ಇಲ್ಲಿವರೆಗೆ ಈ ಹಾಸ್ಯ ನಟ ಕೆವಿನ್ ಹಾರ್ಟ್ (Kevin Hart) ಬರೋಬ್ಬರಿ 81 ಮಿಲಿಯನ್ ಡಾಲರ್ (7,00,95,33,830) ನಿವ್ವಳ ಆದಾಯವನ್ನು ಗಳಿಸಿದ್ದಾರೆ. ಎಲ್ಲಾ ನಟರ ಪಟ್ಟಿಯಲ್ಲಿ, ಕೆವಿನ್ ಹಾರ್ಟ್ ಮೂರನೇ ಸ್ಥಾನದಲ್ಲಿದ್ದರೆ, ಡ್ವೇನ್ ಜಾನ್ಸನ್ (88 ಮಿಲಿಯನ್ ಡಾಲರ್) ಮತ್ತು ರಿಯಾನ್ ರೆನಾಲ್ಡ್ಸ್ (83 ಮಿಲಿಯನ್ ಡಾಲರ್) ನಂತರದ ಸ್ಥಾನದಲ್ಲಿದ್ದಾರೆ. ಹಾಸ್ಯನಟ ಜೆರ್ರಿ ಸೀನ್ಫೆಲ್ಡ್ 60 ಮಿಲಿಯನ್ ಡಾಲರ್ ಗಳಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.