ್‌ಸಿಬಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. 

ಇಲ್ಲಿಯವರೆಗೆ ಆರ್‌ಸಿಬಿ ಫ್ರಾಂಚೈಸಿ 165 ಆಟಗಾರರನ್ನು ತಂಡದಲ್ಲಿ ಬದಲಾಯಿಸಿದರೂ ಒಮ್ಮೆಯೂ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ತಂಡದಲ್ಲಿ ಒಗ್ಗಟ್ಟಿನ ಕೊರತೆ ಎಂದೇ ಹೇಳಬಹುದು.

2ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವಿದೆ. ಇದುವರೆಗೆ 159 ಆಟಗಾರರನ್ನು ಬದಲಾಯಿಸಿದೆ. ಆದರೆ, ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಇದಕ್ಕೆ ತಂಡದಲ್ಲಿ  ಆತ್ಮವಿಶ್ವಾಸದ ಕೊರತೆ, ಮಹತ್ವದ ಪಂದ್ಯಗಳಲ್ಲಿ ಆಟಗಾರರು ವೈಪಲ್ಯ ಅನುಭವಿಸುವುದೇ ಕಾರಣ ಎನಿಸಿದೆ. 
 

ಇದರ ನಂತರ ಕೊನೆಯ ಸ್ಥಾನದಲ್ಲಿರುವುದು ಪಂಜಾಬ್ ಕಿಂಗ್ಸ್. ಇದುವರೆಗೆ 156 ಆಟಗಾರರನ್ನು ಬದಲಾಯಿಸುವುದರ ಜೊತೆಗೆ 10 ನಾಯಕರನ್ನೂ ಬದಲಾಯಿಸಿದೆ. ಆದರೆ, ಏನೂ ಪ್ರಯೋಜನವಾಗಿಲ್ಲ.  ಇದಕ್ಕೆ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ಕೊರತೆ ಒಂದು ಕಾರಣ ಎನ್ನಲಾಗಿದೆ.

click me!