ರವಿಚಂದ್ರನ್ ಕನಸಿನ ಚೆಲುವೆ ಕಮಲಿ ಈಗಲೂ ಅಪ್ಪಟ ಸುಂದರಿ… ಸಂಗೀತಾ ಈಗ ಎಲ್ಲಿದ್ದಾರೆ?

First Published | Dec 15, 2024, 4:48 PM IST

ಯಾರೇ ನೀನು ಚೆಲುವೆ ಸಿನಿಮಾ ಮೂಲಕ ಮೋಡಿ ಮಾಡಿದ ಚೆಲುವೆ ಸಂಗೀತ ಈವಾಗ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ? ಮತ್ತೆ ಕನ್ನಡ ಸಿನಿಮಾಕ್ಕೆ ಬರ್ತಾರ? ಇಲ್ಲಿದೆ ಸಂಪೂರ್ಣ ಮಾಹಿತಿ. 
 

ಯಾರೇ ನೀನು ಚೆಲುವೆ (Yaare Ninu Cheluve) ಸಿನಿಮಾ ನಿಮಗೆ ನೆನಪಿದೆ ತಾನೆ? ಖಂಡಿತಾ ನೆನಪಿರುತ್ತೆ. ಯಾಕಂದ್ರೆ ಹಾಡುಗಳ ಮೂಲಕ ಹಾಗೂ ಅದ್ಭುತ ಕಥೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಂತಹ ಸಿನಿಮಾ ಇದು. ಈ ಸಿನಿಮಾದ ಪ್ರತಿಯೊಂದು ಪಾತ್ರಗಳು, ಹಾಡುಗಳು, ಕ್ಲೈಮ್ಯಾಕ್ಸ್ ಎಲ್ಲವೂ ಇಂದಿಗೂ ಜೀವಂತ. 
 

ಅದರಲ್ಲೂ ಕುಶಲವೇ ಕ್ಷೇಮವೇ ಸೌಖ್ಯವೇ ಹಾಡನ್ನು ಇವತ್ತಿಗೂ ಜನ ತಮ್ಮ ಪ್ರೇಮಿಯನ್ನು ನೆನಪಿಸಿಕೊಂಡು ಹಾಡುತ್ತಿರೋದನ್ನು ನೋಡಬಹುದು. ಅಷ್ಟೇ ಅಲ್ಲ, ಸಿನಿಮಾ ನಾಯಕಿ ಕಮಲಿ ಪಾತ್ರದಲ್ಲಿ ಮಿಂಚಿದ ಸಂಗೀತ ಮಾಧವ ನಾಯರ್ ರನ್ನು (Sangeetha Madhav Nair) ಇಂದಿಗೂ ನಮ್ಮ ಕನ್ನಡಿಗರು ಕಮಲಿ ಅಂತಾನೇ ನೆನಪಿಟ್ಟುಕೊಂಡಿದ್ದಾರೆ. ಅಷ್ಟೊಂದು ಅದ್ಭುತವಾದ, ಹಾಗೂ ಅದ್ಭುತವಾಗಿ ನಟಿಸಿದಂತಹ ಸಿನಿಮಾ. 

Tap to resize

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ಶಾಂತಿ ಕ್ರಾಂತಿ ಸಿನಿಮಾ ಮೂಲಕ ಕನ್ನಡಕ್ಕೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟ ಸಂಗೀತ, ನಂತರ ಇದೇ ಕ್ರೇಜಿ ಸ್ಟಾರ್ ಗೆ ನಾಯಕಿಯಾಗಿ ಯಾರೇ ನೀನು ಚೆಲುವೆ ಸಿನಿಮಾದಲ್ಲಿ ಸಂಗೀತಾ ನಟಿಸಿದ್ದರು. ನಂತರ ಶಿವರಾಜ್ ಕುಮಾರ್ ಜೊತೆ ಯಾರೆ ನೀ ಅಭಿಮಾನಿ ಸಿನಿಮಾದಲ್ಲೂ ನಟಿಸಿದ್ದಾರೆ. 
 

ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ ನಂತರ ನಟಿ ಮತ್ತೆ ಕನ್ನಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 1978 ರಿಂದ 2000ದ ವರೆಗೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದ ಸಂಗೀತಾ, ನಂತರ ಸಿನಿಮಾಟಗ್ರಾಫರ್ ಎಸ್ ಸರವಣನ್ ಅವರನ್ನು ಮದುವೆಯಾಗಿ ಸಿನಿಮಾದಿಂದ ದೂರ ಉಳಿದಿದ್ದರು. 
 

ಇದೀಗ ಮತ್ತೆ ಮಲಯಾಲಂ ಸಿನಿಮಾಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಮಲಯಾಲದಲ್ಲಿ ಕಳೆದ ವರ್ಷ ಚಾವೆರ್ ಹಾಗೂ ಈ ವರ್ಷ ಪರಾಕ್ರಮಮ್, ಆನಂದ್ ಶ್ರೀಬಾಲ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೊಗಳು ವೈರಲ್ ಆಗುತ್ತಿವೆ. 
 

ಕನ್ನಡಿಗರಂತೂ ಸಂಗೀತ ಮಾಧವ ನಾಯರ್  ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ, ಕುಶಲವೇ ಕ್ಷೇಮವೇ ಹಾಡನ್ನು ಹಾಕಿ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಮತ್ತೆ ಕನ್ನಡಕ್ಕೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. 

ಸಂಗೀತ ಶೃಂಗೇರಿ ಅಂದು ಅಂದ್ರೆ 14 ವರ್ಷದ ಹಿಂದೆ ಕನ್ನಡ ಸಿನಿಮಾದಲ್ಲಿ ನಟಿಸುವಾಗ ಹೇಗಿದ್ದರೋ, ಅಷ್ಟೇ ಯಂಗ್ ಆಗಿದ್ದಾರೆ ಇವತ್ತಿಗೂ, ಆದರೆ ಅಂದಿಗಿಂತಲೂ ಇಂದು ಹೆಚ್ಚು ಸುಂದರಿಯಾಗಿದ್ದಾರೆ ಅಂದ್ರೆ ತಪ್ಪಲ್ಲ, ಅವರ ನಗು, ಮುಗ್ಧ ಸೌಂದರರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. 
 

Latest Videos

click me!