9ನೇ ಕ್ಲಾಸ್ ಫೇಲ್‌ ರಿಂಕು ಸಿಂಗ್‌ಗೆ ಶಿಕ್ಷಣಾಧಿಕಾರಿ ಹುದ್ದೆ; ಪರ-ವಿರೋಧ ಚರ್ಚೆ

Published : Jun 30, 2025, 11:51 AM IST

Rinku Singh BSA Appointment Controversy: ಕ್ರಿಕೆಟಿಗ ರಿಂಕು ಸಿಂಗ್ ಉತ್ತರ ಪ್ರದೇಶದ ಜಿಲ್ಲಾ ಬೇಸಿಕ್ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. 8ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅವರ ನೇಮಕಾತಿ ವಿವಾದಕ್ಕೆ ಕಾರಣವಾಗಿದೆ. ಈ ನೇಮಕಾತಿಯ ಹಿಂದಿನ ಕಾರಣ ಮತ್ತು ವಿರೋಧದ ಕುರಿತು ತಿಳಿಯಿರಿ.

PREV
15

ಕ್ರಿಕೆಟಿಗ ರಿಂಕು ಸಿಂಗ್ ಈಗ ಉತ್ತರ ಪ್ರದೇಶದ ಜಿಲ್ಲಾ ಬೇಸಿಕ್ ಶಿಕ್ಷಣಾಧಿಕಾರಿ ಆಗಲಿದ್ದಾರೆ. ಆದ್ರೆ ರಿಂಕು ಸಿಂಗ್ ವಿದ್ಯಾರ್ಹತೆ ಕೇವಲ 8ನೇ ತರಗತಿ. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ 9ನೇ ತರಗತಿಯಲ್ಲಿ ಫೇಲ್ ಆಗಿ, ಸ್ಕೂಲ್ ಬಿಟ್ಟಿದ್ದರು. ಶಿಕ್ಷಣದಿಂದ ದೂರ ಉಳಿದ ರಿಂಕು ಚಿಕ್ಕ ವಯಸ್ಸಿಗೆ ಕೆಲಸ ಮಾಡಲು ಶುರು ಮಾಡಿದ್ರು. ಆದ್ರೆ ಕ್ರಿಕೆಟ್ ಬಿಡಲಿಲ್ಲ. ಮುಂದೆ ಕ್ರಿಕೆಟ್ ಅವರ ಫ್ಯಾಶನ್ ಆಗಿ ಬದಲಾಗಿತ್ತು. ನಂತರ ಪ್ರೊಫೆಷನ್ ಆಯ್ತು.

25

ಐಪಿಎಲ್ ರಿಂಕುಗೆ ಟರ್ನಿಂಗ್ ಪಾಯಿಂಟ್

ಐಪಿಎಲ್ 2023ರಲ್ಲಿ ಒಂದು ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದಾಗ ರಿಂಕು ಸಿಂಗ್ ಫೇಮಸ್ ಆದ್ರು. ಇದರಿಂದ ಭಾರತೀಯ ತಂಡಕ್ಕೂ ಆಯ್ಕೆಯಾದ್ರು. ಆಗಸ್ಟ್ 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ರು. ಈಗ ಟೀಂ ಇಂಡಿಯಾದ ಭರವಸೆಯ ಫಿನಿಶರ್ ಎಂದೆನಿಸಿಕೊಂಡಿದ್ದಾರೆ.

35

ಬಿಎಸ್‌ಎ ಹುದ್ದೆಗೆ ನೇಮಕ, ಆದ್ರೆ ಯಾಕೆ ವಿರೋಧ?

8ನೇ ತರಗತಿ ಪಾಸ್ ಆದವ್ರು ಶಿಕ್ಷಣ ಸುಧಾರಣೆಯ ಜವಾಬ್ದಾರಿ ಹೊರಬಲ್ಲರಾ? ಈ ನೇಮಕ ಕೇವಲ ಕ್ರಿಕೆಟ್ ಮತ್ತು ರಾಜಕೀ

45

ರಿಂಕು ಸಿಂಗ್ ಬಿಎಸ್‌ಎ ನೇಮಕ: ನೇರ ನೇಮಕಾತಿ ನಿಯಮವೇನು?

ಉತ್ತರ ಪ್ರದೇಶ ಸರ್ಕಾರದ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕ ಗೆದ್ದ ಕ್ರೀಡಾಪಟುಗಳಿಗೆ ಆಡಳಿತ ಹುದ್ದೆಗಳಲ್ಲಿ ನೇರ ನೇಮಕಾತಿ ನೀಡಬಹುದು. ರಿಂಕು ಸಿಂಗ್ ಅವರನ್ನೂ ಈ ನಿಯಮದಡಿಯಲ್ಲಿ ನೇಮಿಸಲಾಗುತ್ತಿದೆ.

55

ಕ್ರಿಕೆಟಿಗ ರಿಂಕು ಸಿಂಗ್ ಅವರನ್ನ ಬಿಎಸ್‌ಎ ಆಗಿ ನೇಮಕ ಮಾಡೋದಕ್ಕೆ ಭಾರಿ ವಿರೋಧ ವ್ಯಕ್ತವಾಗ್ತಿದೆ. ಕಡಿಮೆ ವಿದ್ಯಾಭ್ಯಾಸ ಇರೋ ರಿಂಕು ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯಾ ಅನ್ನೋ ಪ್ರಶ್ನೆ ಎದ್ದಿದೆ.

Read more Photos on
click me!

Recommended Stories