2025ರ ಏಷ್ಯಾಕಪ್ ಸೂಪರ್-4 ಹಂತದಲ್ಲಿ ಸೂರ್ಯಕುಮาร์ ಯಾದವ್ ನೇತೃತ್ವದ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ. ಗ್ರൂಪ್ ಹಂತದಲ್ಲಿ ಈಗಾಗಲೇ ಪಾಕಿಸ್ತಾನವನ್ನು ಸೋಲಿಸಿರುವ ಟೀಂ ಇಂಡಿಯಾ, ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.
2025ರ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಗ್ರೂಪ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ, 'ಎ' ಗುಂಪಿನ ಟೇಬಲ್ ಟಾಪರ್ ಆಗಿ ಸೂಪರ್-4 ಹಂತ ಪ್ರವೇಶಿಸಿದೆ.
27
ಗ್ರೂಪ್ ಹಂತದಲ್ಲಿ ಪಾಕ್ ಮಣಿಸಿದ್ದ ಭಾರತ
ಇದೀಗ ಭಾರತ ತನ್ನ ಪಾಲಿನ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಗ್ರೂಪ್ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಭಾರತ 7 ವಿಕೆಟ್ ಅಂತರದಲ್ಲಿ ಬಗ್ಗುಬಡಿದಿತ್ತು.
37
ಇಂದು ಮತ್ತೊಮ್ಮೆ ಭಾರತ-ಪಾಕ್ ಫೈಟ್
ಇದೀಗ ಇಂದು ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಪಾಕಿಸ್ತಾನ ಎದುರು ಭಾರತ ಕಾದಾಡಲಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. ಭಾರತ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಪಂದ್ಯವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ನೇರಪ್ರಸಾರವಾಗಲಿದೆ. ಇದಲ್ಲದೇ ಸೋನಿ ಲೈವ್, ಫ್ಯಾನ್ ಕೋಡ್ ಓಟಿಟಿ ಪ್ಲಾಟ್‌ಫಾರಂನಲ್ಲೂ ಇಂಡೋ-ಪಾಕ್ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
57
ಇಂದು ಸಂಜೆ 7.30ಕ್ಕೆ ಟಾಸ್
ಇನ್ನುಳಿದಂತೆ ಈ ಪಂದ್ಯದ ಟಾಸ್ ಸಂಜೆ 7.30ಕ್ಕೆ ನಡೆಯಲಿದ್ದು, ಎಂಟು ಗಂಟೆಗೆ ಸರಿಯಾಗಿ ಈ ಮ್ಯಾಚ್ ಅಧಿಕೃತವಾಗಿ ಆರಂಭವಾಗಲಿದೆ. ಕಳೆದ ಬಾರಿ ಟಾಸ್ ಬಳಿಕ ಉಭಯ ತಂಡಗಳ ನಾಯಕ ಶೇಕ್‌ಹ್ಯಾಂಡ್ ಮಾಡಿರಲಿಲ್ಲ. ಇದು ಹೆಚ್ಚು ಗಮನ ಸೆಳೆದಿತ್ತು.
67
ದುಬೈ ಸ್ಟೇಡಿಯಂ ಟ್ರ್ಯಾಕ್ ರೆಕಾರ್ಡ್
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಉಭಯ ತಂಡಗಳು ಒಟ್ಟು 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ತಲಾ 2 ಮ್ಯಾಚ್ ಗೆದ್ದು ಬೀಗಿವೆ.
77
ಟಾಸ್ ಮಹತ್ವದ ಪಾತ್ರ ವಹಿಸೋ ಸಾಧ್ಯತೆ
ಇನ್ನು ಈ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ. ಈ ಮೊದಲು ಇಲ್ಲಿ ಟಾಸ್ ಗೆದ್ದ ತಂಡವೇ ಹೆಚ್ಚು ಬಾರಿ ಮ್ಯಾಚ್ ಗೆದ್ದಿವೆ.