ಪತ್ನಿಗಾಗಿಯೇ ಬದಲಾದ ವಿರಾಟ್ ಕೊಹ್ಲಿ: ಇಶಾಂತ್ ಹಿಂಗದಿದ್ಯಾಕೆ?

Published : Jul 10, 2024, 04:08 PM ISTUpdated : Jul 10, 2024, 04:13 PM IST

ಈ ದಿನಗಳಲ್ಲಿ ಟೀಮ್‌ ಇಂಡಿಯಾದ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಮತ್ತು ಮಕ್ಕಳ  ಜೊತೆ ಶಾಶ್ವತವಾಗಿ ಲಂಡನ್‌ಗೆ ಶಿಫ್ಟ್‌ ಆಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇದರ ನಡುವೆಯೇ ಅನುಷ್ಕಾ ವಿರಾಟ್‌ ಕೊಹ್ಲಿ ಅವರನ್ನು ಬದಲಾಯಿಸಿದ್ದಾರೆ ಎಂಬ ಇಶಾಂತ್‌ ಶರ್ಮ ಅವರ ಹೇಳಿಕೆ ಮುನ್ನಲೆಗೆ ಬಂದಿದೆ. 

PREV
17
ಪತ್ನಿಗಾಗಿಯೇ ಬದಲಾದ ವಿರಾಟ್ ಕೊಹ್ಲಿ: ಇಶಾಂತ್ ಹಿಂಗದಿದ್ಯಾಕೆ?

ಕ್ರಿಕೆಟರ್‌ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರೀತಿಯ ಜೋಡಿಗಳಲ್ಲಿ ಒಬ್ಬರು.
 

27

ವಿರಾಟ್‌ ಮತ್ತು ಅನುಷ್ಕಾ ಇಬ್ಬರ  ನಿಜವಾದ ಪ್ರೀತಿ ಮತ್ತು ಪರಸ್ಪರ ಬೆಂಬಲ ಎಲ್ಲರನ್ನು  ಸೆಳೆದಿದೆ ಹಾಗೂ ಅವರ ಪ್ರೇಮಕಥೆಯು ಜನರನ್ನು ಪ್ರೇರೇಪಿಸುತ್ತದೆ.

37

ಟಿ 20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಅನುಷ್ಕಾ, ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ವಿಡಿಯೋ ಕಾಲ್ ಮಾಡುವುದರಿಂದ ಹಿಡಿದು ಕ್ರೀಡಾಂಗಣದಲ್ಲಿ ಕುಳಿತಿರುವ ಅನುಷ್ಕಾಗೆ ಮೈದಾನದಿಂದಲೇ ಫ್ಲೈಯಿಂಗ್ ಕಿಸ್ ಕೊಡುವವರೆಗೆ, ಇಬ್ಬರು ತಮ್ಮ ಪ್ರೀತಿಯಿಂದ ಹೃದಯವನ್ನು ಆಳಿದ್ದಾರೆ.

47

ಆದರೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಯ ಜೀವನವನ್ನು ಬದಲಾಯಿಸಿದ್ದಾರೆ ಮತ್ತು ಅವರನ್ನು ಶಾಂತವಾಗಿಸಿದ್ದಾರೆ ಎಂದು ಕ್ರಿಕೆಟಿಗ ಇಶಾಂತ್ ಶರ್ಮಾ ಬಹಿರಂಗಪಡಿಸಿದ್ದಾರೆ. 

57

 ಅಲ್ಲದೆ, ಸಂಭಾಷಣೆ ಸಮಯದಲ್ಲಿ ವಿರಾಟ್ ಅವರ ದೀರ್ಘ ಕಾಲದ ಸ್ನೇಹಿತ ಮತ್ತು ಕ್ರಿಕೆಟಿಗ ಇಶಾಂತ್ ಶರ್ಮಾ ಅವರು ವಿರಾಟ್ ಜೀವನದ ಮೇಲೆ ಅನುಷ್ಕಾ ಅವರ ಪ್ರಭಾವವು ಸಾರ್ವಜನಿಕರಿಗೆ ಗೋಚರಿಸುವುದಕ್ಕಿಂತ ಮೀರಿದೆ ಎಂದು ಹೇಳಿದ್ದಾರೆ. 

67

ಅನುಷ್ಕಾ ಶರ್ಮಾ ಆಗಮನದ ನಂತರ ವಿರಾಟ್ ಕೊಹ್ಲಿ ಜೀವನದಲ್ಲಿ ಶಾಂತವಾಗಿದ್ದಾರೆ ಮತ್ತು ಇಬ್ಬರು ದೇವರು ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ ಎಂದು ಇಶಾಂತ್ ಶರ್ಮಾ ತಿಳಿಸಿದ್ದಾರೆ.

77

ಉಳಿದಂತೆ ವಿರಾಟ್ ತುಂಬಾ ಚಿಲ್ ಪರ್ಸನ್, ಆದರೆ ಎಲ್ಲರೊಂದಿಗೆ ಕ್ಯಾಶುವಲ್‌ ಆಗಿ ವರ್ತಿಸುವುದು ಅವರಿಗೆ ಸುಲಭವಲ್ಲ ಎಂದು ಇಶಾಂತ್ ಹೇಳಿದ್ದಾರೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories