ಮುಸ್ಲಿಂ ನಟನೊಂದಿಗೆ ಸೋನಾಕ್ಷಿ ಸಿನ್ಹಾ ಮದುವೆ, ಅಪ್ಪ ಒಪ್ಪಿದ್ರೂ, ಅವಳಿ ಸಹೋದರರು ಒಪ್ಪಿಲ್ಲವೇ?

First Published | Jun 21, 2024, 10:36 PM IST

ಬಾಲಿವುಡ್ ನಲ್ಲಿ ಸದ್ಯ ಸೋನಾಕ್ಷಿ ಸಿನ್ಹಾ ಮದುವೆ ಚರ್ಚೆಯಾಗ್ತಿದೆ. ಮನೆಯಲ್ಲೇ ಸೋನಾಕ್ಷಿ ಮದುವೆಗೆ ಅಸಮಾಧಾನವಿದೆ. ಅಪ್ಪ ಶ್ರತ್ರುಘ್ನಾ ಸಿನ್ಹಾ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾದ್ರೂ ಅವಳಿ ಸಹೋದರರು ಎಲ್ಲೂ ಕಾಣಿಸಿಕೊಂಡಿಲ್ಲ. ಇದು ಅನುಮಾನ ಹುಟ್ಟುಹಾಕಿದೆ.

ಬಾಲಿವುಡ್ ನಲ್ಲಿ ಸದ್ಯ ಸೋನಾಕ್ಷಿ ಸಿನ್ಹಾ ಮದುವೆ ಚರ್ಚೆಯಾಗ್ತಿದೆ. ಮನೆಯಲ್ಲೇ ಸೋನಾಕ್ಷಿ ಮದುವೆಗೆ ಅಸಮಾಧಾನವಿದೆ. ನಟ ಜಹೀರ್ ಇಕ್ಬಾಲ್‌ ಜೊತೆ ಜೂ.23ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೀರ್ಘ ಕಾಲದಿಂದ ಸಂಬಂಧದಲ್ಲಿರುವ ಇವರಿಬ್ಬರು ಜಹೀರ್ ಅವರ ನಿವಾಸದಲ್ಲಿ ಸರಳವಾಗಿ ವಿವಾಹ ನೋಂದಣಿ ಮೂಲಕ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.

ಆದರೆ ಈ ಮದುವೆಗೆ ಸೋನಾಕ್ಷಿ ಸಿನ್ಹಾ  ಪೋಷಕರು ಮತ್ತು ಅವರ ಸಹೋದರರು ಅಸಮಾಧಾನ ಹೊಂದಿದ್ದಾರೆ. ಇದಕ್ಕೆ ಕಾರಣ ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿರುವುದು ಎನ್ನಲಾಗಿದೆ. ಹೆತ್ತವರಿಗೆ ನೋವಿದ್ದರೂ ಆ ನೋವನ್ನು ತೋರಿಸಿಕೊಂಡಿಲ್ಲ. ಮಗಳ ಸಂತೋಷದಲ್ಲಿ ಭಾಗಿಯಾಗಿದ್ದಾರೆ. ಆದರೆ ಸೋನಾಕ್ಷಿ ಸಹೋದರರಿಬ್ಬರೂ ಎಲ್ಲೂ ಕಾಣಿಸಿಕೊಂಡಿಲ್ಲ. ಮದುವೆಯಲ್ಲೂ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ. 

Tap to resize

ಇನ್ನು ಸೋನಾಕ್ಷಿ ಸಿನ್ಹಾ  ಮದುವೆ ಬಗ್ಗೆ ನಮಗೆ ಅಸಮಾಧಾನ ಇತ್ತು. ಮದುವೆಯ ಬಗ್ಗೆ ತಮ್ಮ ಕುಟುಂಬದಲ್ಲಿ ಕೆಲವು ಒತ್ತಡಗಳಿವೆ. ಆದರೆ ಈಗ ಈ ಎಲ್ಲಾ ಒತ್ತಡಗಳು ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.  ಜೂನ್ 23 ಸೋನಾಕ್ಷಿಯ ಮದುವೆಯ ದಿನಾಂಕವಲ್ಲ ಎಂದು ಶತ್ರುಘ್ನ ಬಹಿರಂಗಪಡಿಸಿದರು. ವಾಸ್ತವವಾಗಿ, ಇದು ಅವಳ ಸ್ವಾಗತದ ದಿನಾಂಕವಾಗಿದೆ. ಜೂನ್ 23 ರ ಸಂಜೆ ನಾವೆಲ್ಲರೂ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದಿದ್ದಾರೆ. 

ವಿವಾಹದ ಪೂರ್ವ ಘರ್ಷಣೆಗಳು ಸಹ ಸಾಮಾನ್ಯವಾಗಿದೆ. ನಾವೆಲ್ಲರೂ ಈಗ ಚೆನ್ನಾಗಿದ್ದೇವೆ. ಯಾವುದೇ ಒತ್ತಡ ಇಲ್ಲ. ಶತ್ರುಘ್ನ ಸಿನ್ಹಾ ಅವರ ಮಗಳು ಎಂಬ ಕಾರಣಕ್ಕೆ ಸೋನಾಕ್ಷಿ ಜೀವನದಲ್ಲಿ ತನಗೆ ಬೇಕಾದುದನ್ನು ಹೊಂದಲು ಸಾಧ್ಯವಿಲ್ಲ ಎಂದಲ್ಲ. ಜೂನ್ 23ರಂದು ನಾವೆಲ್ಲರೂ ಮಜಾ ಮಾಡುತ್ತೇವೆ. ಇದು ನನ್ನ ಏಕೈಕ ಪುತ್ರಿ ಸೋನಾಕ್ಷಿಯ ಜೀವನ, ನಾನು ತುಂಬಾ ಹೆಮ್ಮೆಪಡುತ್ತೇನೆ ಮತ್ತು ಅಪಾರವಾಗಿ ಇಷ್ಟಪಡುತ್ತೇನೆ. ಅವಳು ನನ್ನನ್ನು ತನ್ನ ಶಕ್ತಿಯ ಸ್ತಂಭ ಎಂದು ಕರೆಯುತ್ತಾಳೆ. ನಾನು ಮದುವೆಗೆ ಖಂಡಿತ ಇರುತ್ತೇನೆ ಎಂದಿದ್ದಾರೆ. ಸೋನಾಕ್ಷಿಗೆ "ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕು" ಇದೆ ಎಂದು ಶತ್ರುಘ್ನ ಹೇಳಿದ್ದಾರೆ 

