ಅಂಬಾನಿ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್‌ ಗಳಿಗೆ ಆಮಂತ್ರಣವಿಲ್ಲ ಏಕೆ!?

Published : Jun 20, 2024, 10:39 PM ISTUpdated : Jun 21, 2024, 09:23 PM IST

ಸಕ್ಸಸ್ ಪಾರ್ಟಿಗಳು ಅಥವಾ ಆರತಕ್ಷತೆಗಳನ್ನು ಹೊರತುಪಡಿಸಿ, ಬೇರೆ ಯಾವುದಾದರೂ ಸ್ಥಳದಲ್ಲಿ ಬಾಲಿವುಡ್ ತಾರೆಯರನ್ನು ಒಟ್ಟಿಗೆ ನೋಡಬಹುದು ಎಂದರೆ ಅದು ಅಂಬಾನಿ ಕುಟುಂಬದ ಕಾರ್ಯಕ್ರಮ. ಬಾಲಿವುಡ್ ಸೆಲೆಬ್ರಿಟಿಗಳು ಫೋಟೋ ತೆಗೆದುಕೊಳ್ಳಲು ಪಾಪರಾಜಿಗಳನ್ನು ಕರೆಯುವುದನ್ನು ನಾವು ಆಗಾಗ ಕೇಳಿದ್ದೇವೆ. ಆದರೆ ಅಂಬಾನಿಗಳು ತಮ್ಮ ಕಾರ್ಯಕ್ರಮದ ಸುಂದರ ಸನ್ನಿವೇಶಗಳನ್ನು ಸೆರೆ ಹಿಡಿಯಲು ಪಾಪ್‌ಗಳನ್ನು ಕರೆಯುತ್ತಾರೆಯೇ?

PREV
16
ಅಂಬಾನಿ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್‌ ಗಳಿಗೆ ಆಮಂತ್ರಣವಿಲ್ಲ ಏಕೆ!?

ಬಾಲಿವುಡ್‌ ಸೇರಿ ಭಾರತೀಯ ಸೆಲೆಬ್ರಿಟಿಗಳ ಪಾಪರಾಜಿ ವರೀಂದರ್ ಚಾವ್ಲಾ ಈ ಬಗ್ಗೆ ಮಾತನಾಡಿದ್ದಾರೆ. ರೆಡ್ಡಿಟ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಅಥವಾ ಏನಾದರೂ ಕೇಳಿ ಎಂದು ಪ್ರಶ್ನೆ ಹಾಕಿದ್ದರು. ಅಲ್ಲಿ ಅವರು ಬಾಲಿವುಡ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

26

ಈ ವೇಳೆ ಅಂಬಾನಿಗಳು ಫೋಟೋಗ್ರಾಫರ್ ಅನ್ನು ಕರೆಯುತ್ತಾರೆಯೇ ಅಥವಾ ಪಾಪ್‌ಗಳು ತಾವಾಗಿಯೇ ಕಾಣಿಸಿಕೊಳ್ಳುತ್ತಾರೆಯೇ ಎಂದು ರೆಡ್ಡಿಟ್ ಬಳಕೆದಾರರು ಕೇಳಿದಾಗ ಚಾವ್ಲಾ  ಅಂಬಾನಿಗಳು ತಮ್ಮ ಕಾರ್ಯಕ್ರಮಗಳಿಗೆ ಪಾಪ್‌ಗಳನ್ನು ಕರೆಯುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಅವರು ಪಾಪಗಳನ್ನು ಕರೆಯಬೇಕು ಎಂದು ನೀವು ಭಾವಿಸುತ್ತೀರಾ Lol ಎಂದು ಉತ್ತರಿಸಿದ್ದಾರೆ.

36

ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಲಾಂಚ್ ಕಾರ್ಯಕ್ರಮವಾಗಲಿ ಅಥವಾ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭವಾಗಲಿ, ಅಂಬಾನಿಗಳು ತಮ್ಮ ಕಾರ್ಯಕ್ರಮಗಳಿಗೆ ಹಾಜರಾಗುವ ಬಾಲಿವುಡ್ ಎ-ಲಿಸ್ಟರ್‌ಗಳ ಚಿತ್ರಗಳನ್ನು ಕ್ಲಿಕ್ಕಿಸಲು ಪಾಪರಾಜಿಗಳು ಸ್ವತಃ ಆಕರ್ಷಿಸುತ್ತಾರೆ.

46

ಇಷ್ಟೇ ಅಲ್ಲ, ಎಲ್ಲಾ ಸೆಲೆಬ್ರಿಟಿಗಳು ಪಾಪರಾಜಿಗಳನ್ನು  ಫೋಟೋ ತೆಗೆಯಲು ಕರೆಯುತ್ತಾರೆಯೇ ಎಂದು ಕೇಳಿದಾಗ, ವರೀಂದರ್,  ಕೆಲವೊಮ್ಮೆ ಚಲನಚಿತ್ರ ಪ್ರಚಾರದ ಸಮಯದಲ್ಲಿ, ಅವರು ನಮ್ಮನ್ನು ವಿಮಾನ ನಿಲ್ದಾಣದ ಸ್ಪಾಟಿಂಗ್‌ಗೆ ಕರೆಯುತ್ತಾರೆ" ಎಂದು  ಉತ್ತರಿಸಿದ್ದಾರೆ. ಆದರೆ ರೆಸ್ಟೋರೆಂಟ್‌ಗಳು, ಜಿಮ್, ಕ್ಲಿನಿಕ್ ಇತ್ಯಾದಿಗಳಲ್ಲಿ ನಮ್ಮ ತಂಡವು ಅವರ ಕಾರನ್ನು ಫಾಲೋ ಮಾಡುತ್ತದೆ ಎಂದಿದ್ದಾರೆ. 

56

ಹೆಚ್ಚಾಗಿ ಸೆಲಬ್ರೆಟಿಗಳು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ವಿವಧ ಮೂಲಗಳಿಂದ ಮಾಹಿತಿ ಸಿಗುತ್ತದೆ. ಭಿಕ್ಷುಕರು ಸಹ ಸೆಲೆಬ್ರಿಟಿಗಳ ಬಗ್ಗೆ ಸುಳಿವು ನೀಡಲು ಪಾಪರಾಜಿಯನ್ನು ಕರೆಯುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. 'ನೀವು ನಂಬುವುದಿಲ್ಲ, ಮುಂಬೈನಲ್ಲಿ ಅನೇಕ ಭಿಕ್ಷುಕರು ನಮ್ಮ ಸಿಬ್ಬಂದಿಯ ಫೋನ್ ಸಂಖ್ಯೆಯನ್ನು ಹೊಂದಿದ್ದಾರೆ." ಎಂದು ಬಹಿರಂಗಪಡಿಸಿದ್ದಾರೆ. 

66

ಇವೆಲ್ಲದರ ಮಧ್ಯೆ ಅಂಬಾನಿಗಳು ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪೂರ್ವ ವಿವಾಹ ಸಮಾರಂಭವನ್ನು ವಿಹಾರದಲ್ಲಿ ಆಚರಿಸಿದರು. ಬಾಲಿವುಡ್ ಸೆಲೆಬ್ರಿಟಿಗಳಾದ ಜಾನ್ವಿ ಕಪೂರ್, ಸಾರಾ ಅಲಿ ಖಾನ್, ರಣವೀರ್ ಸಿಂಗ್, ಶಾರುಖ್ ಖಾನ್ ಮತ್ತು ಇತರರು ಗ್ರ್ಯಾಂಡ್ ಬ್ಯಾಷ್‌ನಲ್ಲಿ ಭಾಗವಹಿಸಿದ್ದರು. ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿಂದಿನ ಸುಂದರ ಕ್ಷಣಗಳನ್ನು ಸೆರೆ ಹಿಡಿದಿರುವುದು ಜೋಸೆಫ್ ರಾಧಿಕ್ ಎಂಬ ಹೆಸರಾಂತ ಸೆಲೆಬ್ರಿಟಿ ಫೋಟೋಗ್ರಾಫರ್.

Read more Photos on
click me!

Recommended Stories