ಪಾಕ್ ಕ್ರಿಕೆಟರ್ ಶೋಯೆಬ್ ಮಲಿಕ್ ಜೊತೆ ಸಂಬಂಧ: ಮೌನ ಮುರಿದ ನಟಿ ಆಯೇಶಾ ಒಮರ್
First Published | Feb 23, 2023, 5:33 PM ISTಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಮತ್ತು ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(sania Mirza) ಅವರ ವಿಚ್ಛೇದನದ ವರದಿಗಳು ಕಳೆದ ವರ್ಷದಿಂದ ಹರಿದಾಡುತ್ತಿವೆ. ಶೋಯೆಬ್ ಅಥವಾ ಸಾನಿಯಾ ತಮ್ಮ ಬ್ರೇಕಪ್ ಅನ್ನು ಸಾರ್ವಜನಿಕವಾಗಿ ತಿಳಿಸದಿದ್ದರೂ, ಪಾಕಿಸ್ತಾನಿ ನಟಿ ಆಯೇಶಾ ಒಮರ್ (Ayesha Omar) ಅವರೊಂದಿಗಿನ ಶೋಯೆಬ್ ಅವರ ಸಂಬಂಧದ ಬಗ್ಗೆ ವದಂತಿಗಳು ಕೂಡ ಸುದ್ದಿ ಮಾಡುತ್ತಿವೆ. ಈ ನಡುವೆ ಆಯೇಶಾ ಒಮರ್ ಚಾಟ್ ಶೋವೊಂದರಲ್ಲಿ ಶೋಯಬ್ ಜೊತೆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.