ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಗಾಯಕಿ ಬ್ರಿಟ್ನಿ (Britney Spears) ಮತ್ತು ಅವರ ಬಾಯ್‌ಫ್ರೆಂಡ್ ಸಾಮ್ (Sam) ಶನಿವಾರ ಮಿರಾಕಲ್ ಬೇಬಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
'ನಾವು ತುಂಬಾ ಬೇಸರದಿಂದ ನಮ್ಮ ಪುಟ್ಟ ಮಿರಾಕಲ್ ಬೇಬಿಯನ್ನು (Miracle baby) ಕಳೆದುಕೊಂಡಿದ್ದೀವಿ ಎಂದು ತಿಳಿಸುವುದಕ್ಕೆ ಬೇಸರವಾಗುತ್ತದೆ. ಈ ಕಷ್ಟಕರ ಸಮಯ ಯಾವ ಪೋಷಕರಿಗೂ ಬರಬಾರದು' ಎಂದು ಬ್ರಿಟ್ನಿ ಬರೆದುಕೊಂಡಿದ್ದಾರೆ.
'ನಾವು ಕೆಲವು ತಿಂಗಳುಗಳ ಕಾಲ ಕಾದು, ನಂತರ ಪ್ರೆಗ್ನೆನ್ಸಿ ಅನೌನ್ಸ್ (Pregnancy announce) ಮಾಡಬೇಕಿತ್ತು. ನಾವು ಓವರ್ ಎಕ್ಸೈಟ್ ಆಗಿದ್ದ ಕಾರಣ ಬೇಗ ರಿವೀಲ್ ಮಾಡಲಾಗಿತ್ತು' ಎಂದು ಬ್ರಿಟ್ನಿ ಹೇಳಿದ್ದಾರೆ.
'ನಮ್ಮಿಬ್ಬರ ನಡುವೆ ಪ್ರೀತಿ ಹೆಚ್ಚಿಗೆ ಇದೆ. ನಮ್ಮ ಬ್ಯೂಟಿಫುಲ್ ಫ್ಯಾಮಿಲಿ (Beautiful Family) ದೊಡ್ಡದು ಮಾಡುವುದಕ್ಕೆ ನಾನು ಇಷ್ಟ ಪಡುತ್ತೀವಿ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿ. ಈ ಸಮಯದಲ್ಲಿ ನಮಗೆ ಸ್ವಲ್ಪ ಪ್ರೈವಸಿ (Privacy) ನೀಡಿ' ಎಂದಿದ್ದಾರೆ ಬ್ರಿಟ್ನಿ.
'ಶೀಘ್ರದಲ್ಲಿ ನಮ್ಮ ಕುಟುಂಬಕ್ಕೆ ಮತ್ತೊಂದು ಮಿರಾಕಲ್ ಬೇಬಿಯನ್ನು ಬರ ಮಾಡಿಕೊಳ್ಳಲುತ್ತೀವಿ.'ಎಂದು ಬ್ರಿಟ್ನಿ ಬಾಯ್‌ಫ್ರೆಂಡ್ (boyfriend) ಸಾಮ್ ಕಾಮೆಂಟ್ ಮಾಡಿದ್ದಾರೆ.
ಸೆಪ್ಟೆಂಬರ್ 2021ರಲ್ಲಿ ಬ್ರಿಟ್ನಿ ಮತ್ತು ಸಾಮ್ ಎಂಗೇಜ್ ಆದರು. ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕೆಲವೇ ದಿನಗಳಲ್ಲಿ ತಮ್ಮ ಮದುವೆ ದಿನಾಂಕ ನಿಗದಿ ಮಾಡಿರುವುದಾಗಿ ಗಾಸಿಪ್ ಹಬ್ಬಿತ್ತು.