ಪ್ರತಿ ಐಪಿಎಲ್ ತಂಡದ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳಿವರು..! 2 ಟೀಂನಲ್ಲಿ ರಾಹುಲ್ ಟಾಪ್ ಸ್ಕೋರರ್

First Published | Dec 4, 2023, 12:57 PM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ ನಾವಿಂದು 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಪ್ರತಿ ತಂಡದ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
 

1. RCB-ವಿರಾಟ್ ಕೊಹ್ಲಿ-7,687 ರನ್

ಚೊಚ್ಚಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರ 7,687 ರನ್ ಬಾರಿಸುವ ಮೂಲಕ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
 

2. CSK-ಸುರೇಶ್ ರೈನಾ- 5,529 ರನ್

ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ, ಚೆನ್ನೈ ತಂಡದ ಯಶಸ್ಸಿನ ಪ್ರಮುಖ ಅಂಗವಾಗಿದ್ದರು. ಸಿಎಸ್‌ಕೆ ಪರ ರೈನಾ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
 

Latest Videos


3. MI-ರೋಹಿತ್ ಶರ್ಮಾ- 5,314 ರನ್

ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕನಾಗಿರುವ ರೋಹಿತ್ ಶರ್ಮಾ, ಮುಂಬೈ ಪರ ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಹಿಟ್‌ಮ್ಯಾನ್ 5,314 ರನ್ ಚಚ್ಚಿದ್ದಾರೆ.

4. SRH-ಡೇವಿಡ್ ವಾರ್ನರ್- 4,014 ರನ್

ಸನ್‌ರೈಸರ್ಸ್‌ ಹೈದರಾಬಾದ್‌ಗೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಡೇವಿಡ್ ವಾರ್ನರ್, ಆರೆಂಜ್ ಆರ್ಮಿ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸನ್‌ರೈಸರ್ಸ್ ಪರ ವಾರ್ನರ್ 4,014 ರನ್ ಸಿಡಿಸಿದ್ದಾರೆ.
 

5. RR- ಸಂಜು ಸ್ಯಾಮ್ಸನ್- 3,403 ರನ್

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ರಾಜಸ್ಥಾನ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ರಾಯಲ್ಸ್‌ ಪರ ಸಂಜು 3,403 ರನ್ ಸಿಡಿಸಿದ್ದಾರೆ.

6. KKR-ಗೌತಮ್ ಗಂಭೀರ್-3,345 ರನ್

ಕೋಲ್ಕತಾ ನೈಟ್‌ರೈಡರ್ಸ್‌ಗೆ ಎರಡು ಬಾರಿ ಟ್ರೋಫಿ ಗೆದ್ದುಕೊಟ್ಟ ನಾಯಕ ಗೌತಮ್ ಗಂಭೀರ್, ಕೆಕೆಆರ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಕೂಡಾ ಹೌದು. ಕೆಕೆಆರ್ ಪರ ಗಂಭೀರ್ 3,345 ರನ್ ಸಿಡಿಸಿದ್ದಾರೆ.
 

7. DC- ರಿಷಭ್ ಪಂತ್- 2,838 ರನ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ರಿಷಭ್ ಪಂತ್, ಡೆಲ್ಲಿ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಪಂತ್ ಡೆಲ್ಲಿ ಪರ 2,838 ರನ್ ಸಿಡಿಸಿದ್ದಾರೆ.
 

8. PBKS- ಕೆ ಎಲ್ ರಾಹುಲ್‌- 2,548 ರನ್

ಪಂಜಾಬ್ ಕಿಂಗ್ಸ್‌ ತಂಡದ ನಾಯಕರಾಗಿದ್ದ ಕೆ ಎಲ್ ರಾಹುಲ್ ಪಂಜಾಬ್ ಪರ ಅಮೋಘ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಪಂಜಾಬ್ ಕಿಂಗ್ಸ್‌ ಪರ 2,548 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

9. GT- ಶುಭ್‌ಮನ್ ಗಿಲ್-1,373 ರನ್

ಕಳೆದೆರಡು ಸೀಸನ್‌ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿ, ಇದೀಗ ನೂತನ ನಾಯಕನಾಗಿ ನೇಮಕವಾಗಿರುವ ಶುಭ್‌ಮನ್ ಗಿಲ್, ಗುಜರಾತ್ ತಂಡದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗಿಲ್, ಗುಜರಾತ್ ಪರ 1,373 ರನ್ ಚಚ್ಚಿದ್ದಾರೆ.
 

10. LSG- ಕೆ ಎಲ್ ರಾಹುಲ್ - 890 ರನ್

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ತಮ್ಮ ತಂಡದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಲಖನೌ ಪರ ರಾಹುಲ್ ಕಳೆದೆರಡು ಸೀಸನ್‌ಗಳಿಂದ 890 ರನ್ ಬಾರಿಸಿದ್ದಾರೆ.
 

click me!