Published : Jul 26, 2025, 07:34 AM ISTUpdated : Jul 26, 2025, 07:35 AM IST
ಮುಂಬೈಯ ಗೋರೆಗಾಂವ್‌ನ ಫಿಲಂ ಸಿಟಿಯಲ್ಲಿ ಹೈವೋಲ್ಟೇಜ್ ಸಾಹಸ ದೃಶ್ಯದಲ್ಲಿ ಯಶ್ ಭಾಗಿಯಾಗಿದ್ದಾರೆ. ಕಠಿಣ ಸಾಹಸ ದೃಶ್ಯಗಳಲ್ಲೂ ಯಶ್ ಸ್ವತಃ ಅವರೇ ತೊಡಗಿಸಿಕೊಂಡಿದ್ದು, ಎಲ್ಲೂ ಡ್ಯೂಪ್ ಬಳಸಿಲ್ಲ ಎನ್ನಲಾಗಿದೆ.
ಯಶ್ ಮತ್ತೆ ‘ಟಾಕ್ಸಿಕ್’ ಸೆಟ್ ಸೇರಿಕೊಂಡಿದ್ದಾರೆ. ಮುಂಬೈಯ ಗೋರೆಗಾಂವ್‌ನ ಫಿಲಂ ಸಿಟಿಯಲ್ಲಿ ಹೈವೋಲ್ಟೇಜ್ ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದಾರೆ. ಕಠಿಣ ಸಾಹಸ ದೃಶ್ಯಗಳಲ್ಲೂ ಯಶ್ ಸ್ವತಃ ಅವರೇ ತೊಡಗಿಸಿಕೊಂಡಿದ್ದು, ಎಲ್ಲೂ ಡ್ಯೂಪ್ ಬಳಸಿಲ್ಲ ಎನ್ನಲಾಗಿದೆ.
25
ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಯಶ್ ಜೊತೆಗೆ ತಾರಾ ಸುತಾರಿಯಾ, ಹ್ಯೂಮಾ ಖುರೇಶಿ, ಅಕ್ಷಯ್ ಓಬೆರಾಯ್ ಪಾಲ್ಗೊಂಡಿದ್ದು, ಮೂರು ವಾರಗಳ ಕಾಲ ಈ ಶೆಡ್ಯೂಲ್ ಮುಂದುವರಿಯಲಿದೆ. 19 ಮಾರ್ಚ್ 2026ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
35
ಸದ್ಯ ಯಶ್ ಅವರ ಟಾಕ್ಸಿಕ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷಗಳಿವೆ. ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಕಾನ್ಸೆಪ್ಟ್‌ನಲ್ಲಿ ತಯಾರಾಗ್ತಿರುವ ಸಿನಿಮಾ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಕೆಜಿಎಫ್ ಸಿನಿಮಾ ತೆರೆಗೆ ಬಂದು 3 ವರ್ಷಗಳಾಗಿವೆ. ಹಾಗಾಗಿ ಯಶ್ ಸಿನಿಮಾ ಸಹಜವಾಗಿಯೇ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ಟಾಕ್ಸಿಕ್ ಚಿತ್ರದ ಟೈಟಲ್ ಟೀಸರ್ ಹಾಗೂ ಗ್ಲಿಂಪ್ಲ್ಸ್‌ಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಯಶ್ ತಮ್ಮ ಅಭಿಮಾನಿ ಬಳಗಕ್ಕೆ ಯಾವ ಸರ್ಪ್ರೈಸ್ ಎಲಿಮೆಂಟ್ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ.
55
ಇತ್ತೀಚೆಗೆ ಯಶ್ ರಾಮಾಯಣದ ಚಿತ್ರೀಕರಣವನ್ನು ಮುಗಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಕೂಡ ನಟಿಸಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.