ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಅಚ್ಚರಿಯ ತೀರ್ಮಾನಗಳು ಹೊರಬರುತ್ತಿವೆ. ಫಾಫ್ ಡು ಪ್ಲೆಸಿಸ್ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ನಲ್ಲೇ ಇದೀಗ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಅಚ್ಚರಿಯ ರೀತಿಯಲ್ಲಿ ಐಪಿಎಲ್‌ಗೆ ಗುಡ್ ಬೈ ಹೇಳಿದ್ದಾರೆ.
ಕೆರಿಬಿಯನ್ ಮೂಲದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಇಂದು ಅಚ್ಚರಿಯ ರೀತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವಿದಾಯ ಘೋಷಿಸಿದ್ದಾರೆ.
28
ಕೆಕೆಆರ್‌ನಿಂದ ರಿಲೀಸ್ ಆಗಿದ್ದ ರಸೆಲ್
2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಸೆಲ್ ಐಪಿಎಲ್‌ಗೆ ಗುಡ್ ಬೈ ಹೇಳಿದ್ದಾರೆ.
38
ಐಪಿಎಲ್‌ಗೆ ಮಾತ್ರ ರಸೆಲ್ ಗುಡ್ ಬೈ
ಇನ್ನು ಇದೇ ವೇಳೆ ಆಂಡ್ರೆ ರಸೆಲ್ ತಮ್ಮ ಕ್ರಿಕೆಟ್ ಜರ್ನಿ ಐಪಿಎಲ್‌ಗೆ ವಿದಾಯ ಹೇಳಿದ ಮಾತ್ರಕ್ಕೆ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಗತ್ತಿನ ನಾನಾ ಭಾಗಗಳಲ್ಲಿ ಕೆಕೆಆರ್ ಫ್ರಾಂಚೈಸಿ ಪರ ತಾವು ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಕೆಕೆಆರ್ ಅಭಿಮಾನಿಗಳೇ, ನಾನು ಐಪಿಎಲ್‌ಗೆ ನಿವೃತ್ತಿ ತೆಗೆದುಕೊಳ್ಳುವ ತೀರ್ಮಾನ ಮಾಡಿದ್ದೇನೆ.ನಾನು ಈ ತಂಡದಲ್ಲಿ ಅತ್ಯಂತ ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ಸಿಕ್ಸರ್ ಬಾರಿಸಿದ್ದೇನೆ, ಮ್ಯಾಚ್ ಗೆಲ್ಲಿಸಿದ್ದೇನೆ. ಎಂವಿಪಿ ಅವಾರ್ಡ್ ಗೆದ್ದಿದ್ದೇನೆ. ಇವೆಲ್ಲವೂ ನೆನಪಿನಲ್ಲಿ ಉಳಿಯುವಂತ ಕ್ಷಣಗಳಾಗಿವೆ' ಎಂದು ರಸೆಲ್ ಹೇಳಿದ್ದಾರೆ.
58
ಕೆಕೆಆರ್ ಬಿಟ್ಟ ಬೇರೆ ತಂಡದ ಪರ ಆಡಲು ಬಯಸದ ರಸೆಲ್
ನಾನೀಗ ಸರಿಯಾದ ಸಮಯದಲ್ಲೇ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಪರ್ಪಲ್-ಗೋಲ್ಡ್ ಜೆರ್ಸಿ ಬಿಟ್ಟು ಬೇರೆ ಜೆರ್ಸಿಯಲ್ಲಿ ಆಡಲು ಬಯಸಲಿಲ್ಲ. ಹೀಗಾಗಿ ನಾನು ಐಪಿಎಲ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ರಸೆಲ್ ಹೇಳಿದ್ದಾರೆ.
68
ಪವರ್ ಕೋಚ್ ಆಗಿ ಕಾಣಿಸಿಕೊಳ್ಳಲಿರುವ ರಸೆಲ್
ಐಪಿಎಲ್‌ಗೆ ಆಟಗಾರನಾಗಿ ವಿದಾಯ ಘೋಷಿಸಿದ್ದರೂ, ಕೆಕೆಆರ್ ಪರ ಸಪೋರ್ಟ್ ಸ್ಟಾಫ್ ಆಗಿ ಆಂಡ್ರೆ ರಸೆಲ್ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ರಸೆಲ್ ಕೆಕೆಆರ್ ತಂಡದ ಪವರ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
78
140 ಐಪಿಎಲ್ ಪಂದ್ಯವನ್ನಾಡಿರುವ ರಸೆಲ್
37 ವರ್ಷದ ಆಂಡ್ರೆ ರಸೆಲ್ 140 ಐಪಿಎಲ್ ಪಂದ್ಯಗಳನ್ನಾಡಿ 2651 ರನ್ ಬಾರಿಸಿದ್ದಾರೆ. ಇದರಲ್ಲಿ 12 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್‌ನಲ್ಲಿ 123 ವಿಕೆಟ್ ಕಬಳಿಸಿದ್ದಾರೆ.
88
11 ವರ್ಷ ಕೆಕೆಆರ್ ಪ್ರತಿನಿಧಿಸಿದ್ದ ರಸೆಲ್
ಐಪಿಎಲ್‌ನಲ್ಲಿ ರಸೆಲ್ 2012 ಹಾಗೂ 2013ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಕಳೆದೊಂದು ದಶಕದಿಂದ ರಸೆಲ್ ಕೆಕೆಆರ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು.