ನಿರ್ವಾಣ್ ಖಾನ್ ತಾಯಿ ಸೀಮಾ ಸಚ್‌ದೇವ್, ಭಾವನಾ ಪಾಂಡೆ ಕೂಡ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ರು. ರಿತೇಶ್ ದೇಶ್‌ಮುಖ್ ಕೂಡ ಈ ಪಾರ್ಟಿಗೆ ಪತ್ನಿ ಜೆನೆಲಿಯಾ ಜೊತೆ ಆಗಮಿಸಿ ಫೋಟೋಗಳಿಗೆ ಫೋಸ್ ಕೊಟ್ಟರು, ನಿರ್ವಾಣ್ ಖಾನ್ ಅವರ ತಂದೆ ತಾಯಿಯರಾದ ಸೋಹೈಲ್ ಖಾನ್ ಹಾಗೂ ಸೀಮಾ ಸಚ್ದೇವ್ ಅವರು 1998ರಲ್ಲಿ ಮದ್ವೆಯಾಗಿದ್ದು, 2022ರಲ್ಲಿ ವಿಚ್ಚೇದನ ಪಡೆದು ದೂರಾಗಿದ್ದಾರೆ.