ಸೋನಾಕ್ಷಿ ಸಿನ್ಹಾ ಇತ್ತೀಚಿಗೆ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ದೊಡ್ಡ ಗೆಟ್ ಟುಗೆದರ್ ಮಾಡಿದ್ದರು. ಆಕೆಯ ಹೆತ್ತವರಾದ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ, ಭಾವೀ ಪತಿಯ ಮನೆಯವರು ಈ ಪಾರ್ಟಿಯಲ್ಲಿ ಇದ್ದರು. ಆದರೆ ಸೋನಾಕ್ಷಿ ಅವಳಿ  ಸಹೋದರರಾದ ಲವ ಮತ್ತು ಕುಶ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಹಲವಾರು ರೂಮರ್‌ಗಳು ಹುಟ್ಟಿಕೊಂಡಿವೆ. ಹೆತ್ತವರು ಒಪ್ಪಿಕೊಂಡರೂ ಸಹೋದರರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಇನ್ನು ಇತ್ತೀಚೆಗೆ ತಂದೆ  ಶತ್ರುಘ್ನ ಸಿನ್ಹಾ  ಹೌದಾ, ಮದುವೆನಾ, ಈ ಬಗ್ಗೆ ನನಗಿನ್ನೂ ಏನೂ ಗೊತ್ತೇ ಇಲ್ಲ ಎನ್ನುವ ಮೂಲಕ ಸುದ್ದಿಯಾಗಿದ್ದರು. ಮುಂದುವರೆದು ನನ್ನ ಆಶೀರ್ವಾದ ಖಂಡಿತಾ ಅವಳೊಂದಿಗೆ ಇರುತ್ತದೆ. ಏಕೆಂದರೆ, ಅವಳು ಪ್ರಪಂಚದ ಎಲ್ಲಾ ಸಂತೋಷವನ್ನು ಪಡೆಯಬೇಕೆಂದು ಹೆತ್ತವರಾದ ನಾವು ಬಯಸುತ್ತೇವೆ ಎಂದಿದ್ದರು. ಅಲ್ಲಿಂದ ಮದುವೆ ಬಗ್ಗೆ ಊಹಾಪೋಹಗಳು ಹರಿದಾಡಿದವು. 
 

ಸೋನಾಕ್ಷಿ ಸಿನ್ಹಾ ಅವರ ಸಹೋದರ ಲವ್ ಸಿನ್ಹಾ ಅವರ ವಿವಾಹದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳು ಕಳೆದ ಕೆಲವು ದಿನಗಳಿಂದ ಹಬ್ಬಿದ್ದು. ನಿಖರವಾದ ಕಾರಣ ತಿಳಿದಿಲ್ಲವಾದರೂ, ತನ್ನ ಸಹೋದರಿಯ ಮದುವೆಯ ಬಗ್ಗೆ ತಿಳಿದಿಲ್ಲವೇ ಎಂದೆಲ್ಲ ಪ್ರತಿಕ್ರಿಯೆಗಳು ವ್ಯಕ್ತವಾದವು ಇದಕ್ಕೆ   ಲವ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ "ಆತ್ಮೀಯ ಮಾಧ್ಯಮ ಮಿತ್ರರೇ. ನಾನು ರಹಸ್ಯ ಸಂದೇಶಗಳನ್ನು ಪೋಸ್ಟ್ ಮಾಡುವುದಿಲ್ಲ. ನಾನು ಏನನ್ನಾದರೂ ಹೇಳಬೇಕಾದಾಗ ನಾನು ಅದನ್ನು ಸ್ಪಷ್ಟವಾಗಿ ಹೇಳುತ್ತೇನೆ" ಎಂದು ಪೋಸ್ಟ್ ಮಾಡಿದ್ದರು.

ಜಹೀರ್ ಇಕ್ಬಾಲ್ ಅವರೊಂದಿಗೆ ಸೋನಾಕ್ಷಿ ಸಿನ್ಹಾ ಅವರ ವಿವಾಹದ ಮೊದಲ ವರದಿಗಳು ಹೊರಬಂದಾಗ, ಇದು ಸಂಪೂರ್ಣ ಸುದ್ದಿಯ ಬಗ್ಗೆ ನಟಿಯ ಸಹೋದರ ಲವ್ ಸಿನ್ಹಾ ನೀಡಿದ ಪ್ರತಿಕ್ರಿಯೆ ಸಾಕಷ್ಟು ಆಶ್ಚರ್ಯಕರವಾಗಿತ್ತು.  ಈ ವಿಷಯದಲ್ಲಿ ನನಗೆ ಯಾವುದೇ ಪ್ರತಿಕ್ರಿಯೆ ಅಥವಾ ಇದರಲ್ಲಿ ಒಳಗೊಳ್ಳುವುದು ಇಷ್ಟವಿಲ್ಲ ಎಂದಿದ್ದರು.
 

Latest Videos

click me!