ಶೀಘ್ರದಲ್ಲೇ ಸಾರಾ ತೆಂಡೂಲ್ಕರ್ ಮತ್ತು ಶುಬ್ಮನ್ ಗಿಲ್ ಮದ್ವೆ! ಗುಟ್ಟು ಬಿಟ್ಟು ಕೊಟ್ಟ ಯುಎಇ ಆಟಗಾರ!

First Published | Nov 10, 2023, 3:49 PM IST

ಕ್ರಿಕೆಟಿಗ ಶುಬ್ಮನ್ ಗಿಲ್ ( Shubman Gill) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulka r)ಅವರ ಪ್ರೇಮ ಪುರಾಣದಿಂದ ಸುದ್ದಿಯಲ್ಲಿದ್ದಾರೆ. ಅನೇಕ ಬಾರಿ ಸಾರಾ ಸ್ಟೇಡಿಯಂನಲ್ಲಿ ಕುಳಿತು ಶುಬ್ಮನ್ ಕ್ರಿಕೆಟ್ ಆಡುವುದನ್ನು ನೋಡಿದ್ದಾರೆ ಮತ್ತು ಚಿಯರ್‌ ಮಾಡುವ  ಫೋಟೋಗಳು ಮತ್ತು ವೀಡಿಯೊಗಳು ಸಹ ಅನೇಕ ಬಾರಿ ವೈರಲ್ ಆಗುತ್ತಿವೆ. ಈ ನಡುವೆ ಸ್ಫೋಟಕ ಸುದ್ದಿಯೊಂದು ಬೆಳಕಿಗೆ ಬಂದಿದೆ.

ನಟಿ ಸಾರಾ ಅಲಿ ಖಾನ್ ಅವರು ಶುಬ್ಮನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ ಎಂದು ದೃಢಪಡಿಸಿದ ತಕ್ಷಣ , ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರ ಜೊತೆ  ಶುಬ್ಮನ್ ಗಿಲ್ ಅವರ ಲಿಂಕಪ್‌ ವರದಿಗಳು ಮತ್ತೆ ಮತ್ತೆ ಕೇಳಿ ಬರುತ್ತಿದೆ.

ಅದೇ ಸಮಯದಲ್ಲಿ ಯುಎಇ ಕ್ರಿಕೆಟಿಗ ಚಿರಾಗ್ ಸೂರಿ ಪಾಡ್‌ಕ್ಯಾಸ್ಟ್‌ನಲ್ಲಿ ಭಾರತೀಯ ಕ್ರಿಕೆಟಿಗ ಶುಬ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಸಂಬಂಧವನ್ನು ದೃಢೀಕರಿಸಿದ ವೀಡಿಯೊ ಹೊರಬಿದ್ದಿದೆ.

Tap to resize

ಯುಎಇ ಆಟಗಾರ ಚಿರಾಗ್ ಸೂರಿ ಅವರು ಸಾರಾ ಮತ್ತು ಶುಬ್ಮನ್‌ ಸಂಬಂಧವನ್ನು ಖಚಿತಪಡಿಸಿದ್ದಾರೆ ಮತ್ತು ಅವರ ಮದುವೆಯ ಬಗ್ಗೆ ಮಾತನಾಡಿದ್ದಾರೆ, ಅದರ ವೀಡಿಯೋ ಕೂಡ ವೈರಲ್ ಆಗುತ್ತಿದೆ.

ಯುಎಇ ಆಟಗಾರ ಚಿರಾಗ್ ಸೂರಿ ಸಂದರ್ಶನದಲ್ಲಿ  ವರದಿಗಾರ ಚಿರಾಗ್‌ ಅವರನನ್ನು ಮದುವೆಯಾಗುವ ಮುಂದಿನ ಆಟಗಾರ ಯಾರು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅವರು ಶುಬ್ಮನ್ ಗಿಲ್ ಹೆಸರನ್ನು ತೆಗೆದುಕೊಂಡಿದ್ದಾರೆ

ಅವರಿಬ್ಬರು ಮದುವೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು ಮತ್ತು ಮೊದಲು ಸಚಿನ್ ಮತ್ತು ಈಗ ಶುಬ್ಮನ್‌ನಿಂದಾಗಿ ಸಾರಾ ಅವರ ಜೀವನ ಯಾವಾಗಲೂ 'ಕ್ರಿಕೆಟ್' ಬಗ್ಗೆಯೇ ಇರುತ್ತದೆ ಎಂಬುದರ ಕುರಿತು ಚಿರಾಗ್‌ ಸೂರಿ ಮಾತನಾಡಿದರು.  

ಚಿರಾಗ್ ಅವರು ಅನುಮತಿಯಿಲ್ಲದೆ ಸಾರ್ವಜನಿಕ ವೇದಿಕೆಯಲ್ಲಿ ಸಾರಾ ಮತ್ತು ಶುಬ್‌ಮಾನ್ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕಾಗಿ ಹಲವಾರು ನೆಟಿಜನ್‌ಗಳು ಟೀಕಿಸಿದ್ದಾರೆ. 

ಒಬ್ಬ ಬಳಕೆದಾರ, 'ಅವನು ಹೇಗೆ ಸತ್ಯವನ್ನು ಬಹಿರಂಗಪಡಿಸುತ್ತಾನೆ ' ಎಂದು ಬರೆದರೆ, ಇನ್ನೊಬ್ಬರು ' ಅವರ ಸಂಬಂಧದ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಚಿರಾಗ್‌ನ ಕಡೆಯಿಂದ ಅವರ ಅನುಮತಿಯಿಲ್ಲದೆ ಹಾಗೆ ಹೇಳುವುದು ಸರಿಯಲ್ಲ' ಎಂದು ಟೀಕಿಸಿದ್ದಾರೆ.

ಈ ವೀಡಿಯೊ ವೈರಲ್ ಆದ ನಂತರ ಶುಬ್ಮನ್ ಗಿಲ್ ಚಿರಾಗ್ ಸೂರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ಒಂದೆರಡು ನೆಟಿಜನ್‌ಗಳ ಕಾಮೆಂಟ್‌ಗಳು ಗಮನ ಸೆಳೆದಿವೆ.

ಇದಕ್ಕೂ ಮೊದಲು ಸಾರಾ ಅಲಿ ಖಾನ್ ಕೂಡ ಇತ್ತೀಚೆಗೆ 'ಕಾಫಿ ವಿತ್ ಕರಣ್' ನಲ್ಲಿ ಶುಬ್ಮನ್ ಜೊತೆ ಡೇಟಿಂಗ್ ಮಾಡುವ ಬಗ್ಗೆ ಕೇಳಿದಾಗ 'ನೀವು ತಪ್ಪು ಸಾರಾಳನ್ನು ಹಿಡಿದಿದ್ದೀರಿ' ಎಂದು ಹೇಳಿದರು. 

ಇತ್ತೀಚೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಸಾರಾ ತೆಂಡೂಲ್ಕರ್ ಮತ್ತು ಶುಬ್ಮನ್ ಗಿಲ್ ಅವರ ಡೇಟಿಂಗ್ ವದಂತಿಗಳು ಮತ್ತಷ್ಟು ಹೆಚ್ಚಾದವು. ಗಿಲ್‌ ಔಟ್‌ ಆದಾಗ ಸಾರಾ ಅಸಮಾಧಾನಗೊಂಡಿದ್ದರು ಎಂದು ಗುರುತಿಸಲಾಗಿದೆ. 

Latest Videos

click me!