Australian Legendary Cricketer ರಿಕಿ ಪಾಂಟಿಂಗ್ ಟೀಂ ಇಂಡಿಯಾ ಹೆಡ್‌ ಕೋಚ್ ಹುದ್ದೆ ಅಫರ್‌ ನಿರಾಕರಿಸಿದ್ದೇಕೆ..?

Suvarna News   | Asianet News
Published : Nov 19, 2021, 03:20 PM ISTUpdated : Nov 19, 2021, 03:22 PM IST

ಮೆಲ್ಬರ್ನ್‌: ರವಿಶಾಸ್ತ್ರಿ (Ravi Shastri) ಕೋಚ್ ಒಪ್ಪಂದಾವಧಿ ಮುಕ್ತಾಯದ ಬಳಿಕ ಬಿಸಿಸಿಐ (BCCI) ಹೊಸ ಕೋಚ್ ಹುಡುಕಾಟದಲ್ಲಿತ್ತು. ಈ ವೇಳೆ ತಮ್ಮನ್ನು ಕೋಚ್ ಆಗಲು ಕೇಳಿಕೊಂಡಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಹೇಳಿದ್ದಾರೆ. ಆದರೆ ಬಿಸಿಸಿಐ ಆಫರ್‌ ನಿರಾಕರಿಸಿದ್ದಾಗಿಯೂ ಪಂಟರ್ ತಿಳಿಸಿದ್ದಾರೆ. ಇದೇ ವೇಳೆ ರಾಹುಲ್ ದ್ರಾವಿಡ್ (Rahul Dravid) ಕೋಚ್ ಆಗಲು ಒಪ್ಪಿಕೊಂಡಿದ್ದಕ್ಕೆ ಪಾಂಟಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

PREV
17
Australian Legendary Cricketer ರಿಕಿ ಪಾಂಟಿಂಗ್ ಟೀಂ ಇಂಡಿಯಾ ಹೆಡ್‌ ಕೋಚ್ ಹುದ್ದೆ ಅಫರ್‌ ನಿರಾಕರಿಸಿದ್ದೇಕೆ..?

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅಭಿಯಾನ ಅಂತ್ಯವಾಗುತ್ತಿದ್ದಂತೆಯೇ ಕೋಚ್ ಆಗಿದ್ದ ರವಿಶಾಸ್ತ್ರಿಯೊಂದಿಗಿನ ಒಪ್ಪಂದಾವಧಿ ಕೂಡಾ ಅಂತ್ಯವಾಗಿತ್ತು. ಹೀಗಾಗಿ ಬಿಸಿಸಿಐ ಹೊಸ ಕೋಚ್ ಹುಡುಕಾಟ ನಡೆಸಿತ್ತು.

27

ಇದೀಗ 'ದ ವಾಲ್‌' ಖ್ಯಾತಿಯ ರಾಹುಲ್ ದ್ರಾವಿಡ್‌ ಟೀಂ ಇಂಡಿಯಾ ನೂತನ ಹೆಡ್‌ ಕೋಚ್ ಆಗಿ ನೇಮಕವಾಗಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಈಗಾಗಲೇ ಶುಭಾರಂಭ ಮಾಡಿದೆ. 

37

ಇನ್ನು ರಾಹುಲ್‌ ದ್ರಾವಿಡ್‌ಗೂ ಮೊದಲು ಭಾರತ ತಂಡದ ಕೋಚ್‌ ಆಗುವಂತೆ ನನ್ನನ್ನು ಬಿಸಿಸಿಐ ಕೇಳಿತ್ತು ಎಂದು ಆಸ್ಪ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

47

‘ಐಪಿಎಲ್‌ ವೇಳೆ ಭಾರತ ತಂಡದ ಕೋಚ್‌ ಹುದ್ದೆ ಬಗ್ಗೆ ಹಲವು ಬಾರಿ ಚರ್ಚೆ ನಡೆಯಿತು. ನನ್ನ ಬಳಿ ಪ್ರಸ್ತಾಪವಿರಿಸಿದ ಹಿರಿಯ ಅಧಿಕಾರಿ ಏನೇ ಆದರೂ ನನ್ನ ಮನವೊಲಿಸಬೇಕು ಎಂದು ಬಹಳ ಪ್ರಯತ್ನ ಪಟ್ಟರು’ ಎಂದು ಪಾಂಟಿಂಗ್‌ ಹೇಳಿಕೊಂಡಿದ್ದಾರೆ.

57

‘ವರ್ಷದಲ್ಲಿ 300 ದಿನ ನಾನು ನನ್ನ ಕುಟುಂಬವನ್ನು ಬಿಟ್ಟು ಭಾರತ ತಂಡದೊಂದಿಗೆ ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಾನು ಕೋಚ್‌ ಆಗಲು ಒಪ್ಪಿಕೊಳ್ಳಲಿಲ್ಲ’ ಎಂದಿರುವ ಪಾಂಟಿಂಗ್‌, ದ್ರಾವಿಡ್‌ ಕೋಚ್‌ ಆಗಲು ಒಪ್ಪಿಕೊಂಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

67
Ricky Ponting

ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು, ಪಾಂಟಿಂಗ್ ಆಸೀಸ್‌ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. 

77

ರಿಕಿ ಪಾಂಟಿಂಗ್ ಸದ್ಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಂಟಿಂಗ್ ಮಾರ್ಗದರ್ಶನದಲ್ಲಿ ಡೆಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ.

Read more Photos on
click me!

Recommended Stories