Ind vs NZ ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಉಮ್ರಾನ್ ಮಲಿಕ್‌ಗೆ ಸಿಗುತ್ತಾ ಸ್ಥಾನ?

First Published | Nov 24, 2022, 5:39 PM IST

ಆಕ್ಲೆಂಡ್(ನ.24): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನವೆಂಬರ್ 25ರಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಈಡನ್ ಪಾರ್ಕ್‌ ಮೈದಾನ ಆತಿಥ್ಯ ವಹಿಸಿದೆ. ವಿರಾಟ್ ಕೊಹ್ಲಿ, ಬುಮ್ರಾ ಅವರಂತಹ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ. ಹೀಗಾಗಿ ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ಶಿಖರ್ ಧವನ್: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕರಾಗಿ ನೇಮಕವಾಗಿರುವ ಧವನ್, ಮತ್ತೊಮ್ಮೆ ಆರಂಭಿಕನಾಗಿ ಹಾಗೂ ನಾಯಕನಾಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಬೇಕಿದೆ. 
 

2. ಶುಭ್‌ಮನ್ ಗಿಲ್: ಭಾರತದ ಪ್ರತಿಭಾನ್ವಿತ ಬ್ಯಾಟರ್ ಗಿಲ್‌, ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕಿವೀಸ್ ಎದುರು ದೊಡ್ಡ ಇನಿಂಗ್ಸ್‌ ಆಡಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಗಿಲ್.
 

Tap to resize

3. ಸೂರ್ಯಕುಮಾರ್ ಯಾದವ್: ಟಿ20 ಕ್ರಿಕೆಟ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಸೂರ್ಯಕುಮಾರ್ ಯಾದವ್, ಇದೀಗ ಏಕದಿನ ಸರಣಿಯಲ್ಲೂ ಅಬ್ಬರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
 

4. ಶ್ರೇಯಸ್ ಅಯ್ಯರ್: ಮುಂಬೈ ಮೂಲದ ಮತ್ತೋರ್ವ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡಾ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ಉತ್ತಮ ಇನಿಂಗ್ಸ್‌ ಆಡುವ ವಿಶ್ವಾಸದಲ್ಲಿದ್ದಾರೆ.
 

5. ಸಂಜು ಸ್ಯಾಮ್ಸನ್‌: ಕೇರಳ ಮೂಲದ ಪ್ರತಿಭಾನ್ವಿತ ಬ್ಯಾಟರ್ ಸಂಜು ಸ್ಯಾಮ್ಸನ್, ಕಿವೀಸ್ ಎದುರಿನ ಟಿ20 ಸರಣಿಯಲ್ಲಿ ಬೆಂಚ್ ಕಾಯಿಸಿದ್ದರು. ಆದರೆ ಇದೀಗ ಏಕದಿನ ತಂಡದಲ್ಲಿ ಬಹುತೇಕ ಸ್ಥಾನ ಪಡೆಯುವುದು ಖಚಿತ ಎನಿಸಿದ್ದು, ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
 

6. ರಿಷಭ್ ಪಂತ್: ವಿಕೆಟ್ ಕೀಪರ್ ಬ್ಯಾಟರ್ ಪಂತ್, ಟಿ20 ಸರಣಿಯಲ್ಲಿ ಅಗ್ರಕ್ರಮಾಂಕದಲ್ಲಿನ ಎರಡೂ ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ್ದರು. ಆದರೆ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಪಂತ್ ಫಿನಿಶರ್ ಪಾತ್ರ ನಿಭಾಯಿಸಬೇಕಿದೆ.
 

7. ದೀಪಕ್ ಹೂಡಾ: ದೀಪಕ್ ಹೂಡಾ ಸೇರ್ಪಡೆ ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕವನ್ನು ಮತ್ತಷ್ಟು ಬಲವಾಗಲಿದೆ. ಇದರ ಜತೆಗೆ ಸಂಪೂರ್ಣ 10 ಓವರ್‌ ಬೌಲಿಂಗ್‌ ಮಾಡುವ ಕ್ಷಮತೆಯನ್ನು ದೀಪಕ್ ಹೂಡಾ ಹೊಂದಿದ್ದಾರೆ.
 

8. ಶಾರ್ದೂಲ್ ಠಾಕೂರ್: ಅನುಭವಿ ಬೌಲಿಂಗ್‌ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಸರೆಯಾಗಬಲ್ಲ ಕ್ಷಮತೆ ಹೊಂದಿದ್ದಾರೆ. ಶಾರ್ದೂಲ್ ಡೆತ್ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ನಡೆಸಬಲ್ಲವರಾಗಿದ್ದಾರೆ.
 

9. ಉಮ್ರಾನ್ ಮಲಿಕ್: ಕಾಶ್ಮೀರ ಮೂಲದ ಮಾರಕ ವೇಗಿ ಉಮ್ರಾನ್ ಮಲಿಕ್, ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಎದುರು ನೋಡುತ್ತಿದ್ದಾರೆ. ಉಮ್ರಾನ್ ಮಲಿಕ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
 

10. ಯುಜುವೇಂದ್ರ ಚಹಲ್: ಟೀಂ ಇಂಡಿಯಾಗೆ ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸಬಲ್ಲ ಅನುಭವಿ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್, ಟೀಂ ಇಂಡಿಯಾ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದಾರೆ. 
 

11. ಆರ್ಶದೀಪ್ ಸಿಂಗ್: ಟೀಂ ಇಂಡಿಯಾ ಮತ್ತೋರ್ವ ಪ್ರತಿಭಾನ್ವಿತ ವೇಗಿ ಆರ್ಶದೀಪ್ ಸಿಂಗ್ ಅದ್ಭುತ ಲಯದಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಿ ತೋರಿದ ಪ್ರದರ್ಶನ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
 

Latest Videos

click me!