ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ಬಹುಮಾನ ಪಡೆದ ಮೋಹಿನ್ ಉಲ್ವಾ T20 ತಂಡಕ್ಕೆ ಸೇರ್ಪಡೆ!

Published : Nov 15, 2026, 01:41 PM IST

U19 Asia Cup Final 2026: ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಮೋಹಿತ್ ಉಲ್ವಾ ಇದೀಗ ಟಿ20 ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರು ಯಾವ ತಂಡದ ಪರ ಆಡಳಿದ್ದೆರೆ ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

PREV
14
U19 Asia Cup Final 2026: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು

U19 Asia Cup Final 2026: ಕಳೆದ ಶನಿವಾರ(ನ.14)ದಂದು ಓಮನ್‌ನಲ್ಲಿ ನಡೆದ 2026 ರ ಅಂಡರ್-19 ಏಷ್ಯಾ ಕಪ್‌ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪರ ಮೋಹಿತ್ ಉಲ್ವಾ(Mohit Ulva) ಅದ್ಭುತ ಇನ್ನಿಂಗ್ಸ್ ಆಡಿದರು. 10 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ರೂ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸ್ ಸಿಡಿಸುವ ಮೂಲಕ 49* ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ತಂಡಕ್ಕೆ 3 ರನ್‌ಗಳ ಬೇಕಾಗಿದ್ದಾಗ ಮೋಹಿತ್ ಸ್ಫೋಟಕ ಬ್ಯಾಟಿಂಗ್ ಮಾಡಿದರು.

ಮೋಹಿತ್ ಭರ್ಜರಿ ಪ್ರದರ್ಶನದಿಂದ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಕೊನೆಗೂ ಟೀಂ ಇಂಡಿಯಾ ಐದು ವರ್ಷಗಳ ಬಳಿಕ ಏಷ್ಯಾ ಕಪ್ ಪ್ರಶಸ್ತಿ ಮೂಡಿಗೇರಿಸಿಕೊಳ್ಳಲು ಸಾಧ್ಯವಾಯ್ತು. ಮೋಹಿತ್ ಆಡಿದ ಅಬ್ಬರದ ಆಟಕ್ಕೆ ಇದೀಗ ಮೋಹಿತ್‌ಗೆ ಪ್ರತಿಫಲ ಸಿಕ್ಕಿದೆ!

24
ಮೋಹಿತ್ ಉಲ್ವಾ ಟಿ20 ತಂಡಕ್ಕೆ ಸೇರ್ಪಡೆ!

ಮೂಲತಃ ಗುಜರಾತ್‌ನ ಸುರೇಂದ್ರನಗರದ ನಿವಾಸಿಯಾಗಿರುವ 18 ವರ್ಷದ ಮೋಹಿತ್ ಅವರನ್ನು 2026 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಸೌರಾಷ್ಟ್ರ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಶೇಷ ಎಂದರೆ ಮೋಹಿತ್ ಬ್ಯಾಂಟಿಂಗ್‌ಗಿಂತ ವೇಗದ ಬೌಲರ್ ಆಗಿ ಹೆಸರುವಾಸಿ. ಆದರೆ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಿಂದ ಟೀಂ ಇಂಡಿಯಾ ಒಂಭತ್ತನೇ ಬಾರಿ ಏಷ್ಯಾ ಕಪ್ ಗೆಲ್ಲುವಂತೆ ಮಾಡಿದ್ರು ಅನ್ನೋದು ಅಚ್ಚರಿ. ಅಲ್ಲಿವರೆಗೂ ವೇಗದ ಬೌಲಿಂಗ್‌ ಮಾಡುವಲ್ಲಿ ಗುರುತಿಸಿಕೊಂಡಿದ್ದ ಮೋಹಿತ್ ಇದೀಗ ಫೈನಲ್ ಪಂದ್ಯದಿಂದಾಗಿ ಕ್ರೀಡಾಭಿಮಾನಿಗಳು ಅವರ ಬ್ಯಾಟಿಂಗ್ ನಿಂದಲೇ ಗುರುತಿಸುವಂತಾಗಿದೆ.

ಇದನ್ನೂ ಓದಿ:ಅಂಡರ್-19 ಏಷ್ಯಾ ಕಪ್ ಗೆದ್ದಿದ್ದಕ್ಕಾಗಿ ಟೀಮ್ ಇಂಡಿಯಾಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? 

ಸೌರಾಷ್ಟ್ರ ತಂಡವು ಶನಿವಾರ ಬಿಹಾರ ವಿರುದ್ಧ T20 ಮಾದರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯವನ್ನು ಆಡಿತು. ಸೌರಾಷ್ಟ್ರ ತಂಡವು ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಕ್ರಿಕ್‌ಬಜ್ ಪ್ರಕಾರ, ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ಜಯದೇವ್ ಶಾ ಅವರು ತಂಡಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಮೋಹಿತ್ ಅವರ ಸಹಿಯನ್ನು ದೃಢಪಡಿಸಿದರು.

34
ಮೋಹಿತ್ ಉಲ್ವಾ ಭರ್ಜರಿ ಪ್ರದರ್ಶನ

ಮೋಹಿತ್ ಅಪಾರ ಉತ್ಸಾಹ, ಹೋರಾಟದ ಕಿಚ್ಚನ್ನು ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ತೋರಿಸಿದರು. ಅವರ ಅದ್ಭುತ ಪ್ರದರ್ಶನದಿಂದ ಇದೀಗ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅವರನ್ನು ಮುಷ್ತಾಕ್ ಅಲಿ ತಂಡಕ್ಕೆ ಸೇರಿಸಲು ನಿರ್ಧರಿಸಿದೆ. ಸೌರಾಷ್ಟ್ರ ತಂಡ ಆಡುತ್ತಿರುವ ಇಂದೋರ್‌ಗೆ ನೇರವಾಗಿ ಹೋಗಲು ಮೋಹಿತ್ ಅವರನ್ನು ಕೇಳಿಕೊಂಡಿದ್ದೇವೆ. ಮೋಹಿತ್ ತುಂಬಾ ಪ್ರತಿಭಾನ್ವಿತ ಹುಡುಗ. ರಾಜ್‌ಕೋಟ್ ಬಳಿಯ ಸುರೇಂದ್ರನಗರದಲ್ಲಿ ಸಣ್ಣ ಕುಟುಂಬದಲ್ಲಿ ಜನಿಸಿರುವ ಮೋಹಿತ್ ಪ್ರಸ್ತುತ ರಾಜ್‌ಕೋಟ್‌ನಲ್ಲಿ ವಾಸಿಸುತ್ತಿದ್ದಾರೆ. ನಾವು ಯಾವಾಗಲು ಯುವಕರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಇದೀಗ ಸೌರಾಷ್ಟ್ರ ತಂಡಕ್ಕೆ ಮೋಹಿತ್ ಸೇರ್ಪಡೆಯಾಗಿರುವುದು ಇನ್ನಷ್ಟು ಬಲ ಬಂದಂತಾಗಿದೆ ಎಂದು ಜಯದೇವ್ ಶಾ ಹೇಳಿದ್ದಾರೆ.

44
ಸೌರಾಷ್ಟ್ರದ ಮುಂದಿನ ಪಂದ್ಯ ಯಾವಾಗ? ಯಾರೊಂದಿಗೆ?

ಇಂದೋರ್‌ನಲ್ಲಿ ಪಂದ್ಯಗಳನ್ನು ಆಡುತ್ತಿರುವ ಸೌರಾಷ್ಟ್ರ ತಂಡವು ಸೋಮವಾರ (ನವೆಂಬರ್ 16) ಹರಿಯಾಣ ವಿರುದ್ಧ ಆಡಲಿದೆ. ತಂಡಕ್ಕೆ ಸೇರಿದ ನಂತರ ಮೋಹಿತ್ ತಂಡದ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯುತ್ತಾರೆಯೇ? ತಂಡದಲ್ಲಿ ಸೇರ್ಪಡೆಯಾಗುವ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ. ಮೋಹಿತ್ ಸೇರ್ಪಡೆಯಾದರೆ ತಂಡಕ್ಕೆ ಉತ್ತಮ ಆಲ್‌ರೌಂಡರ್ ಆಗಿ ಮತ್ತಷ್ಟು ಮಿಂಚುವ ಸಾಧ್ಯತೆಯಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories