ಯಶ್ ನಿರ್ದೇಶಕಿಯ ಮಾತು ಕೇಳುತ್ತಿಲ್ಲ, ಯಶ್ ನಡವಳಿಕೆಯಿಂದ ಗೀತು ರೋಗಿಹೋಗಿದ್ದಾರೆ, ಪದೇ ಪದೇ ರೀಶೂಟ್ ಆಗಿ ಬಜೆಟ್ 600 ಕೋಟಿ ಮೀರಿದೆ ಎಂಬಿತ್ಯಾದಿ ವಾದಗಳು ಇತ್ತೀಚೆಗೆ ಕೇಳಿಬಂದಿದ್ದವು.
ಯಶ್ ಮತ್ತು ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್ ಮಧ್ಯೆ ತಾಳಮೇಳವಿಲ್ಲ, ಯಶ್ ನಿರ್ದೇಶಕಿಯ ಮಾತು ಕೇಳುತ್ತಿಲ್ಲ, ಯಶ್ ನಡವಳಿಕೆಯಿಂದ ಗೀತು ರೋಗಿಹೋಗಿದ್ದಾರೆ, ಪದೇ ಪದೇ ರೀಶೂಟ್ ಆಗಿ ಬಜೆಟ್ 600 ಕೋಟಿ ಮೀರಿದೆ ಎಂಬಿತ್ಯಾದಿ ವಾದಗಳು ಇತ್ತೀಚೆಗೆ ಕೇಳಿಬಂದಿದ್ದವು.
26
ಆದರೆ ವಾದವನ್ನು ಇದೀಗ ಬಹುಭಾಷಾ ನಟ ಸುದೇವ್ ನಾಯರ್ ತಳ್ಳಿಹಾಕಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಯಶ್ ಈ ಸಿನಿಮಾದಲ್ಲಿ ನಿರ್ದೇಶಕಿಯನ್ನು ಮೂಲೆಗುಂಪು ಮಾಡಿ ತಾವೇ ಅವರ ಜಾಗವನ್ನು ಅತಿಕ್ರಮಿಸಿದ್ದಾರೆ ಎನ್ನುವ ಆರೋಪ ಸುಳ್ಳು.
36
ಯಶ್ ಜನಪ್ರಿಯತೆ ಸಹಿಸದವರು ಹೊಟ್ಟೆಕಿಚ್ಚಿನಿಂದ ಹಬ್ಬಿಸಿದ ಸುಳ್ಳು ವದಂತಿ ಇದು ಎಂದು ಸುದೇವ್ ನಾಯರ್ ಹೇಳಿದ್ದಾರೆ. ಅವರು ‘ಟಾಕ್ಸಿಕ್’ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದು, ಇಡೀ ಸೆಟ್‌ನಲ್ಲಿ ಯಾವ ಬಗೆಯ ವಾತಾವರಣವಿತ್ತು ಎಂಬುದನ್ನು ವಿವರಿಸಿದ್ದಾರೆ.
ಯಶ್ ಹಾಗೂ ಗೀತು ಅವರ ನಡುವೆ ಸೌಹಾರ್ದಯುತ ಸಂಬಂಧವಿದೆ. ಇಬ್ಬರೂ ಪರಸ್ಪರರ ಮಾತನ್ನು ಗೌರವಿಸುತ್ತಾರೆ. ಅವರು ಇವರ ಅಭಿಪ್ರಾಯ, ಇವರು ಅವರ ಅಭಿಪ್ರಾಯ ಕೇಳುತ್ತಾರೆ.
56
ಅವರ ನಡುವೆ ಅಹಂ ಅಡ್ಡಬಂದಿಲ್ಲ. ಪ್ರತಿಯೊಬ್ಬರೂ ಸಿನಿಮಾದ ಯಶಸ್ಸಿಗೆ ದುಡಿಯುತ್ತಾರೆ. ಶಾಟ್ ನಿರ್ದೇಶಕರಿಗೆ ಮಾತ್ರವಲ್ಲ, ಕಲಾವಿದರಿಗೂ ತೃಪ್ತಿ ನೀಡುವ ತನಕ ಶೂಟ್ ಮಾಡುತ್ತಾರೆ. ಅಂಥಾ ತಾಳ್ಮೆ ನಿರ್ದೇಶಕಿಯಲ್ಲಿದೆ.
66
ಪ್ರತಿಯೊಬ್ಬರೂ ಅವರವರ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕಾರಣ ಅಷ್ಟು ದೊಡ್ಡ ಸಿನಿಮಾವಾದರೂ ಗೊಂದಲ, ಒತ್ತಡ ಇತ್ಯಾದಿಗಳಿಲ್ಲ. ಸೆಟ್‌ನಲ್ಲಿ ಉತ್ಸಾಹದ ವಾತಾವರಣ ಇರುತ್ತದೆ ಎಂದಿದ್ದಾರೆ.