68 ಎಸೆತಗಳಲ್ಲಿ 19 ಸಿಕ್ಸರ್, 7 ಬೌಂಡರಿಗಳೊಂದಿಗೆ 181 ರನ್ ಗಳಿಸಿ ಪ್ರಿಯಾಂಶ್ ಆರ್ಯ ವಿಶ್ವ ದಾಖಲೆ!

Published : Nov 24, 2026, 02:09 PM IST

Priyansh Arya: ಮಂಗಳವಾರ ನಡೆದ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯ ತಮಿಳುನಾಡು ವಿರುದ್ಧದ ಪಂದ್ಯ ಕೇವಲ 68 ಎಸೆತಗಳಲ್ಲಿ 19 ಸಿಕ್ಸ್, 7 ಬೌಂಡರಿಯೊಂದಿಗೆ 181 ರನ್ ಗಳಿಸುವ ಮೂಲಕ ಪ್ರಿಯಾಂಶ್ ವಿಶ್ವ ದಾಖಲೆ ಮಾಡಿದರು.

PREV
14
ಸೈಯದ್ ಮುಸ್ತಾಕ್ ಅಲಿ ಟ್ರೋಫಿ: ಪ್ರಿಯಾಂಶ್ ಆರ್ಯ ದಾಖಲೆ

ದೆಹಲಿ ತಂಡದ ನಾಯಕ ಪ್ರಿಯಾಂಶ್ ಆರ್ಯ ಮಂಗಳವಾರ ನಡೆದ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ರನ್‌ಗಳ ಹೊಳೆ ಹರಿಸಿದರು. ಕೇವಲ 68 ಎಸೆತಗಳಲ್ಲಿ 19 ಸಿಕ್ಸ್, 7 ಬೌಂಡರಿಯೊಂದಿಗೆ 181 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಆದರು. ಈ ಹಿಂದೆ ಈ ದಾಖಲೆ ಕೆಎಲ್ ರಾಹುಲ್ ಹೆಸರಲ್ಲಿತ್ತು. ಇದೀಗ ರಾಹುಲ್ ದಾಖಲೆಯನ್ನೇ ಪ್ರಿಯಾಂಶ್ ಆರ್ಯ ಹಿಂದಿಕ್ಕಿದರು.

24
ತಮಿಳುನಾಡು ತಂಡದ ವಿರುದ್ಧ ಪ್ರಿಯಾಂಶ್ ರೋಚಕ ಬ್ಯಾಟಿಂಗ್!

ಮಂಗಳಾರ ದೆಹಲಿ-ತಮಿಳುನಾಡು ನಡುವೆ ನಡೆದ ರೋಚಕ ಪಂದ್ಯದಲ್ಲಿ ಪ್ರಿಯಾಂಶ್ ಅವರ ಶತಕದ ನೆರವಿನಿಂದ ದೆಹಲಿ ತಂಡ 275 ರನ್ ಗಳಿಸಿತು. ಈ ವರ್ಷದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ರಿಯಾಂಶ್ 152 ರನ್ ಗಳಿಸಿದ್ದರು. ಇದೀಗ ಪ್ರಿಯಾಂಶ್ ಅವರ 181 ರನ್‌ಗಳ ಇನ್ನಿಂಗ್ಸ್ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಒಬ್ಬರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದಾಗಿದೆ.

34
68 ಎಸೆತಗಳಲ್ಲಿ 19 ಸಿಕ್ಸ್, 7 ಬೌಂಡರಿ 181 ರನ್ ಗಳಿಸಿ ವಿಶ್ವ ದಾಖಲೆ

ಈ ಪಂದ್ಯಾವಳಿಯಲ್ಲಿ ಪ್ರಿಯಾಂಶ್ ಆರ್ಯ ದೆಹಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ತಮಿಳುನಾಡು ವಿರುದ್ಧದ ಇನ್ನಿಂಗ್ಸ್ ಕ್ರೀಡಾಭಿಮಾನಿಗಳು ಉಸಿರುಬಿಗಿಹಿಡಿದು ನೋಡುವಂತೆ ಮಾಡಿತು. ಇನ್ನೊಂದೆದೆ ಪ್ರಿಯಾಂಶು ಆರ್ಯಾ ಬ್ಯಾಟಂಗ್ ಅರ್ಭಟಕ್ಕೆ ದೆಹಲಿ ತಂಡಕ್ಕೆ ಹುಮ್ಮಸ್ಸು ಇಮ್ಮಡಿಗೊಳಿಸಿತು. ಈ ಪಂದ್ಯದಲ್ಲಿ ಬಹುಕಾಲ ನೆನಪಲ್ಲಿ ಉಳಿಯಲಿದೆ ಏಕೆಂದರೆ ಇದು ಐತಿಹಾಸಿಕ ಇನ್ನಿಂಗ್ಸ್. ಪ್ರಿಯಾಂಕ್ ಕೇವಲ 68 ಎಸೆತಗಳಲ್ಲಿ 181 ರನ್ ಗಳಿಸಿದ್ದು ಸಾಮಾನ್ಯ ಸಾಧನೆಯಲ್ಲ.68 ಎಸೆತಗಳಲ್ಲಿ ಬರೋಬ್ಬರಿ 19 ಸಿಕ್ಸರ್‌ಗಳು, 7 ಬೌಂಡರಿಗಳು ಸೇರಿವ. ಪ್ರಿಯಾಂಶ್ ಹೊರತುಪಡಿಸಿ ದೆಹಲಿ ತಂಡದ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ 30 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ.

44
ಭಾರತ ಪರ ಅತಿ ಹೆಚ್ಚು ಟಿ20 ಸ್ಕೋರ್

ಪುರುಷರ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ 181 ರನ್‌ಗಳು ಈಗ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಈ ವರ್ಷದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 152 ರನ್ ಗಳಿಸಿದ್ದ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. 2024 ರಲ್ಲಿ ಹೈದರಾಬಾದ್ ಪರ 151 ರನ್ ಗಳಿಸಿದ್ದ ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೇರೆ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ 150 ರನ್‌ಗಳ ಗಡಿಯನ್ನು ತಲುಪಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories