11 ಸಿಕ್ಸರ್, 7 ಬೌಂಡರಿ ಕೇವಲ 32 ಎಸೆತಗಳಲ್ಲೇ ಶತಕ ಚಚ್ಚಿದ ಅಭಿಷೇಕ್ ಶರ್ಮಾ!

Published : Nov 30, 2025, 10:57 AM IST

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮತ್ತೊಂದು ಅದ್ಭುತ ನಡೆದಿದೆ. ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ಯುವ ಆಟಗಾರ ಅಭಿಷೇಕ್ ಶರ್ಮಾ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. 

PREV
14
32 ಎಸೆತಗಳಲ್ಲಿ ಬಂತು ಶತಕ

SMAT 2025ರಲ್ಲಿ ಪಂಜಾಬ್ ನಾಯಕನಾಗಿ ಬಂದ ಅಭಿಷೇಕ್, ಬೆಂಗಾಲ್ ವಿರುದ್ಧ ಸ್ಫೋಟಕ ಆಟವಾಡಿದರು. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 32 ಎಸೆತಗಳಲ್ಲಿ ಶತಕ ಸಿಡಿಸಿ ಎಲ್ಲರನ್ನೂ ಬೆರಗುಗೊಳಿಸಿದರು.

24
12 ಎಸೆತಗಳಲ್ಲಿ ಅರ್ಧಶತಕ

ಮೊದಲ ಎಸೆತದಿಂದಲೇ ಅಬ್ಬರಿಸಿದ ಅಭಿಷೇಕ್, 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ 51 ರನ್‌ಗಳಲ್ಲಿ 50 ಬೌಂಡರಿಗಳಿಂದಲೇ ಬಂದಿದ್ದು ವಿಶೇಷ. 5 ಸಿಕ್ಸರ್, 5 ಫೋರ್ ಬಾರಿಸಿ ಬೆಂಗಾಲ್ ಬೌಲರ್‌ಗಳನ್ನು ಕಾಡಿದರು.

34
11 ಸಿಕ್ಸರ್ ಹಾಗೂ 7 ಬೌಂಡರಿ

32 ಎಸೆತಗಳಲ್ಲಿ ಶತಕ ಪೂರೈಸುವಷ್ಟರಲ್ಲಿ 11 ಸಿಕ್ಸರ್, 7 ಫೋರ್ ಬಾರಿಸಿದ್ದರು. ಇದು ಅವರ 8ನೇ ಟಿ20 ಶತಕವಾಗಿದ್ದು, ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ (9) ಮಾತ್ರ ಮುಂದಿದ್ದಾರೆ.

44
ಅತಿವೇಗದ ಟಿ20 ಅರ್ಧಶತಕಗಳು

ವೇಗದ T20 ಅರ್ಧಶತಕಗಳು: 

ದೀಪೇಂದ್ರ ಸಿಂಗ್ (9), ಅಶುತೋಷ್ ಶರ್ಮಾ (11), ಅಭಿಷೇಕ್ ಶರ್ಮಾ (12), ಯುವರಾಜ್ ಸಿಂಗ್ (12), ಕ್ರಿಸ್ ಗೇಲ್ (12), ಹಜರತುಲ್ಲಾ ಝಝೈ (12), ಸಾಹಿಲ್ ಚೌಹಾಣ್ (12).

Read more Photos on
click me!

Recommended Stories