India vs Pakistan U19 Asia Cup Final 2026 ಅಂಡರ್-19 ಏಷ್ಯಾಕಪ್ ಏಕದಿನ ಟೂರ್ನಿಯ ಫೈನಲ್(Under-19 Asia Cup ODI tournament)ನಲ್ಲಿ ಶನಿವಾರ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ(INDvPAK) ಸೆಣಸಲಿವೆ. ಪಂದ್ಯ ನಡೆಯುವ ಸ್ಥಳ, ಸಮಯದ ವಿವರ ಇಲ್ಲಿದೆ
India vs Pakistan U19: 9ನೇ ಬಾರಿ ಗೆಲ್ಲಲು ಟೀಂ ಇಂಡಿಯಾ ಸಜ್ಜು
ಅಂಡರ್-19 ಏಷ್ಯಾಕಪ್ ಏಕದಿನ ಟೂರ್ನಿಯ ಫೈನಲ್(Under-19 Asia Cup ODI tournament)ನಲ್ಲಿ ಶನಿವಾರ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ(INDvPAK) ಸೆಣಸಲಿವೆ. ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ, ಈ ಪಂದ್ಯದಲ್ಲಿ ಸುಧಾರಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ತೋರಿ, 9ನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.
25
ಭಾರತ-ಪಾಕಿಸ್ತಾನ ಫೈನಲ್ ಮ್ಯಾಚ್ ತೀವ್ರ ಪೈಪೋಟಿ
ಮತ್ತೊಂದೆಡೆ ಪಾಕಿಸ್ತಾನ ಲೀಗ್ ಪಂದ್ಯದ ರೀತಿಯಲ್ಲೇ ಭಾರತವನ್ನು ಮತ್ತೊಮ್ಮೆ ಕಟ್ಟಿಹಾಕಿ 2ನೇ ಸಲ ಟ್ರೋಫಿ ಎತ್ತಿಹಿಡಿಯಲು ಕಾತರಿಸುತ್ತಿದೆ. ಕಳೆದ ವರ್ಷ ಭಾರತ ವಿರುದ್ಧ ಫೈನಲ್ನಲ್ಲಿ 151 ರನ್ಗಳ ಗೆಲುವು ಸಾಧಿಸಿ, ಪಾಕಿಸ್ತಾನ ಚಾಂಪಿಯನ್ ಆಗಿತ್ತು.
35
ಆರ್ಯವೀರ್ ಸೆಹ್ವಾಗ್ ಮೇಲೆ ಹೆಚ್ಚು ವಿಶ್ವಾಸ
ಭಾರತ ತಂಡ ತನ್ನ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಸೆಹ್ವಾಗ್ 4 ಪಂದ್ಯಗಳಲ್ಲಿ 303 ರನ್ ಗಳಿಸಿದ್ದು, ಫೈನಲ್ನಲ್ಲೂ ಅಬ್ಬರಿಸಲು ಕಾಯುತ್ತಿದ್ದಾರೆ.
ಭಾರತ vs ಪಾಕಿಸ್ತಾನ U19 ಏಷ್ಯಾ ಕಪ್ 2026 ಫೈನಲ್: ಪಂದ್ಯದ ವಿವರಗಳು
ಇಂದು(ನವೆಂಬರ್ 14 ರ ಶನಿವಾರ ) ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಭಾರತದ ಪಾಕಿಸ್ತಾನದ ಸೆಣಸಾಟ ಯಾವಾಗಲೂ ಕ್ರೀಡಾಭಿಮಾನಿಗಳಿಗೆ ರೋಚಕವೆನಿಸುತ್ತದೆ. ಈ ಬಾರಿಯೂ ಮೈದಾನದಲ್ಲಿ ಅದು ಸೃಷ್ಟಿಸಲಿದೆ.
ಸ್ಥಳ:
ಭಾರತ vs ಪಾಕಿಸ್ತಾನ U19 ಏಷ್ಯಾ ಕಪ್ 2026 ಫೈನಲ್ ಪಂದ್ಯವು ಒಮಾನ್ನ ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯವು ನವೆಂಬರ್ 14 ರ ಶನಿವಾರ ಭಾರತೀಯ ಕಾಲಮಾನ ಬೆಳಿಗ್ಗೆ ಬೆಳಗ್ಗೆ 10.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್/ಸೋನಿ ಲಿವ್ ವೀಕ್ಷಿಸಬಹುದು.
55
ಭಾರತ U19 ತಂಡ
ಭಾರತ U19 ತಂಡ
ಲಕ್ಷ್ಯ ರಾಜೇಶ್ ರಾಯಚಂದಾನಿ (ಸಿ)
ಆರ್ಯವೀರ್ ಸೆಹ್ವಾಗ್
ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್)
ಅರ್ಜುನ್ ರಜಪೂತ್
ಇಶಾನ್ ಸೂದ್
ಕಾವ್ಯಾ ಪಟೇಲ್
ಮನಲ್ ಚೌಹಾಣ್
ಮೋಹಿತ್ ಉಲ್ವಾ
ಯಶ್ವೀರ್ ಗೌಡ್
ವಿ.ಕೆ. ವಿನೀತ್
ಯಶ್ಬರ್ಧನ್ ಚೌಹಾಣ್
ರಜತ್ ಬಘೇಲ್
ಶವಿನ್ ವಿನೋದ್
ಆರ್ಯನ್ ಸವ್ಸಾನಿ
ಕುಶಾಗ್ರ ಓಜಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.