ಬೌಲರ್‌ಗಳನ್ನು ಚೆಂಡಾಡಿ ಅತಿವೇಗದ ಸಾವಿರ ರನ್ ಪೂರೈಸಿ ಹೊಸ ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ!

Published : Nov 08, 2025, 03:12 PM IST

ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

PREV
16
ಆಸ್ಟ್ರೇಲಿಯಾ ಎದುರು ಭಾರತ ಸ್ಪೋಟಕ ಆರಂಭ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ವಿಸ್ಪೋಟಕ ಆರಂಭವನ್ನೇ ಪಡೆದಿದೆ.

26
ಭಾರತ-ಆಸ್ಟ್ರೇಲಿಯಾ 5ನೇ ಪಂದ್ಯಕ್ಕೆ ಮಳೆ ಅಡ್ಡಿ

ಭಾರತ ತಂಡವು ಮೊದಲ 4.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 52 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 23 ಹಾಗೂ ಶುಭ್‌ಮನ್ ಗಿಲ್ 29 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ತಾತ್ಕಾಲಿಕ ಸ್ಥಗಿತವಾಗಿದೆ.

36
ಎಸೆತಗಳ ಆಧಾರದಲ್ಲಿ ಅತಿವೇಗವಾಗಿ ಒಂದು ಸಾವಿರ ರನ್

ಇನ್ನು ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 1000 ರನ್ ಪೂರೈಸಿದ ಬ್ಯಾಟರ್ ಎನ್ನುವ ಅಪರೂಪದ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

46
ಹೊಸ ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ

ಹೌದು, ಎಸೆತಗಳ ಆಧಾರದಲ್ಲಿ ಅತಿವೇಗವಾಗಿ(528 ಎಸೆತ) ಒಂದು ಸಾವಿರ ರನ್ ಪೂರೈಸಿದ ದಾಖಲೆ ಇದೀಗ ಅಭಿಷೇಕ್ ಶರ್ಮಾ ಪಾಲಾಗಿದೆ. ಈ ಮೊದಲು ಅತಿವೇಗವಾಗಿ ಒಂದು ಸಾವಿರ ರನ್ ಪೂರೈಸಿದ ದಾಖಲೆ ಸೂರ್ಯಕುಮಾರ್ ಯಾದವ್(573 ಎಸೆತ) ಅವರ ಹೆಸರಿನಲ್ಲಿತ್ತು.

56
ಇನ್ನಿಂಗ್ಸ್‌ಗಳ ಆಧಾರದಲ್ಲಿ ಅಭಿಗೆ ಎರಡನೇ ಸ್ಥಾನ

ಇನ್ನು ಇನ್ನಿಂಗ್ಸ್‌ಗಳ ಆಧಾರದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಎರಡನೇ ಎರಡನೇ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆ ಕೂಡಾ ಅಭಿಷೇಕ್ ಶರ್ಮಾ ಪಾತ್ರರಾಗಿದ್ದಾರೆ.

66
ಕೊಹ್ಲಿಗೆ ಮೊದಲ ಸ್ಥಾನ

ಅಭಿಷೇಕ್ ಶರ್ಮಾ 28 ಇನ್ನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಭಾರತದ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಕೇವಲ 27 ಇನ್ನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ್ದಾರೆ.

Read more Photos on
click me!

Recommended Stories