ನವದೆಹಲಿ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, 2022ರಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ಬಳಿಕ ಪಂತ್, ಡಾಕ್ಟರ್ ಬಳಿ ಕೇಳಿದ ಮೊದಲ ಪ್ರಶ್ನೆ ಏನು ಎನ್ನುವ ವಿಚಾರ ಬಹಿರಂಗವಾಗಿದೆ.
2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಕ್ರಿಕೆಟಿಗ ರಿಷಭ್ ಜೀವನ್ಮರಣ ಸ್ಥಿತಿಯಲ್ಲಿದ್ದರೂ ವೈದ್ಯರ ಬಳಿ ಮೊದಲು ಕೇಳಿದ ಪ್ರಶ್ನೆ ಕ್ರಿಕೆಟ್ ಬಗ್ಗೆ. ಇದನ್ನು ವೈದ್ಯ ದಿನ್ಶಾ ಪರ್ದಿವಾಲಾ ಬಹಿರಂಗಪಡಿಸಿದ್ದಾರೆ.
25
2022ರ ಡಿಸೆಂಬರ್ 30ರಂದು ರಾತ್ರಿ ರಿಷಭ್ ಪಂತ್ ಏಕಾಂಗಿಯಾಗಿ ಕಾರು ಚಲಾಯಿಸುವಾಗ, ರಸ್ತೆ ಡಿವೆಂಡರ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಕಾರು ಕೂಡಾ ಸಂಪೂರ್ಣ ಜಕಂ ಆಗಿತ್ತು.
35
ಈ ಬಗ್ಗೆ ಮಾತನಾಡಿರುವ ಅವರು, ‘ರಿಷಭ್ ಬದುಕುಳಿದಿದ್ದೇ ಪವಾಡ. ಈ ರೀತಿ ಅಪಘಾತದಲ್ಲಿ ಮರಣ ಸಂಭವ ಜಾಸ್ತಿ. ರಿಷಭ್ ಗಂಭೀರ ಗಾಯಗೊಂಡಿದ್ದವು. ಚರ್ಮಗಳು ಕಿತ್ತು ಬಂದಿದ್ದವು. ಆದರೆ ಹೆಚ್ಚು ರಕ್ತ ಹೋಗದ ಕಾರಣ ಬದುಕುಳಿದರು’ ಎಂದಿದ್ದಾರೆ.
ರಿಷಭ್ ಮುಂಬೈ ಆಸ್ಪತ್ರೆಗೆ ದಾಖಲಾದಾಗ ಮೊದಲು ಕೇಳಿದ ಪ್ರಶ್ನೆ ‘ನನಗೆ ಮತ್ತೆ ಕ್ರಿಕೆಟ್ ಆಡಲು ಸಾಧ್ಯವೇ’ ಎಂಬುದಾಗಿತ್ತು. ಅವರ ತಾಯಿ ತಮ್ಮ ಮಗನಿಗೆ ಮತ್ತೆ ನಡೆದಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು ಎಂದು ಪರ್ದಿವಾಲಾ ತಿಳಿಸಿದ್ದಾರೆ.
55
ಇನ್ನು ಗಾಯದಿಂದ ಚೇತರಿಸಿಕೊಂಡ ರಿಷಭ್ ಪಂತ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಪಂತ್ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು.