IPL 2022: ಹರಾಜಿಗೂ ಮುನ್ನ Mumbai Indians ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು..!

First Published Nov 18, 2021, 8:18 PM IST

ಬೆಂಗಳೂರು: ಐಪಿಎಲ್‌(IPL) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿದ್ದರೇ ಅದು ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್. ಐಪಿಎಲ್ ಇತಿಹಾಸದಲ್ಲಿ 5 ಟ್ರೋಫಿಗಳನ್ನು ಜಯಿಸಿದ ಏಕೈಕ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ (Mumbai Indians) ಇದೀಗ 15ನೇ ಆವೃತ್ತಿಯ ಐಪಿಎಲ್‌ಗೆ (IPL 2022) ಸಜ್ಜಾಗಿದೆ. 2022ರ ಐಪಿಎಲ್‌ ಟೂರ್ನಿಗಾಗಿ ನಡೆಯುವ ಮೆಗಾ ಹರಾಜಿಗೂ (IPL Mega Auction) ಮುನ್ನ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಮುಂಬೈ ಫ್ರಾಂಚೈಸಿ ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

1. ರೋಹಿತ್ ಶರ್ಮಾ:
2011ರಿಂದಲೂ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.

Rohit Sharma

ರೋಹಿತ್ ಶರ್ಮಾ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ತಂಡವು 2013, 2015, 2017, 2019 ಹಾಗೂ 2020ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಮುಂಬೈ ಫ್ರಾಂಚೈಸಿ ಆದ್ಯತೆಯ ಮೇರೆಗೆ ರೋಹಿತ್ ಶರ್ಮಾ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.

Kieron Pollard

2. ಕೀರನ್ ಪೊಲ್ಲಾರ್ಡ್
ಕೆರಿಬಿಯನ್ ಮೂಲದ ದೈತ್ಯ ಕ್ರಿಕೆಟಿಗ ಕೀರನ್ ಪೊಲ್ಲಾರ್ಡ್ ಕೂಡಾ ಮುಂಬೈ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಮುಂಬೈ ಪರ 178 ಪಂದ್ಯಗಳನ್ನಾಡಿ 3,268 ರನ್ ಹಾಗೂ 65 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಪ್ರತಿ ಆವೃತ್ತಿಯಲ್ಲೂ ಪೊಲ್ಲಾರ್ಡ್‌ ಮುಂಬೈ ಫ್ರಾಂಚೈಸಿಯ ನಂಬಿಕೆ ಉಳಿಸಿಕೊಳ್ಳುತ್ತಲೇ ಬಂದಿದ್ದಾರೆ. ಬೆಸ್ಟ್ ಫಿನಿಶರ್ ಎನಿಸಿಕೊಂಡಿರುವ ಪೊಲ್ಲಾರ್ಡ್‌ ಅವರನ್ನು ಮುಂಬೈ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡರೆ ಅಚ್ಚರಿಪಡುವಂತಹದ್ದು ಏನೂ ಇಲ್ಲ.

Mumbai Indians

3. ಜಸ್‌ಪ್ರೀತ್ ಬುಮ್ರಾ:
ತಮ್ಮ ಕರಾರುವಕ್ಕಾದ ಯಾರ್ಕರ್‌ ಮೂಲಕ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯವಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಮುಂಬೈ ಫ್ರಾಂಚೈಸಿ ನಿಸ್ಸಂಶಯವಾಗಿ ರೀಟೈನ್ ಮಾಡಿಕೊಳ್ಳಲಿದೆ.

2013ರಲ್ಲಿ ಮುಂಬೈ ತಂಡ ಕೂಡಿಕೊಂಡ ಬುಮ್ರಾ, ಸದ್ಯ ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ನಂಬಿಗಸ್ತ ಡೆತ್ ಓವರ್‌ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಖಚಿತವಾಗಿ ಮುಂಬೈ ಫ್ರಾಂಚೈಸಿ ಬುಮ್ರಾ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.

4. ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಭಾರತದ ಮಿಸ್ಟರ್ 360 ಬ್ಯಾಟರ್ ಎಂದು ಗುರುತಿಸಿಕೊಂಡಿದ್ದಾರೆ. ಯಾವುದೇ ಮೈದಾನದಲ್ಲಾದರೂ, ಯಾವುದೇ ಬೌಲರ್‌ಗಳ ಎದುರು ನಿರರ್ಗಳವಾಗಿ ಬ್ಯಾಟ್ ಬೀಸುವ ಕ್ಷಮತೆ ಸೂರ್ಯಕುಮಾರ್ ಯಾದವ್‌ಗಿದೆ.
 

ಮಹಾರಾಷ್ಟ್ರ ಮೂಲದ ಸೂರ್ಯ 2011ರಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ 2014ರಲ್ಲಿ ಕೆಕೆಆರ್ ಪಾಲಾಗಿದ್ದರು. ಇನ್ನು 2018ರಲ್ಲಿ ಮತ್ತೆ ಮುಂಬೈ ತಂಡ ಕೂಡಿಕೊಂಡು ರನ್‌ ಮಳೆ ಹರಿಸುತ್ತಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಅವರನ್ನು ಮುಂಬೈ ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. 
 

click me!