ಅಂಡರ್-19 ಏಷ್ಯಾ ಕಪ್ ಗೆದ್ದಿದ್ದಕ್ಕಾಗಿ ಟೀಮ್ ಇಂಡಿಯಾಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

Ravi Janekal   | ANI
Published : Nov 15, 2026, 12:47 PM IST

ಭಾರತ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಒಂದು ವಿಕೆಟ್ ನಿಂದ ಬಗ್ಗು ಬಡಿಯಿತು. ಆ ಮೂಲಕ ಭಾರತ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದುಕೊಂಡು ಬೀಗಿತು.

PREV
15
ಭಾರತ-ಪಾಕಿಸ್ತಾನ ರೋಚಕ ಫೈನಲ್ ಪಂದ್ಯ

ಭಾರತ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಒಂದು ವಿಕೆಟ್ ನಿಂದ ಬಗ್ಗು ಬಡಿಯಿತು. ಆ ಮೂಲಕ ಭಾರತ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದುಕೊಂಡು ಬೀಗಿತು.

ಇದನ್ನೂ ಓದಿ: ಇಂದು ಭಾರತ-ಪಾಕ್‌ ಫೈನಲ್‌ ರೋಚಕ ಪಂದ್ಯ ಎಲ್ಲಿ ವೀಕ್ಷಿಸಬಹುದು? ಸಮಯ, ಸ್ಥಳ, ಸ್ಕ್ರೀಮಿಂಗ್ ವಿವರ ಇಲ್ಲಿದೆ

25
ಪಾಕಿಸ್ತಾನದ ವಿರುದ್ಧ ಗೆದ್ದ ಭಾರತಕ್ಕೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

ಭಾರತ ತಂಡದ ಸಂಪ್ರಾದಾಯಿಕ ಎದುರಾಳಿಯಾದ ಪಾಕಿಸ್ತಾನದೊಂದಿಗೆ ಈ ಬಾರಿಯೂ ರೋಚಕವೆನಿಸುವಂತೆ ಪಂದ್ಯ ನಡೆಯಿತು, ಕೊನೆಗಳಿಗೆಯಲ್ಲಿ ಒಂದು ಸಣ್ಣ ತಪ್ಪು ಮಾಡಿದ್ದರೂ ಏಷ್ಯಾ ಕಪ್ ಕೈತಪ್ಪಿ ಹೋಗುತ್ತಿತ್ತು. ಆದರೆ ಮೋಹಿತ್ ಉಲ್ವಾ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಪಾಕಿಸ್ತಾನದ ವಿರುದ್ಧ ಗೆಲುವಿಗೆ ಟೀಂ ಇಂಡಿಯಾಗೆ ಭಾರೀ ಮೊತ್ತದ ಬಹುಮಾನವೇ ಸಿಗುತ್ತದೆ. ಹಾಗಾದರೆ ಫೈನಲ್ ಪಂದ್ಯದಲ್ಲಿ ಎಷ್ಟು ಬಹುಮಾನ ಸಿಕ್ಕಿತು ಎಂಬ ಕುತೂಹಲ ಕ್ರೀಡಾಭಿಮಾನಿಗಳಿಗೆ ಮೂಡಿಸಿದೆ. ಭಾರತ ಎಷ್ಟು ಬಹುಮಾನ ಪಡೆಯಿತು. ಸೋತ ಪಾಕಿಸ್ತಾನ ಕೂಡ ಬಹುಮಾನ ಪಡೆಯಿತು ಅದರ ಸಂಪೂರ್ಣ ವಿವರ ಇಲ್ಲಿದೆ.

35
ಒಂದೇ ಒಂದು ತಪ್ಪು ಹೆಜ್ಜೆ ಇಟ್ಟಿದ್ದರೂ ಏಷ್ಯಾ ಕಪ್ ಕೈ ಜಾರುತ್ತಿತ್ತು!

ಫೈನಲ್ ಪಂದ್ಯದಲ್ಲಿ ಮೊದಲಿನಿಂದ ಕೊನೆವರೆಗೂ ರೋಚಕತೆ ಇತ್ತು. ಕೊನೆಗಳಿಗೆ ಉಸಿರು ಬಿಗಿಹಿಡಿಯುವಂತೆ ಮಾಡಿತು. ಏಕೆಂದರೆ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಸ್ಕೋರ್ ಬೋರ್ಡ್ 337! ಇದು ಸಾಮಾನ್ಯವಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಅದ್ಭತ ಆಟವಾಡಿದ ಟೀಂ ಇಂಡಿಯಾ ಕೊನೆಯ ಎರಡು ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ನೊಂದಿಗೆ 25 ರನ್‌ಗಳ ಬೇಕಾಗಿತ್ತಷ್ಟೇ

ಇಲ್ಲೇ ಉಸಿರು ಬಿಗಿಹಿಡಿದು ಕೂರಿಸಿದ್ದು. ಏಕೆಂದರೆ ಈ ಕ್ಷಣದಲ್ಲಿ ಒಂದೇ ಒಂದು ತಪ್ಪು ಹೆಜ್ಜೆ ಇಟ್ಟಿದ್ದರೂ ಏಷ್ಯಾ ಕಪ್ ಟ್ರೋಫಿ ಟೀಮ್ ಇಂಡಿಯಾದಿಂದ ಜಾರಿಹೋಗುತ್ತಿತ್ತು. ಆದರೆ ಮೋಹಿತ್ ಉಲ್ವಾ ಹಾಗೆ ಆಗಲು ಬಿಡಲಿಲ್ಲ. ಐದು ವರ್ಷಗಳ ನಂತರ ಭಾರತ ಕೊನೆಗೂ ಏಷ್ಯಾ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಎಂಥಾ ಆಟ ಇದು!

45
ಟೀಂ ಇಂಡಿಯಾಗೆ ಸಿಕ್ಕ ಬಹುಮಾನ ಎಷ್ಟು?

2026 ರ ಅಂಡರ್-19 ಏಷ್ಯಾ ಕಪ್(2026 Under-19 Asia cup) ಗೆದ್ದ ಭಾರತ ತಂಡಕ್ಕೆ 15000 ಅಮೆರಿಕನ್ ಡಾಲರ್! ಅಂದರೆ ಸುಮಾರು ₹1.41 ಮಿಲಿಯನ್ ಬಹುಮಾನ ಸಿಕ್ಕಿತು. ಇನ್ನು ರನ್ನರ್ ಅಪ್ ಪಾಕಿಸ್ತಾನಕ್ಕೂ ಇದರ ಅರ್ಧದಷ್ಟು ಅಂದರೆ 7.500 ಅಮೆರಿಕನ್ ಡಾಲರ್ ಬಹುಮಾನ ಸಿಕ್ಕಿತು. ಕಳೆದ ವರ್ಷದ ಪಾಕಿಸ್ತಾನದ ಬಹುಮಾನ ಮೊತ್ತವು ಇಷ್ಟೇ ಆಗಿತ್ತು.

ಭಾರತ ಒಂಬತ್ತನೇ ಬಾರಿಗೆ ಚಾಂಪಿಯನ್

ಭಾರತವು ಒಂಭತ್ತನೇ ಬಾರಿ ಅಂಡರ್-19 ಏಷ್ಯಾ ಕಪ್ ಗೆಲ್ಲುವ ಮೂಲಕ ಅತ್ಯಧಿಕ ಬಾರಿ ಗೆದ್ದ ಸಾಧನೆ ಮಾಡಿತು. ಆದ್ರೂ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಪ್ರಶಸ್ತಿ ಗೆದ್ದಿರಲಿಲ್ಲ. ಅಲ್ಲದೆ ಎರಡು ಬಾರಿ ಫೈನಲ್‌ಗಳಲ್ಲಿ ಸೋತಿತ್ತು. ಕಳೆದ ವರ್ಷ, ಪಾಕಿಸ್ತಾನವು ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು 191 ರನ್‌ಗಳಿಂದ ಸೋಲಿಸಿತ್ತು. ಆದರೆ ಈ ಬಾರಿ, ಟೀಮ್ ಇಂಡಿಯಾ ತನ್ನ ಸೇಡು ತೀರಿಸಿಕೊಂಡಿದೆ.

55
9ನೇ ಬಾರಿ ಏಷ್ಯಾ ಕಪ್ ಟ್ರೋಫಿಯನ್ನು ಎತ್ತಿ ಹಿಡಿದ ಟೀಂ ಇಂಡಿಯಾ!

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಒಂದು ವಿಕೆಟ್‌ನಿಂದ ಸೋಲಿಸಿತು. ಟೀಮ್ ಇಂಡಿಯಾ 19 ವರ್ಷದೊಳಗಿನವರ ಏಷ್ಯಾ ಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದು ಇದು ಒಂಬತ್ತನೇ ಬಾರಿ, ಇದು ಅತಿ ಹೆಚ್ಚು ಬಾರಿ. ಬಾಂಗ್ಲಾದೇಶ ಎರಡು ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ ಒಮ್ಮೆ ಗೆದ್ದಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories