ದುಬೈ: ಭಾರತ ಹಾಗೂ ಶ್ರೀಲಂಕಾ ತಂಡಗಳು ಇಂದು ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
2025ರ ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಒಂದು ಪಂದ್ಯ ಬಾಕಿ ಇರುವಂತೆಯೇ ಫೈನಲ್ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದೆ. ಇಂದು ಲಂಕಾ ಸವಾಲಿಗೆ ಸಜ್ಜಾಗಿದೆ.
27
ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಶ್ರೀಲಂಕಾ
ಇನ್ನು ಗ್ರೂಪ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ, ಸೂಪರ್-4 ಹಂತಕ್ಕೆ ಲಗ್ಗೆಯಿಟ್ಟಿದ್ದ ಶ್ರೀಲಂಕಾ ತಂಡವು, ಇದೀಗ ಸೂಪರ್-4ನಲ್ಲಿ ಸತತ ಎರಡು ಸೋಲು ಅನುಭವಿಸಿ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇದೀಗ ಲಂಕಾ ಹ್ಯಾಟ್ರಿಕ್ ಸೋಲಿನ ಭೀತಿಗೆ ಸಿಲುಕಿದೆ.
37
ಭಾರತ-ಪಾಕಿಸ್ತಾನ ಔಪಚಾರಿಕ ಮ್ಯಾಚ್
ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಯಾವ ತಂಡದ ಮೇಲೂ ಈ ಪಂದ್ಯದ ಫಲಿತಾಂಶ ಪರಿಣಾಮ ಬೀರುವುದಿಲ್ಲ. ಹೀಗಾಗಿ ಇದೊಂದು ಔಪಚಾರಿಕ ಪಂದ್ಯ ಎನಿಸಿಕೊಂಡಿದ್ದು, ಭಾರತ ಫೈನಲ್‌ಗೆ ಅಭ್ಯಾಸ ರೂಪದಲ್ಲಿ ಇದನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
ಅಷ್ಟೇನೂ ಮಹತ್ವವಲ್ಲದ ಪಂದ್ಯ ಇದಾಗಿರುವುದರಿಂದ ಭಾರತ ಇಂದು ಶ್ರೀಲಂಕಾ ಎದುರು 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾದಲ್ಲಿ ಆಲ್ರೌಂಡರ್ ಶಿವಂ ದುಬೆಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
57
ರಿಂಕು ಸಿಂಗ್‌ಗೆ ಚಾನ್ಸ್?
ಒಂದು ವೇಳೆ ಲಂಕಾ ಎದುರು ಶಿವಂ ದುಬೆಗೆ ವಿಶ್ರಾಂತಿ ನೀಡಿದರೆ, ಇದುವರೆಗೂ ಟೂರ್ನಿಯಲ್ಲಿ ಬೆಂಚ್ ಕಾಯಿಸುತ್ತಾ ಬಂದಿರುವ ರಿಂಕು ಸಿಂಗ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
67
ಬುಮ್ರಾಗೆ ರೆಸ್ಟ್?
ಫೈನಲ್ ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ, ಅರ್ಶದೀಪ್ ಸಿಂಗ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದರೂ ಅಚ್ಚರಿಯಿಲ್ಲ
77
ಶ್ರೀಲಂಕಾ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ: