1. ವಿರಾಟ್ ಕೊಹ್ಲಿ: 7,263 ರನ್
ಐಪಿಎಲ್ ಚೊಚ್ಚಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ಪರ 237 ಪಂದ್ಯಗಳನ್ನಾಡಿ 7,263 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
2. ಎಬಿ ಡಿವಿಲಿಯರ್ಸ್: 4,491 ರನ್
ಆರ್‌ಸಿಬಿ ಪಾಲಿನ ಆಪತ್ಬಾಂಧವ ಎನಿಸಿಕೊಂಡಿದ್ದ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್, ಬೆಂಗಳೂರು ಪರ 156 ಐಪಿಎಲ್ ಪಂದ್ಯಗಳನ್ನಾಡಿ 4491 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.
3. ಕ್ರಿಸ್ ಗೇಲ್: 3,163 ರನ್
ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಪರ 85 ಐಪಿಎಲ್ ಪಂದ್ಯಗಳನ್ನಾಡಿ 3163 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
4. ಗ್ಲೆನ್ ಮ್ಯಾಕ್ಸ್‌ವೆಲ್: 1,214 ರನ್
ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಸದ್ಯ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ಪರ ಮ್ಯಾಕ್ಸಿ 1,214 ರನ್ ಸಿಡಿಸಿದ್ದಾರೆ.
5. ಫಾಫ್ ಡು ಪ್ಲೆಸಿಸ್: 1,198 ರನ್
ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಕಳೆದ ಎರಡು ಸೀಸನ್‌ಗಳಲ್ಲಿ ಅಮೋಘ ಪ್ರದರ್ಶನದ ಮೂಲಕ 1,198 ರನ್ ಸಿಡಿಸಿ, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
6. ಜಾಕ್ ಕಾಲಿಸ್: 1,132 ರನ್
ದಕ್ಷಿಣ ಆಫ್ರಿಕಾ ಮೂಲದ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್ ಆರ್‌ಸಿಬಿ ಪರ 42 ಪಂದ್ಯಗಳನ್ನಾಡಿ 1,132 ರನ್ ಬಾರಿಸುವ ಮೂಲಕ ಬೆಂಗಳೂರು ಪರ ಅತಿಹೆಚ್ಚು ರನ್ ಬಾರಿಸಿದ ಕ್ರಿಕೆಟಿಗರ ಪೈಕಿ ಆರನೇ ಸ್ಥಾನದಲ್ಲಿದ್ದಾರೆ.
7. ರಾಹುಲ್ ದ್ರಾವಿಡ್:
ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಆರ್‌ಸಿಬಿ ತಂಡದ ಮೊದಲ ನಾಯಕರಾಗಿದ್ದರು. ಆರ್‌ಸಿಬಿ ಪರ ದ್ರಾವಿಡ್ 43 ಪಂದ್ಯಗಳನ್ನಾಡಿ 898 ರನ್ ಸಿಡಿಸಿದ್ದಾರೆ.
8. ದೇವದತ್ ಪಡಿಕ್ಕಲ್:
ಕನ್ನಡಿಗ ದೇವದತ್ ಪಡಿಕ್ಕಲ್ ಆರ್‌ಸಿಬಿ ಪರ ಮೂರು ಸೀಸನ್‌ಗಳಿಂದ 29 ಪಂದ್ಯಗಳನ್ನಾಡಿ 883 ರನ್ ಸಿಡಿಸಿದ್ದಾರೆ. ಈ ಮೂಲಕ ಆರ್‌ಸಿಬಿ ಪರ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
9. ಪಾರ್ಥಿವ್ ಪಟೇಲ್: 731 ರನ್
ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ ಪಾರ್ಥಿವ್ ಪಟೇಲ್ ಬೆಂಗಳೂರು ತಂಡದ ಪರ 32 ಪಂದ್ಯಗಳನ್ನಾಡಿ 731 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.