IPL Auction: ಜೋಶ್ ಹೇಜಲ್‌ವುಡ್ ಮೇಲೆ ಹದ್ದಿಗಣ್ಣಿಟ್ಟಿವೆ ಈ ನಾಲ್ಕು IPL ಫ್ರಾಂಚೈಸಿಗಳು..!

First Published | Dec 4, 2023, 2:03 PM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತಮ್ಮ ಪ್ರೈಮ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಡಿಸೆಂಬರ್ 19ರಂದು ನಡೆಯಲಿರುವ ಆಟಗಾರರ ಹರಾಜಿನಲ್ಲಿ ಜೋಶ್ ಹೇಜಲ್‌ವುಡ್ ಖರೀದಿಸಲು ಈ ನಾಲ್ಕು ಫ್ರಾಂಚೈಸಿಗಳು ರಣತಂತ್ರ ಹೆಣೆದಿವೆ. ಅಷ್ಟಕ್ಕೂ ಯಾವುದವು 4 ಫ್ರಾಂಚೈಸಿಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಆಸ್ಟ್ರೇಲಿಯಾದ ಮಾರಕ ವೇಗಿ ಜೋಶ್ ಹೇಜಲ್‌ವುಡ್‌ ಇದುವರೆಗೂ 27 ಐಪಿಎಲ್ ಪಂದ್ಯಗಳನ್ನಾಡಿ 35 ವಿಕೆಟ್ ಕಬಳಿಸಿದ್ದಾರೆ. ಇದೀಗ ಹರಾಜಿನಲ್ಲಿ ಹೇಜಲ್‌ವುಡ್ ಮೂಲ ಬೆಲೆ ಎರಡು ಕೋಟಿ ರುಪಾಯಿ ನಿಗದಿಯಾಗಿದೆ.

1. ಕೋಲ್ಕತಾ ನೈಟ್ ರೈಡರ್ಸ್

ಜೋಶ್‌ ಹೇಜಲ್‌ವುಡ್ ಖರೀದಿಸಲು ಕೆಕೆಆರ್ ಫ್ರಾಂಚೈಸಿ ಹರಾಜಿನಲ್ಲಿ ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಕೆಕೆಆರ್ ತಂಡವು ಸದ್ಯ ಪ್ರಮುಖ ವೇಗದ ಬೌಲರ್ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಹೇಜಲ್‌ವುಡ್ ಖರೀದಿಸುವ ಸಾಧ್ಯತೆಯಿದೆ.
 

Latest Videos


ಮಹತ್ವದ ಘಟ್ಟದಲ್ಲಿ ವಿಕೆಟ್ ಕಬಳಿಸುವ ಕೌಶಲ ಕರಗತ ಮಾಡಿಕೊಂಡಿರುವ ಹೇಜಲ್‌ವುಡ್, ಹರಾಜಿನಲ್ಲಿ ಕೆಕೆಆರ್‌ಗೆ ಉತ್ತಮ ಆಯ್ಕೆ ಆಗಬಲ್ಲದು. ಈ ಕಾರಣಕ್ಕಾಗಿ ಕೋಲ್ಕತಾ ಫ್ರಾಂಚೈಸಿ ಆಸೀಸ್ ಅನುಭವಿ ವೇಗಿಗೆ ಹರಾಜಿನಲ್ಲಿ ಬಿಡ್ ಮಾಡುವ ಸಾಧ್ಯತೆಯಿದೆ.

2. ಲಖನೌ ಸೂಪರ್ ಜೈಂಟ್ಸ್‌

ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ದೇಶಿ ವೇಗಿ ಆವೇಶ್ ಖಾನ್ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಟ್ರೇಡ್ ಮಾಡಿರುವುದರಿಂದ ಈಗ ಹರಾಜಿನಲ್ಲಿ ಪ್ರಮುಖ ವೇಗಿಯ ಹುಡುಕಾಟದಲ್ಲಿದೆ.
 

ಹೇಜಲ್‌ವುಡ್ ಸಾಕಷ್ಟು ಅನುಭವಿ ಹಾಗೂ ಸ್ಥಿರ ಪ್ರದರ್ಶನ ನೀಡುವ ವೇಗದ ಬೌಲರ್ ಆಗಿರುವುದರಿಂದ ಆವೇಶ್‌ ಖಾನ್‌ಗೆ ಸೂಕ್ತ ರೀಪ್ಲೇಸ್‌ಮೆಂಟ್ ಆಗಬಲ್ಲರು. ಲಖನೌ ಪಾಳಯಕ್ಕೆ ಹೇಜಲ್‌ವುಡ್ ಸೇರಿಸಿಕೊಂಡರೆ ಕೆ ಎಲ್ ರಾಹುಲ್ ಪಡೆ ಮತ್ತಷ್ಟು ಬಲಾಢ್ಯವಾಗಲಿದೆ.

3. ಪಂಜಾಬ್ ಕಿಂಗ್ಸ್‌

ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಕೂಡಾ ಹೇಜಲ್‌ವುಡ್ ಖರೀದಿಸಲು ಉಳಿದ ಫ್ರಾಂಚೈಸಿಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಈಗಾಗಲೇ ಪಂಜಾಬ್ ಬಳಿ ಕಗಿಸೋ ರಬಾಡ ಹಾಗೂ ಆರ್ಶದೀಪ್ ಸಿಂಗ್ ಮಾರಕ ದಾಳಿ ನಡೆಸುತ್ತಿದ್ದಾರೆ.
 

ಇವರ ಜತೆಗೆ ಹೇಜಲ್‌ವುಡ್ ಕೂಡಾ ಪಂಜಾಬ್ ಕಿಂಗ್ಸ್ ಪಾಳಯ ಕೂಡಿಕೊಂಡರೆ ಬೌಲಿಂಗ್ ವಿಭಾಗ ಡೆಡ್ಲಿ ಕಾಂಬಿನೇಷನ್ ಎನಿಸಿಕೊಳ್ಳಲಿದೆ. ಹೀಗಾಗಿ ಹೇಜಲ್‌ವುಡ್ ಪಂಜಾಬ್ ಪಡೆ ಕೂಡಿಕೊಂಡರೂ ಅಚ್ಚರಿಯಿಲ್ಲ.

4. ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಅಚ್ಚರಿ ಎನಿಸಿದರೂ ಸತ್ಯ. ಆರ್‌ಸಿಬಿ ಫ್ರಾಂಚೈಸಿ ಮತ್ತೊಮ್ಮೆ ಹರಾಜಿನಲ್ಲಿ ಹೇಜಲ್‌ವುಡ್ ಖರೀದಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆರ್‌ಸಿಬಿ ಫ್ರಾಂಚೈಸಿಯು ಹೊಸ ತಂತ್ರಗಾರಿಕೆ ಮೂಲಕ ಹೇಜಲ್‌ವುಡ್ ಅವರನ್ನು ಹರಾಜಿನಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ.
 

32 ವರ್ಷದ ವೇಗಿ ಹೇಜಲ್‌ವುಡ್ ಕೊಂಚ ಕಡಿಮೆ ಮೊತ್ತಕ್ಕೆ ಹರಾಜಿನಲ್ಲಿ ಸಿಕ್ಕಿದರೆ ಖಂಡಿತವಾಗಿಯೂ ಆರ್‌ಸಿಬಿ ಫ್ರಾಂಚೈಸಿ ಈ ವೇಗಿಯನ್ನು ಖರೀದಿಸಲು ಒಲವು ತೋರುವ ಸಾಧ್ಯತೆಯಿದೆ. ಹೇಜಲ್‌ವುಡ್ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ನಿಮ್ಮ ಪ್ರಕಾರ ಹೇಜಲ್‌ವುಡ್ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವುದನ್ನು ಕಾಮೆಂಟ್ ಮಾಡಿ.

click me!