ಮದುವೆ ಹಿಂದಿನ ದಿನ ರೆಡ್‌ ಹ್ಯಾಂಡ್ ಆಗಿ ಸೀಝ್ ಆದ್ರಾ ಪಲಾಶ್ ಮುಚ್ಚಲ್? ಮದುವೆ ಸ್ಥಗಿತಗೊಳಿಸಲು ಇದೇ ನಿಜವಾದ ಕಾರಣ?

Published : Nov 28, 2025, 02:35 PM IST

ನವದೆಹಲಿ: ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಅವರ ಮದುವೆ ದಿಢೀರ್ ಸ್ಥಗಿತವಾಗಿಲೂ, ಪಲಾಶ್ ಮುಚ್ಚಲ್ ಮಾಡಿದ ಮೋಸವೇ ಕಾರಣ ಎನ್ನಲಾಗುತ್ತಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ 

PREV
16
ಸ್ಮೃತಿ ಮದುವೆ ದಿನಕ್ಕೊಂದು ಟ್ವಿಸ್ಟ್

ಭಾರತದ ತಾರಾ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂಧನಾ ಅವರ ಮದುವೆ ಸುತ್ತ ಸೃಷ್ಟಿಯಾಗಿರುವ ನಿಗೂಢತೆ ಮುಂದುವರಿದಿದ್ದು, ದಿನಕ್ಕೊಂದು ಹೊಸ ಸುದ್ದಿ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿವೆ.

26
ಮೌನಕ್ಕೆ ಜಾರಿದ ಸ್ಮೃತಿ ಕುಟುಂಬ

ತಮ್ಮ ಭಾವಿ ಪತಿ ವಿರುದ್ಧ ತೀರಾ ಕೆಟ್ಟ ಅಭಿಪ್ರಾಯ ಮೂಡುವ ವಿಚಾರಗಳು ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಸ್ಮೃತಿ ಮಂಧನಾ ಅಥವಾ ಅವರ ಕುಟುಂಬಸ್ಥರು ಮೌನವಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿವೆ.

36
ಡ್ಯಾನ್ಸ್ ಕೊರಿಯೋಗ್ರಾಫರ್ ಜತೆ ಪ್ರಣಯ?

ಮದುವೆ ದಿನ ಸ್ಮೃತಿ ಅವರ ಭಾವಿ ಪತಿ ಎಂದು ಕರೆಸಿಕೊಳ್ಳುತ್ತಿರುವ ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌, ಮಹಿಳಾ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಒಬ್ಬರ ಜೊತೆ ಪ್ರಣಯದಲ್ಲಿದ್ದಾಗ ಸ್ಮೃತಿ ಬಳಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

46
ಮದುವೆ ಸ್ಥಗಿತಗೊಳಿಸಲು ಇದೇ ಕಾರಣ

ಇದರಿಂದಾಗಿ ಆಘಾತಕ್ಕೊಳಗಾದ ಸ್ಮೃತಿ ಮಂಧನಾ ಮದುವೆಯನ್ನು ಸ್ಥಗಿತಗೊಳಿಸಲು ಇದೇ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಯಾವುದೇ ಖಚಿತ ಮಾಹಿತಿಯಿಲ್ಲ

56
ಯಾವುದೇ ಸ್ಷಷ್ಟನೆ ನೀಡದ ಪಲಾಶ್

ತಮ್ಮ ವಿರುದ್ಧ ಇಷ್ಟೆಲ್ಲಾ ಗಂಭೀರ ಆರೋಪ ಕೇಳಿಬರುತ್ತಿದ್ದರೂ ಪಲಾಶ್‌ ಸ್ಪಷ್ಟನೆ ನೀಡಿಲ್ಲ. ಅವರ ಕುಟುಂಬಸ್ಥರೂ ತುಟಿ ಬಿಚ್ಚುತ್ತಿಲ್ಲ. ಇದು ಈ ವಿವಾದಕ್ಕೆ ಪುಷ್ಠಿ ನೀಡುತ್ತಿದೆ.

66
ಸ್ಮೃತಿಗೆ ಜೆಮಿಮಾ ಸಾಥ್

ಇದೇ ವೇಳೆ ತಮ್ಮ ಆಪ್ತ ಸ್ನೇಹಿತೆ ಸ್ಮೃತಿ ಜೊತೆಗಿರಬೇಕು ಎಂದು ಭಾರತೀಯ ಕ್ರಿಕೆಟರ್‌ ಜೆಮಿಮಾ ರೋಡ್ರಿಗ್ಸ್‌ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್‌ ಟಿ20 ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಜೆಮಿಮಾ 10 ದಿನಗಳ ಹಿಂದಷ್ಟೇ ಸ್ಮೃತಿ ಮದುವೆಯಲ್ಲಿ ಪಾಲ್ಗೊಳ್ಳಲು ಬಿಗ್‌ಬ್ಯಾಶ್‌ನಿಂದ ಬಿಡುವು ಪಡೆದು ಆಸ್ಟ್ರೇಲಿಯಾದಿಂದ ಭಾರತಕ್ಕೆ ಆಗಮಿಸಿದ್ದರು.

Read more Photos on
click me!

Recommended Stories