Asia Cup 2025: ಫೈನಲ್‌ಗೂ ಮುನ್ನ ಸೂರ್ಯಕುಮಾರ್ ಯಾದವ್, ಹ್ಯಾರಿಸ್ ರೌಫ್‌ಗೆ ಬಿಗ್ ಶಾಕ್ ನೀಡಿದ ಐಸಿಸಿ!

Published : Sep 27, 2025, 09:03 AM IST

ದುಬೈ: ಪೆಹಲ್ಗಾಂ ದಾಳಿ ಉಲ್ಲೇಖಿಸಿದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್‌ಗೆ ಹಾಗೂ ಯುದ್ದ ವಿಮಾನ ಪತನ ರೀತಿ ಸನ್ನೆ ಮಾಡಿದ್ದ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್‌ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

PREV
19
ಪಹಲ್ಗಾಂ ಉಗ್ರದಾಳಿ

ಕಣಿವೆ ರಾಜ್ಯದ ಪಹಲ್ಗಾಂ ಮೇಲೆ ಕೆಲವು ಪಾಕಿಸ್ತಾನ ಪ್ರೇರಿತ ಉಗ್ರರು ಮನಸ್ಸೋ ಇಚ್ಛೆ ಗುಂಡಿನ ದಾಳಿ ನಡೆಸಿ 28 ಮಂದಿ ನಾಗರೀಕರ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂದೂರ್ ಕಾರ್ಯಚರಣೆ ನಡೆಸಿ ಪಾಕ್‌ಗೆ ಬಿಸಿ ಮುಟ್ಟಿಸಿತ್ತು.

29
ಇಂಡೋ-ಪಾಕ್‌ ಮ್ಯಾಚ್‌ಗೆ ಆಕ್ರೋಶ

ಇದಾದ ಬಳಿಕ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಭಾರತ ಉಗ್ರರಾಷ್ಟ್ರ ಪಾಕಿಸ್ತಾನ ಜತೆಗೆ ಕ್ರಿಕೆಟ್ ಆಡಬಾರದು ಎನ್ನುವ ಆಕ್ರೋಶ ಭಾರತದಾದ್ಯಂತ ಜೋರಾಗಿತ್ತು.

39
ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

ಆದರೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಪಾಕಿಸ್ತಾನ ಜತೆಗೆ ಕ್ರಿಕೆಟ್ ಆಡಲು ಅನುಮತಿ ನೀಡಿದ್ದರಿಂದ, ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.

49
ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿದ್ದ ಸೂರ್ಯ

ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಗುಂಪು ಹಂತದ ಪಂದ್ಯ ಮುಗಿದ ಬಳಿಕ ಗೆಲುವನ್ನು ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಿಸಿದ್ದಕ್ಕೆ ಭಾರತದ ನಾಯಕ ಸೂರ್ಯಕುಮಾರ್‌ಗೆ ಅಂ.ರಾ. ಕ್ರಿಕೆಟ್ ಸಮಿತಿ (ಐಸಿಸಿ) ಪಂದ್ಯದ ಸಂಭವಾನೆಯ ಶೇ.30ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ.

59
ರೌಫ್‌ಗೆ ಶಾಕ್ ಕೊಟ್ಟ ಬಿಸಿಸಿಐ

ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌ಗೂ ಪಂದ್ಯದ ಸಂಭಾವನೆಯ 30% ಮೊತ್ತವನ್ನು ದಂಡ ಹಾಕಿದೆ. ರೌಫ್ ಆಪರೇಷನ್ ಸಿಂದೂರ್ ವೇಳೆ ನಾವು ಭಾರತದ ಆರು ವಿಮಾನ ಹೊಡೆದುರುಳಿಸಿದ್ದೇವೆ ಎನ್ನುವ ರೀತಿ ಫೋಸ್ ಕೊಟ್ಟಿದ್ದರು.

69
ಮೇಲ್ಮನವಿ ಸಲ್ಲಿಸಿದ ಬಿಸಿಸಿಐ

ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ವಿರುದ್ಧ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಬಿಸಿಸಿಐ ಮೇಲ್ಮನವಿ ಸಲ್ಲಿಸಿದೆ.

79
'ಗನ್‌ಶಾಟ್' ಸಂಭ್ರಮ: ಫರ್ಹಾನ್‌ಗೆ ಎಚ್ಚರಿಕೆ

ಶುಕ್ರವಾರ ರೌಫ್ ಹಾಗೂ ಸಾಹಿಬ್ ಝಾದಾ ಫರ್ಹಾನ್ ಐಸಿಸಿ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್‌ನ್ ಎದುರು ವಿಚಾರಣೆಗೆ ಹಾಜರಾದರು.

89
ಸಮರ್ಥನೆ ನೀಡಿದ ಫರ್ಹಾನ್

ಅರ್ಧಶತಕ ಬಾರಿಸಿದ ಬಳಿಕ ಗನ್‌ಶಾಟ್ ರೀತಿ ಸಂಭ್ರಮಿಸಿದ್ದ ಫರ್ಹಾನ್, ವಿಚಾರಣೆ ವೇಳೆ ತಾವು ತಪ್ಪು ಮಾಡಿಲ್ಲ. ತಮ್ಮ ದೇಶದ ಫನ್ಸೂನ್ ಭಾಗದಲ್ಲಿ ಸಂಭ್ರಮಿ ಸುವ ಪರಿ ಇದು ಎಂದು ಸಮರ್ಥನೆ ನೀಡಿದರು ಎಂದು ತಿಳಿದುಬಂದಿದೆ. ಈ ರೀತಿ ಸಂಭ್ರಮಾಚರಣೆ ಯನ್ನು ಮುಂದುವರಿಸದಂತೆ ಫರ್ಹಾನ್‌ಗೆ ಐಸಿಸಿ ಎಚ್ಚರಿಸಿದೆ.

99
ಏಷ್ಯಾಕಪ್ ಫೈನಲ್‌ಗೆ ಕ್ಷಣಗಣನೆ

ಏಷ್ಯಾಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 28ರಂದು ನಡೆಯಲ್ಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಇದಕ್ಕೂ ಮೊದಲು ಐಸಿಸಿ ಶಾಕ್ ನೀಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories