ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸದ ಅದೃಷ್ಠ

Published : Sep 21, 2025, 08:29 PM IST

ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸದ ಅದೃಷ್ಠ, ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಕ್ ನೀಡುವ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಇದಕ್ಕೆ ನಾಯಕ ಸೂರ್ಯುಕಮಾರ್ ಯಾದವ್ ಪ್ರತಿಕ್ರಿಯೆ ಏನು?

PREV
15
ಆರಂಭದಲ್ಲೇ ಪಾಕಿಸ್ತಾನಕ್ಕೆ ಲಕ್

ಆರಂಭದಲ್ಲೇ ಪಾಕಿಸ್ತಾನಕ್ಕೆ ಲಕ್

ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತ್ತು. ಆದರೆ ಪಂದ್ಯ ಆರಂಭಗೊಂಡ ಬೆನ್ನಲ್ಲೇ ಭಾರತ ಮಾಡಿದ ಎಡವಟ್ಟು, ಪಾಕಿಸ್ತಾನಕ್ಕೆ ವರದಾನವಾಗಿದೆ. ಆರಂಭದಲ್ಲೇ ಟೀಂ ಇಂಡಿಯಾ ಕ್ಯಾಚ್ ಕೈಚೆಲ್ಲಿ ದುಬಾರಿಯಾಗಿದೆ. ಆದರೆ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ ಹಲವರಿಗೆ ಅಚ್ಚರಿ ಮೂಡಿಸಿದೆ.

25
ಕ್ಯಾಚ್ ಕೈಚೆಲ್ಲಿದ ಅಭಿಶೇಕ್ ಶರ್ಮಾ

ಕ್ಯಾಚ್ ಕೈಚೆಲ್ಲಿದ ಅಭಿಶೇಕ್ ಶರ್ಮಾ

ಹಾರ್ದಿಕ್ ಪಾಂಡ್ಯ ಅವರ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಪಾಕಿಸ್ತಾನದ ಮೊದಲ ವಿಕೆಟ್ ಕಬಳಿಸುವ ಅವಕಾಶ ಭಾರತಕ್ಕಿತ್ತು. ಧರ್ಡ್ ಮ್ಯಾನ್ ಸ್ಲಿಪ್‌ನಲ್ಲಿದ್ದ ಅಭಿಷೇಕ್ ಶರ್ಮಾ ಕ್ಯಾಲ್ಕುಲೇಶನ್ ತಪ್ಪಾಗಿತ್ತು. ಶಾಹೀಬ್‌ಜದಾ ಫರ್ಹಾನ್ ಹೊಡೆತ ಕ್ಯಾಚ್ ಆಗಿ ಬಂದಿತ್ತು. ಆದರೆ ಶರ್ಮಾ ಡ್ರಾಪ್ ಮಾಡಿದ್ದರು.

35
ಟೀಂ ಇಂಡಿಯಾ ಪ್ರತಿದಾಳಿ

ಟೀಂ ಇಂಡಿಯಾ ಪ್ರತಿದಾಳಿ

ಸೂಪರ್ 4 ಹಂತದ ಪ್ರತಿಯೊಂದು ಎಸೆತ ಕೂಡ ಅಷ್ಟೇ ಮುಖ್ಯ. ಜೀವದಾನ ಪಡೆದ ಫರ್ಹಾನ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ್ದಾರೆ. ಇತ್ತ ಟೀಂ ಇಂಡಿಯಾ ಪ್ರತಿದಾಳಿ ನಡೆಸಿ ಫಕರ್ ಜಮಾನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ಈ ಪ್ರತಿದಾಳಿಗೆ ನಾಯಕ ಸೂರ್ಯಕುಮಾರ್ ಯಾದವ್ ನಡೆ ಪ್ರಮುಖ ಕಾರಣವಾಗಿದೆ.

45
ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಕ್ಯಾಚ್ ಕೈಚೆಲ್ಲಿದ ತಕ್ಷಣ ಸೂರ್ಯಕುಮಾರ್ ಯಾದವ್ ಆಕ್ರೋಶಗೊಳ್ಳಲಿಲ್ಲ. ಅಭಿಶೇಕ್ ಶರ್ಮಾರನ್ನು ದುರುಗುಟ್ಟಿ ನೋಡಲಿಲ್ಲ. ಆಕ್ರೋಶದಿಂದ ಮಾತನಾಡಿಸಲಿಲ್ಲ. ತಾಳ್ಮೆಯಿಂದ ಇದ್ದ ಸೂರ್ಯಕುಮಾರ್ ಯಾದವ್, ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ, ಪಂದ್ಯದ ಮೇಲೆ ಗಮನ ಇರಲಿ ಎಂದಿದ್ದಾರೆ.

55
ಭಾರತಕ್ಕೆ ಆರಂಭಿಕ ಗೆಲುವು

ಫರ್ಹಾನ್ ವಿಕೆಟ್ ಅವಕಾಶ ಕೈತಪ್ಪಿದರೂ ಹಾರ್ದಿಕ್ ಪಾಂಡ್ಯ ಮರು ಓವರ್‌ನಲ್ಲಿ ಫಕರ್ ಜಮಾನ್ ವಿಕೆಟ್ ಕಬಳಿಸಿದ್ದಾರೆ. 3 ಬೌಂಡರಿ ಸಿಡಿಸಿ ಅಬ್ಬರಿಸಿದ್ದ ಫಕರ್ ಜಮಾನ್ 15 ರನ್ ಸಿಡಿಸಿ ಔಟಾದರು. ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿ ಜಮಾನ್ ಪೆವಿಲಿಯನ್ ಸೇರಿಕೊಂಡರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories