ಅನುಷ್ಕಾ ವಿರಾಟ್‌ ಹೊಸ ಮನೆ ಡಿಸೈನ್‌ ನೋಡಿ, ಮಾಡಿದ್ದು ಹೃತಿಕ್‌ ರೋಷನ್‌ ಮಾಜಿ ಪತ್ನಿ

Published : Nov 25, 2022, 05:06 PM IST

ಇತ್ತೀಚೆಗೆ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ದಂಪತಿ ಮುಂಬೈನ ಜುಹುದಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ಸುದ್ದಿ ಇತ್ತು. ದಂಪತಿ ಈ ಅಪಾರ್ಟ್ಮೆಂಟ್‌ಗೆ ತಿಂಗಳಿಗೆ ಸುಮಾರು 2.76 ಲಕ್ಷ ರೂಪಾಯಿ ಬಾಡಿಗೆಯನ್ನು ಪಾವತಿಸುತ್ತಾರೆ. ಈ ಅಪಾರ್ಟ್‌ಮೆಂಟ್ ಮಾಜಿ ಕ್ರಿಕೆಟಿಗ ಸಮರ್ಜಿತ್ ಸಿಂಗ್ ಗಾಯಕ್‌ವಾಡ್‌ಗೆ ಸೇರಿದೆ. ಈ ನಡುವೆ  ಅನುಷ್ಕಾ-ವಿರಾಟ್ ಅವರ ಅಲಿಬಾಗ್ ವಿಲ್ಲಾದ ಒಳಗಿನ ಫೋಟೋಗಳು ವೈರಲ್‌ ಆಗಿವೆ.

PREV
18
ಅನುಷ್ಕಾ ವಿರಾಟ್‌  ಹೊಸ ಮನೆ ಡಿಸೈನ್‌ ನೋಡಿ, ಮಾಡಿದ್ದು ಹೃತಿಕ್‌ ರೋಷನ್‌ ಮಾಜಿ ಪತ್ನಿ

ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿರುವ ವಿಲ್ಲಾದ ಒಳಗಿನ ಫೋಟೋಗಳು ಅದ್ಭುತವಾಗಿವೆ. 13 ಕೋಟಿ ಬೆಲೆಬಾಳುವ ವಿರಾಟ್-ಅನುಷ್ಕಾ ಅವರ ಅಲಿಬಾಗ್ ಬಂಗಲೆ ಅರಮನೆಗಿಂತ (Palace) ಕಡಿಮೆಯಿಲ್ಲ.

28

ಅನುಷ್ಕಾ ಶರ್ಮಾ ಅವರ ಅಲಿಬಾಗ್ ಬಂಗಲೆಯನ್ನು ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಝೇನ್ ಖಾನ್ ವಿನ್ಯಾಸಗೊಳಿಸಿದ್ದಾರೆ ಎಂದು ವರದಿಯಾಗಿದೆ, 

38

ವಿರಾಟ್ ಕೊಹ್ಲಿ ಅವರ ಬಂಗಲೆಯ ಲೀವಿಂಗ್‌ ಏರಿಯಾ ಮತ್ತು ಸಿಟ್ಟಿಂಗ್‌ ಏರಿಯಾ ತುಂಬಾ ಸ್ಟೈಲಿಶ್ ಆಗಿದೆ. ಎತ್ತರದ ಚಾವಣಿಯು ಈ  ಸ್ಥಳದ ಸೌಂದರ್ಯವನ್ನು ಹೆಚ್ಚಿಸುತ್ತಿದೆ.

48

ಎಲ್ಲಾ ಮೂಲೆಗಳಿಂದ ಸೂರ್ಯನ ಬೆಳಕು ಮನೆಯೊಳಗೆ ಪ್ರವೇಶಿಸುವ ವ್ಯವಸ್ಥೆಯೂ ಇದೆ. ಬಂಗಲೆಯೊಳಗೆ ಹಲವೆಡೆ ಸ್ಟೈಲಿಶ್ ಸೋಫಾಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಕಾಣಬಹುದು. 

58

ಇಡೀ ಮನೆಯ ಥೀಮ್ ಅನ್ನು ಡಿಸೈನರ್ ಸುಸೇನ್ ಖಾನ್ ಅವರು ಬಿಳಿ ಬಣ್ಣದ ಬೇಸ್‌ನಲ್ಲಿ ಡಿಸೈನ್‌ ಮಾಡಿದ್ದಾರೆ. ಮನೆಯ ಹೊರಗಿನ ಪ್ರದೇಶವೂ ಬಹಳ ಆಕರ್ಷಕವಾಗಿದೆ. ಸುತ್ತಲೂ ಹಸಿರನ್ನು ಕಾಣಬಹುದಾಗಿದೆ. 
 

68

ಬಂಗಲೆಯ ಹೊರಗಿನ ಪ್ರದೇಶದಲ್ಲಿ ದೊಡ್ಡ ಸೋಫಾಗಳನ್ನು ಸಹ ಸ್ಥಾಪಿಸಲಾಗಿದೆ. ಇದಲ್ಲದೇ ಬಣ್ಣಬಣ್ಣದ ಹೂಗಳಿಂದ ವಿಲ್ಲಾವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ.


 

78

ಈ ವರ್ಷ ಗಣೇಶ ಚತುರ್ಥಿಯಂದು ವಿರಾಟ್-ಅನುಷ್ಕಾ ಅಲಿಬಾಗ್ ಬಂಗಲೆಯನ್ನು ತೆಗೆದುಕೊಂಡಿದ್ದರು. ಅಂದಿನಿಂದ ಅದರ ಅಲಂಕಾರದ ಕೆಲಸ ಪ್ರಾರಂಭವಾಯಿತು.

88

ಅನುಷ್ಕಾ ಶರ್ಮಾ ಅವರು  ಈ ದಿನಗಳಲ್ಲಿ ಅವರು ತಮ್ಮ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories