ಎನ್‌ಟಿಆರ್ ಮೇಲೆ ನಾಗಾರ್ಜುನ ಸಿಟ್ಟಾಗಿದ್ದೇಕೆ, ಎಲ್ಲರುದುರೇ ಹೀಗ್ ವಾರ್ನ್ ಮಾಡೋದಾ?

First Published Oct 18, 2024, 1:34 PM IST

ಜೂನಿಯರ್ NTRಗೆ ಲೈವ್‌ನಲ್ಲಿ ವಾರ್ನಿಂಗ್ ಕೊಟ್ಟ ನಾಗಾರ್ಜುನ  ಅದಕ್ಕೆ ಕಾರಣವಾಗಿದ್ದು ಚಿರಂಜೀವಿ. ಹಾಗಿದ್ರೆ ಮೆಗಾಸ್ಟಾರ್ ಹಾಗೂ ಜೂನಿಯರ್ ಎನ್‌ಟಿಆರ್‌ ನಾಗಾರ್ಜುನ ನಡುವೆ ಆಗಿದ್ದೇನು? ಇಲ್ಲಿದೆ ಸ್ಟೋರಿ. 
  

18 ವರ್ಷದ ಹಿಂದೆ ಜೂನಿಯರ್ ಎನ್.ಟಿ.ಆರ್ ಮೊದಲ ಸಿನಿಮಾ 'ನಿನ್ನು ಚೂಡಾಲನಿ' 2001 ರಲ್ಲಿ ಬಿಡುಗಡೆಯಾಯ್ತು. ಅದೇ ವರ್ಷ ಸ್ಟೂಡೆಂಟ್ ನಂಬರ್ ಒನ್, ಸುಬ್ಬು ಚಿತ್ರಗಳಲ್ಲಿ ಅವರು ನಟಿಸಿದರು. ರಾಜಮೌಳಿ ನಿರ್ದೇಶನದ ಸ್ಟೂಡೆಂಟ್ ನಂಬರ್ ಒನ್ ಸೂಪರ್ ಹಿಟ್ ಆಗಿತ್ತು. ಸುಬ್ಬು ಮ್ಯೂಸಿಕಲ್ ಹಿಟ್ ಆಗಿತ್ತು. ತಮ್ಮ ನೃತ್ಯದಿಂದ NTR ತೆಲುಗು ಚಿತ್ರರಂಗದ ಗಮನೆ ಸೆಳೆಯುವಲ್ಲಿ ಯಶಸ್ವಿಯಾದರು.

2002ರಲ್ಲಿ ಬಿಡುಗಡೆಯಾದ ಆದಿ ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು. ಇಪ್ಪತ್ತು ವರ್ಷಕ್ಕಿಂತ ಮೊದಲೇ Jr NTR ಮಾಸ್ ಹೀರೋ ಆದರು. ಸಿಂಹಾದ್ರಿ ಸಿನಿಮಾದಿಂದ ಈ ನಟನ ಇಮೇಜ್ ಪೀಕ್‌ಗೆ ಹೋಯ್ತು. ರಾಜಮೌಳಿ-ಎನ್‌ಟಿಆರ್ ಕಾಂಬಿನೇಷನ್‌ನ ಇಂಡಸ್ಟ್ರಿ ದಾಖಲೆಗಳನ್ನ ಮುರಿಯಿತು. ಎನ್‌ಟಿ‌ಆರ್ ಸ್ಟಾರ್ ಹೀರೋ ಆದರು. ಈ ಸಿನಿಮಾ ಬಿಡುಗಡೆ ನಂತರ  ಈ ನಟ ಕೊಟ್ಟ ಸಂದರ್ಶನವೊಂದು ವಿವಾದಕ್ಕೆ ಕಾರಣವಾಯಿತು. 

ಲೈವ್ ಸಂದರ್ಶನದಲ್ಲಿ ಚಿರಂಜೀವಿ ಬಗ್ಗೆ ಕೇಳಿದಾಗ, ಚಿರಂಜೀವಿ ಯಾರು? ನನಗೆ ಗೊತ್ತಿರೋ ದೊಡ್ಡ ಸ್ಟಾರ್ ನಮ್ಮ ತಾತ ಮಾತ್ರ ಅಂದ್ರು. ಲೈವ್ ಶೋ ಆಗಿದ್ದರಿಂದ ನಟನ ಮಾತು ನೇರವಾಗಿ ಪ್ರಸಾರವಾಯಿತು. ಯಶಸ್ಸಿನಲ್ಲಿದ್ದ ನಟನೊಬ್ಬ ಇಂಡಸ್ಟ್ರಿಯ ಸೂಪರ್ ಸ್ಟಾರ್ ಬಗ್ಗೆ ಇಂಥದ್ದೊಂದು ಹೇಳಿಕೆ ಕೊಟ್ಟಿದ್ದು ದೊಡ್ಡ ವಿವಾದವಾಯಿತು.

Latest Videos


ಇದನ್ನು ಕೇಳಿದ ತಕ್ಷಣ ನಾಗಾರ್ಜುನರಿಂದ ನಟ ಜೂ.ಎನ್‌ಟಿಆರ್‌ಗೆ ಕರೆ ಬಂತಂತೆ. ಏನ್ ಮಾತಾಡ್ತೀಯಾ? ನಿನ್ನಗಿಂತ ದೊಡ್ಡವರ ಬಗ್ಗೆ ಹೀಗೆ ಮಾತಾನಾಡಬೇಡ ಅಂತ ನಾಗಾರ್ಜುನ ವಾರ್ನಿಂಗ್ ಕೊಟ್ಟರಂತೆ. ಆ ವಯಸ್ಸಲ್ಲಿ ಜೂ. ಎನ್‌ಟಿಆರ್‌ಗೆ ತಾನು ಮಾಡ್ತಿರುವ ತಪ್ಪೇನು ಅಂತ ಅರ್ಥ ಆಗ್ಲಿಲ್ಲ. ಆದರೆ ಆಮೇಲೆ ಪಶ್ಚಾತ್ತಾಪ ಪಟ್ಟರಂತೆ. ತಿಳುವಳಿಕೆ ಇಲ್ಲದ ವಯಸ್ಸಲ್ಲಿ ಆಡಿದ ಮಾತು ಅದಾಗಿತ್ತು ಎಂದು ಒಪ್ಪಿಕೊಂಡರು. ಸಿಂಹಾದ್ರಿ ನಂತರ ಎನ್‌ಟಿಆರ್ ಹಲವು ಸೋಲುಗಳನ್ನ ಎದುರಿಸಿದರು. ಆಂಧ್ರಾವಾಲ, ಸಾಂಬ, ನಾ ಅಲ್ಲುಡು, ನರಸಿಂಹುಡು, ಅಶೋಕ್, ರಾಖಿ ಹೀಗೆ ಒಂದು ಸಿನಿಮಾವೂ ಹಿಟ್ ಆಗ್ಲಿಲ್ಲ. ಇದಾದ ನಂತರ ರಾಜಮೌಳಿ ಯಮದೊಂಗ ಸಿನಿಮಾದಿಂದ ಈ ನಟನಿಗೆ ಬ್ರೇಕ್ ಸಿಕ್ತು. 

ಚಿರಂಜೀವಿ-ನಾಗಾರ್ಜುನ

ಕಾಲಕ್ರಮೇಣ ಎನ್‌ಟಿಆರ್‌ಗೆ ಪಕ್ವತೆ ಬಂತು. ಮಾತಿನ ಶೈಲಿ ಬದಲಾಯಿತು. ಈಗ ಈ ನಟ ಮಾತುಗಳು ಪರಿಪಕ್ವತೆಯಿಂದ ಕೂಡಿರುತ್ತವೆ. ಯಾವುದೇ ವಿವಾದಕ್ಕೂ ಆಸ್ಪದವಿಲ್ಲದಂತೆ ಅರ್ಥಪೂರ್ಣವಾಗಿ ಮಾತಾಡ್ತಾರೆ. ಸಿನಿಮಾ ವೇದಿಕೆಗಳಲ್ಲಿ ಇವರ ಭಾಷಣಗಳು ಅದ್ಭುತ. ತಡಬಡಯಿಸದೆ ಮಾತಾಡ್ತಾರೆ. ಅವರು ಅನುಭವಗಳಿಂದ ಪಾಠ ಕಲಿತಿದ್ದಾರೆ. ನಂದಮೂರಿ ಹರಿಕೃಷ್ಣ ಅಂದ್ರೆ ನಾಗಾರ್ಜುನಗೆ ತುಂಬಾ ಇಷ್ಟ. ಒಮ್ಮೆ ಜೂ. ಎನ್‌ಟಿ‌ಆರ್ 'ಮೀಲೋ ಏವರು ಕೋಟೀಶ್ವರುಡು? ಶೋಗೆ ಬಂದಾಗ, ನಾಗಾರ್ಜುನ ಈ ವಿಷಯ ಹೇಳಿಕೊಂಡರು. 

ನಿಮ್ಮ ಕುಟುಂಬದಲ್ಲಿ ನನಗೆ ಇಷ್ಟದ ವ್ಯಕ್ತಿ ನಿಮ್ಮಪ್ಪ ಹರಿಕೃಷ್ಣ. ಅವರ ಮೇಲೆ ಪ್ರೀತಿ, ಅಭಿಮಾನ. ಸೀತಾರಾಮ ರಾಜು ಸಿನಿಮಾ ಮಾಡಿದ ಮೇಲೆ ಇಷ್ಟ ಇನ್ನೂ ಹೆಚ್ಚಾಯ್ತು. ಹರಿಕೃಷ್ಣರನ್ನ ಅಣ್ಣ ಅಂತ ಕರೀತೀನಿ. ಬೇರೆ ಯಾರನ್ನೂ ಹಾಗೆ ಕರೆಯಲ್ಲ ಎಂದಿದ್ದರು. 

ಸೀತಾರಾಮ ರಾಜು ಶೂಟಿಂಗ್‌ಗೆ ಬಂದಾಗ ನಿಮ್ಮನ್ನ ನೋಡಿದೆ. ಅವರು ನಿಮ್ಮನ್ನ ತಮ್ಮ ತಮ್ಮ ಅಂತ ಕರೀತಿದ್ರು ಅಂದ್ರು ಎನ್.ಟಿ.ಆರ್. ವೈ.ವಿ.ಎಸ್. ಚೌಧರಿ ನಿರ್ದೇಶನದ ಸೀತಾರಾಮರಾಜು ಸಿನಿಮಾ ಗೆದ್ದಿತ್ತು. ನಾಗಾರ್ಜುನ ಹಾಗೂ ಹರಿಕೃಷ್ಣ ಅಣ್ಣತಮ್ಮಂದಿರ ಪಾತ್ರ ಮಾಡಿದ್ರು. 

Jr NTR-ನಾಗಾರ್ಜುನ ತುಂಬಾ ಆತ್ಮೀಯರು. ಅಖಿಲ್ ಸಿನಿಮಾ ಪ್ರಮೋಷನ್‌ಗೆ ಎನ್‌ಟಿಆರ್‌ಗೆ ಆಹ್ವಾನವಿತ್ತು. ನಾಗಾರ್ಜುನರನ್ನ ಬಾಬಾಯ್ (ಚಿಕ್ಕಪ್ಪ) ಅಂತ ಕರೀತಾರೆ ಎನ್‌ಟಿಆರ್‌. ಬಾಲಯ್ಯ ಅವರನ್ನ ನಾಗಾರ್ಜುನ ಇಷ್ಟಪಡಲ್ಲ ಅನ್ನೋ ಮಾತಿದೆ. ಇಬ್ಬರೂ ಒಟ್ಟಿಗೆ ಇರೋದು ತುಂಬಾ ಅಪರೂಪ. ಬಾಲಕೃಷ್ಣ ಕಾರ್ಯಕ್ರಮಗಳಿಗೂ ನಾಗಾರ್ಜುನ ಬಂದಿಲ್ಲ. ಎನ್.ಟಿ.ಆರ್ ಶತಮಾನೋತ್ಸವಕ್ಕೆ ನಾಗ ಚೈತನ್ಯ, ಅಖಿಲ್ ಬಂದಿದ್ರು. ನಾಗಾರ್ಜುನ ಬರಲಿಲ್ಲ. ಬಾಲಕೃಷ್ಣ ಸ್ವರ್ಣೋತ್ಸವಕ್ಕೆ ಚಿರಂಜೀವಿ ಬಂದಿದ್ರು. ನಾಗಾರ್ಜುನ, ಎನ್.ಟಿ.ಆರ್ ಬರಲಿಲ್ಲ. 
 

click me!