Madhuri Dixit Birthday; ದೂರದರ್ಶದಿಂದ ರಿಜೆಕ್ಟ್ ಆಗಿದ್ದ ಮಾಧುರಿ ಸ್ಟಾರ್ ನಟಿಯಾಗಿ ಬೆಳೆದ ರೋಚಕ ಕಥೆ

First Published | May 15, 2022, 1:25 PM IST

90ರ ದಶಕದ ಚಿತ್ರಪ್ರಿಯರ ಹೃದಯಗೆದ್ದ ಸ್ಟಾರ್ ನಾಯಕಿ ಮಾಧುರಿ ದೀಕ್ಷಿತ್. ಬಾಲಿವುಡ್ ಸಿನಿಮಾರಂಗ ಆಳಿದ ನಟಿ ಮಾಧುರಿ ದೀಕ್ಷಿತ್ ಯಾರಿಗೆ ತಾನೆ ಇಷ್ಟವಿಲ್ಲ. ನಟನೆ, ಸೌಂದರ್ಯ ಮತ್ತು ಡಾನ್ಸ್ ಎಲ್ಲಾ ವಿಚಾರಗಳಲ್ಲೂ ಅಭಿಮಾನಿಗಳ ಮನಗೆದ್ದ ನಟಿ ಮಾಧುರಿ ದೀಕ್ಷಿತ್.

90ರ ದಶಕದ ಚಿತ್ರಪ್ರಿಯರ ಹೃದಯಗೆದ್ದ ಸ್ಟಾರ್ ನಾಯಕಿ ಮಾಧುರಿ ದೀಕ್ಷಿತ್. ಬಾಲಿವುಡ್ ಸಿನಿಮಾರಂಗ ಆಳಿದ ನಟಿ ಮಾಧುರಿ ದೀಕ್ಷಿತ್ ಯಾರಿಗೆ ತಾನೆ ಇಷ್ಟವಿಲ್ಲ. ನಟನೆ, ಸೌಂದರ್ಯ ಮತ್ತು ಡಾನ್ಸ್ ಎಲ್ಲಾ ವಿಚಾರಗಳಲ್ಲೂ ಅಭಿಮಾನಿಗಳ ಮನಗೆದ್ದ ನಟಿ ಮಾಧುರಿ ದೀಕ್ಷಿತ್.

ಮಾಧುರಿ ದೀಕ್ಷಿತ್ ಸಿನಿಮಾಗಳ ಸಂಖ್ಯೆ ಇಂದು ಕಡಿಮೆಯಾಗಿರಬಹುದು. ಆದರೆ ಅಭಿಮಾನಿಗಳ ಬಳಗ ದೊಡ್ಡದಿದೆ. ಅಪರೂಪಕ್ಕೊಂದು ಸಿನಿಮಾಗಳಲ್ಲಿ ನಟಿಸುವ ಮೂಲಕ ಮಾಧುರಿ ದೀಕ್ಷಿತ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಕಿರುತರೆಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ನಟಿ ಮಾಧುರಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

Tap to resize

ಬಾಲಿವುಡ್‌ನ ಸ್ಟಾರ್ ನಾಯಕಿ ಮಾಧುರಿ ದೀಕ್ಷಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಮಾಧುರಿ ದೀಕ್ಷಿತ್ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.

Image Credit: Getty Images

ಡ್ಯಾನ್ಸಿಂಗ್ ಕ್ವೀನ್ ಮಾಧುರಿ ದೀಕ್ಷಿತ್ ದೂರದರ್ಶನದಿಂದ ರಿಜೆಕ್ಟ್ ಆಗಿದ್ದರು. ಬೆಂಜಮಿನ್ ಗಿಲಾನಿ ಅವರನ್ನು ಸೇರಿದಂತೆ ಅನೇಕ ಟಿವಿ ಕಾರ್ಯಕ್ರಮವನ್ನು ದೂರದರ್ಶನ ತಿರಸ್ಕರಿಸಿತ್ತು.

1980 ದಶಕದ ಮಧ್ಯಭಾಗದಲ್ಲಿ ದೂರದರ್ಶನ ಕೇಂದ್ರ ಕಛೇರಿ ನವದೆಹಲಿ ಮಂಡಿ ಹೌಸ್ ನಲ್ಲಿತ್ತು. ಮಾಧುರಿ ದೀಕ್ಷಿತ್ ಒಳಗೊಂಡಿರುವ ಬಾಂಬೆ ಮೇರಿ ಹೈ ಟಿವಿ ಸರಣಿಯನ್ನು ತಿರಸ್ಕರಿದ್ದರು. ಅಂದು ಅನಿಲ್ ತೇಜಾನಿ ಟಿವಿ ಕಾರ್ಯಕ್ರಮವನ್ನು ನಿರ್ದೇಶಿಲು ಸಜ್ಜಾಗಿದ್ದರು.

ಇದು ಧಕ್ ಧಕ್ ಸುಂದರಿಗೆ ತುಂಬಾ ನಿರಾಸೆಯಾಯಿತು. ಬಳಿಕ ಮತ್ತೊಂದು ಸಿನಿಮಾದಿಂದನೂ ಮಾಧುರಿ ತಿರಸ್ಕರಿಸಲ್ಪಟ್ಟರು. ಇದು ಕೂಡ ತುಂಬಾ ನಿರಾಸೆಯಾಗಿತ್ತು. ಇದು ಗೋವಿಂದ ನಿಹಲಾನಿಯವರ ಚಿತ್ರವಾಗಿತ್ತು.

ಕೊನೆಯದಾಗಿ ಮಾಧುರಿ ದೀಕ್ಷಿತ್ ರಾಜಶ್ರೀ ಪ್ರೊಡಕ್ಷನ್ ಅವರ ಅಬೋಧ್ ನಲ್ಲಿ ಕಾಣಿಸಿಕೊಂಡರು. ಬಳಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಮಾಧುರಿ ದೀಕ್ಷಿತ್ ಬಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

Latest Videos

click me!