Asia Cup ಫೈನಲ್‌: ಭಾರತದ ಪ್ಲೇಯಿಂಗ್ 11 ನಲ್ಲಿ ಮೇಜರ್ ಚೇಂಜ್! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಶನ್

Published : Sep 27, 2025, 03:55 PM IST

ದುಬೈ: 2025ರ ಏಷ್ಯಾಕಪ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಫೈನಲ್‌ನಲ್ಲಿ ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.ಇದರ ಜತೆಗೆ ಗಾಯದ ಸಮಸ್ಯೆ ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

PREV
18
ಶ್ರೀಲಂಕಾ ಸೋಲಿಸಿದ ಟೀಂ ಇಂಡಿಯಾ

2025ರ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಹೋರಾಡಿ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ.

28
ಭಾರತ-ಪಾಕಿಸ್ತಾನ ಫೈಟ್

ಇದೀಗ ಸೆಪ್ಟೆಂಬರ್ 28ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಏಷ್ಯಾಕಪ್ ಫೈನಲ್‌ನಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಅಂದಹಾಗೆ ಭಾರತ ತಂಡವು ಈ ಬಾರಿಯ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.

38
ಪಾಕ್ ಮೇಲೆ ಹ್ಯಾಟ್ರಿಕ್ ಗೆಲುವು?

ಈಗಾಗಲೇ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಎರಡೆರಡು ಬಾರಿ ಸೋಲಿಸಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಏಷ್ಯಾಕಪ್‌ ಫೈನಲ್ ಪ್ಲೇಯಿಂಗ್ 11 ನಲ್ಲಿ ಕೆಲ ಬದಲಾವಣೆಗಳಾಗಲಿದ್ದು, ಗಾಯದ ಸಮಸ್ಯೆ ಟೀಂ ಇಂಡಿಯಾ ತಲೆನೋವು ಹೆಚ್ಚಿಸುವಂತೆ ಮಾಡಿದೆ.

48
ದುಬೆ-ಬುಮ್ರಾಗೆ ರೆಸ್ಟ್ ನೀಡಿದ್ದ ಭಾರತ

ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಶಿವಂ ದುಬೆ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ, ಅರ್ಶದೀಪ್ ಸಿಂಗ್ ಹಾಗೂ ಹರ್ಷಿತ್‌ ರಾಣಾಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿತ್ತು. ಆದರೆ ಅರ್ಶದೀಪ್ ಹಾಗೂ ರಾಣಾ ನಿರಾಸೆ ಮೂಡಿಸಿದರು.

58
ಫೈನಲ್ ಆಡಲು ರೆಡಿಯಾದ ಬುಮ್ರಾ, ದುಬೆ

ಹೀಗಾಗಿ ಮಹತ್ವದ ಫೈನಲ್‌ ಪಂದ್ಯಕ್ಕೆ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸ್ಟಾರ್ ಆಲ್ರೌಂಡರ್ ಶಿವಂ ದುಬೆ ಭಾರತ ತಂಡ ಕೂಡಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ.

68
ಪಾಂಡ್ಯಗೆ ಗಾಯದ ಭೀತಿ!

ಇನ್ನು ಹಾರ್ದಿಕ್ ಪಾಂಡ್ಯ, ಶ್ರೀಲಂಕಾ ಎದುರು ಮೊದಲ ಓವರ್ ಬೌಲಿಂಗ್ ಮಾಡಿದರು. ಆದರೆ ಇದಾದ ಬಳಿಕ ಫೀಲ್ಡಿಂಗ್ ಮಾಡುವಾಗ ಕಾಣಿಸಿಕೊಳ್ಳಲಿಲ್ಲ. ಪಾಂಡ್ಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಿದ್ದರು.

78
ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಅಭಿಷೇಕ್ ಶರ್ಮಾ

ಇನ್ನು ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡಾ ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಸಂಪೂರ್ಣ ಫಿಟ್ ಆಗಿರುವಂತೆ ಕಾಣಿಸುತ್ತಿರಲಿಲ್ಲ. ಕೆಲ ಸಮಯದ ಬಳಿಕ ಮೈದಾನ ತೊರೆದರು.

88
ಟೀಂ ಇಂಡಿಯಾಗೆ ಹೊಸ ತಲೆನೋವು

ಈ ಇಬ್ಬರು ಗಾಯದ ಸಮಸ್ಯೆ ಭಾರತದ ತಲೆನೋವು ಹೆಚ್ಚುವಂತೆ ಮಾಡಿದೆ. ಮಹತ್ವದ ಪಂದ್ಯದಲ್ಲಿ ಈ ಇಬ್ಬರು ಭಾರತದ ಪಾಲಿಗೆ ಗೇಮ್‌ ಚೇಂಜರ್‌ಗಳಾಗುವ ಸಾಧ್ಯತೆಯಿದೆ. ಹೀಗಾಗಿ ಪಾಂಡ್ಯ ಹಾಗೂ ಅಭಿಷೇಕ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎನ್ನುವುದಷ್ಟೇ ಭಾರತೀಯ ಅಭಿಮಾನಿಗಳ ಹಾರೈಕೆಯಾಗಿದೆ.

Read more Photos on
click me!

Recommended Stories