IPL 2023 ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ನೂತನ ನಾಯಕ ಆಯ್ಕೆ..! ಚಾಂಪಿಯನ್‌ ಕ್ಯಾಪ್ಟನ್‌ಗೆ ಪಟ್ಟ

Published : Feb 23, 2023, 05:12 PM IST

ಹೈದರಾಬಾದ್‌(ಫೆ.23): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಲ್ಲಾ ಹತ್ತು ತಂಡಗಳು ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಇದೀಗ 2016ನೇ ಸಾಲಿನ ಐಪಿಎಲ್ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಚಾಂಪಿಯನ್ ಆಟಗಾರನಿಗೆ ನಾಯಕ ಪಟ್ಟ ಕಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

PREV
17
IPL 2023 ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ನೂತನ ನಾಯಕ ಆಯ್ಕೆ..! ಚಾಂಪಿಯನ್‌ ಕ್ಯಾಪ್ಟನ್‌ಗೆ ಪಟ್ಟ

2016ರ ಐಪಿಎಲ್‌ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇನ್‌ ವಿಲಿಯಮ್ಸನ್ ನೇತೃತ್ವದಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
 

27

ಇದರ ಬೆನ್ನಲ್ಲೇ ತಂಡದಲ್ಲಿ ಮೇಜರ್‌ ಸರ್ಜರಿ ನಡೆದಿತ್ತು. ಸನ್‌ರೈಸರ್ಸ್‌ ಫ್ರಾಂಚೈಸಿಯು ತನ್ನ ನಾಯಕ ಕೇನ್ ವಿಲಿಯಮ್ಸನ್‌ ಸೇರಿದಂತೆ 12 ಆಟಗಾರರಿಗೆ ಆರೆಂಜ್‌ ಆರ್ಮಿಯಿಂದ ಗೇಟ್‌ಪಾಸ್ ನೀಡಲಾಗಿತ್ತು.

37

ಇನ್ನು ಇದಾದ ಬಳಿಕ ಕೊಚ್ಚಿಯಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ಹ್ಯಾರಿ ಬ್ರೂಕ್‌, ಮಯಾಂಕ್‌ ಅಗರ್‌ವಾಲ್‌ ಸೇರಿದಂತೆ ತಮಗೆ ಬೇಕಾದ 13 ಆಟಗಾರರನ್ನು ಖರೀದಿಸಿತ್ತು. 
 

47

ಇದೀಗ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಇನ್ನೂ 35 ದಿನಗಳು ಬಾಕಿ ಇರುವಾಗಲೇ ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾದ ಬ್ಯಾಟರ್ ಏಯ್ಡನ್‌ ಮಾರ್ಕ್‌ರಮ್‌ಗೆ ನಾಯಕ ಪಟ್ಟ ಕಟ್ಟಿದೆ.
 

57

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಏಯ್ಡನ್‌ ಮಾರ್ಕ್‌ರಮ್ ನೇತೃತ್ವದ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್ ತಂಡವು ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 

67

ಇದಕ್ಕೂ ಮೊದಲು 2014ರಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಏಯ್ಡನ್‌ ಮಾರ್ಕ್‌ರಮ್‌ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ಎರಡು ಮಹತ್ವದ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಮಾರ್ಕ್‌ರಮ್‌ ಮೇಲೆ ಹೈದರಾಬಾದ್‌ ಫ್ರಾಂಚೈಸಿಯು ಸಾಕಷ್ಟು ವಿಶ್ವಾಸವಿಟ್ಟು ನಾಯಕ ಪಟ್ಟ ಕಟ್ಟಿದೆ.

77

ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಮಯಾಂಕ್ ಅಗರ್‌ವಾಲ್‌, ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ಆಟಗಾರರಿದ್ದರೂ, ಈ ಇಬ್ಬರನ್ನು ಹಿಂದಿಕ್ಕಿ ಏಯ್ಡನ್ ಮಾರ್ಕ್‌ರಮ್‌ ಇದೀಗ ಆರೆಂಜ್ ಆರ್ಮಿ ಕ್ಯಾಪ್ಟನ್ ಆಗಿ ನೇಮಕವಾಗಿದ್ದು, ಮತ್ತೊಮ್ಮೆ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories