ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗನ ಡೇಟಿಂಗ್? ಜೊತೆಯಾಗಿ ಕಾಣಿಸಿಕೊಂಡ ಜೋಡಿ

Published : Jan 25, 2026, 04:57 PM IST

ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗನ ಡೇಟಿಂಗ್? ಜೊತೆಯಾಗಿ ಕಾಣಿಸಿಕೊಂಡ ಜೋಡಿ, ಇಬ್ಬರು ಜೊತೆಯಾಗಿ ರೆಸ್ಟೋರೆಂಟ್‌ ಹೊರಗೆ ಕಾಣಿಸಿಕೊಂಡಿದ್ದಾರೆ. ಆರ್‌ಜೆ ಮಹ್ವಾಶ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಚಹಲ್ ಕಾಣಿಸಿಕೊಂಡಿದ್ದಾರೆ.

PREV
16
ಚಹಾಲ್ ಡೇಟಿಂಗ್

ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಧನಶ್ರೀ ವರ್ಮಾ ಜೊತೆಗಿನ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದ ಮೇಲೆ ಆರ್‌ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದರು. ಇತ್ತೀತೆಗೆ ಇನ್‌ಫ್ಲುಯೆನ್ಸರ್, ರೇಡಿಯೋ ಜಾಕಿ ಮಹ್ವಾಶ್ ಅನ್‌ಫಾಲೋ ಮಾಡಿ ಸುದ್ದಿಯಾಗಿದ್ದ ಯಜುವೇಂದ್ರ ಚಹಾಲ್ ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಡಿನ್ನರ್ ಡೇಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

26
ಮುಂಬೈ ರೆಸ್ಟೋರೆಂಟ್‌ನಲ್ಲಿ ಜೋಡಿ

ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಯಜುವೇಂದ್ರ ಚಹಾಲ್ ಹಾಗೂ ಬಿಗ್ ಬಾಸ್ 13ರ ಸ್ಪರ್ಧಿ ಶೆಫಾಲಿ ಬಗ್ಗಾ ಕಾಣಿಸಿಕೊಂಡಿದ್ದಾರೆ. ರೆಸ್ಟೋರೆಂಟ್ ಹೊರಭಾಗದಲ್ಲಿ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಚಹಾಲ್ ಯಾವುದೇ ಅಳುಕಿಲ್ಲದೆ ಕ್ಯಾಮೆರಾ ಎದುರಿಸಿದ್ದರೆ, ಶೆಪಾಲಿ ಬಗ್ಗಾ ಮರೆಮಾಚುವ ಪ್ರಯತ್ನ ಮಾಡಿದ್ದಾರೆ.

36
ಗೌಪ್ಯವಾಗಿಟ್ಟ ಭೇಟಿ

ಯಜುವೇಂದ್ರ ಚಹಾಲ್ ಹಾಗೂ ಶೆಫಾಲಿ ಬಗ್ಗಾ ತಮ್ಮ ಭೇಟಿಯನ್ನು ಗೌಪ್ಯವಾಗಿಟ್ಟಿದ್ದಾರೆ. ಮಾಧ್ಯಮಗಳಲ್ಲಿ ಚಹಾಲ್ ಹಾಗೂ ಶೆಫಾಲಿ ಡಿನ್ನರ್ ಡೇಟಿಂಗ್ ಸುದ್ದಿ ಹರಿದಾಡುತ್ತಿದೆ. ಆದರೆ ಈ ಜೋಡಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇಷ್ಟೇ ಅಲ್ಲ ರೆಸ್ಟೋರೆಂಟ್, ಭೇಟಿ ಕುರಿತು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿಲ್ಲ.

46
ಅನ್‌ಫಾಲೋ ಬೆನ್ನಲ್ಲೇ ಡೇಟಿಂಗ್ ಪ್ರಶ್ನೆ

ಯಜುವೇಂದ್ರ ಚಹಾಲ್ ವೈಯುಕ್ತಿಕ ಜೀವನದಲ್ಲಿ ಹಲವು ಏರಿಳಿತ ಕಂಡಿದ್ದಾರೆ. ಪ್ರಮುಖವಾಗಿ ಧನಶ್ರಿ ವರ್ಮಾ ಜೊತೆಗಿನ ಮದುವೆ ಮುರಿದು ಬಿದ್ದ ಬಳಿಕ ಏಕಾಂಗಿಯಾಗಿದ್ದ ಯಜುವೇಂದ್ರ ಚಹಾಲ್, ಆರ್‌ಜೆ ಮಹ್ವಾಶ್ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಕ್ರಿಕೆಟ್ ಮ್ಯಾಚ್ ವೀಕ್ಷಣೆ ವೇಳೆ, ರೆಸ್ಟೋರೆಂಟ್ , ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಇಬ್ಬರು ಒಬ್ಬರನ್ನೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲೇ ಶೆಫಾಲಿ ಜೊತೆ ಕಾಣಿಸಿಕೊಂಡಿರುವುದು ಇದೀಗ ಚರ್ಚೆಯಾಗುತ್ತಿದೆ.

56
ಅನ್‌ಫಾಲೋ ಟೈಮಿಂಗ್ ಪ್ರಶ್ನೆ

ಯಜುವೇಂದ್ರ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ಅನ್‌ಫಾಲೋ ಮಾಡಿದ ಕೆಲವೇ ದಿನಗಳಲ್ಲಿ ಚಹಾಲ್ ಹಾಗೂ ಶೆಫಾಲಿ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವುದೇ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಫ್ರೀ ಬರ್ಡ್ ಚಹಾಲ್ ಇದೀಗ ಶೆಫಾಲಿ ಜೊತೆ ಟೇಟಿಂಗ್ ಶುರುವಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ.

66
ಧನಶ್ರೀ ವರ್ಮಾ ವಿಚ್ಚೇದನ ಬಳಿಕವೂ ವಿವಾದ

ಧನಶ್ರೀ ವರ್ಮಾ ಜೊತೆಗಿನ ವೈವಾಹಿಕ ಜೀವನ ಮುರಿದು ಬಿದ್ದ ಬಳಿಕವೂ ವಿವಾದ ಮುಂದವರಿದಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರು ಪರೋಕ್ಷವಾಗಿ ಆರೋಪಗಳನ್ನು ಮಾಡಿಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರಗಳು ಹರಿದಾಡಿತ್ತು. ಇನ್ನು ಧನಶ್ರೀ ವರ್ಮಾ ಕೇಳಿದ ಜೀವನಾಂಶ ಕುರಿತು ಭಾರಿ ಚರ್ಚೆಯಾಗಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories