ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಕಾರಣ ಬಿಚ್ಚಿಟ್ಟ ಶಿಲ್ಪಾಶೆಟ್ಟಿ

First Published | May 13, 2020, 1:30 PM IST

ಬಾಲಿವುಡ್‌ ನಟಿ ಈ ವರ್ಷ ಬಾಡಿಗೆತಾಯಿ ಮೂಲಕ ಹೆಣ್ಣು ಮಗುವೊಂದನ್ನು ಪಡೆದು ಸರ್‌ಪ್ರೈಸ್‌ ನೀಡಿದ್ದರು. ರಾಜ್‌ ಕುಂದ್ರಾರನ್ನು ಮದುವೆಯಾಗಿರುವ ಇವರಿಗೆ ಒಂದು ಗಂಡು ಮಗುವಿದ್ದು, ಈಗ ಬಾಡಿಗೆ ತಾಯಿಯ ಮೂಲಕ ಮತ್ತೊಂದು ಮಗುವನ್ನು ಪಡೆದು ತಮ್ಮ ಫ್ಯಾಮಿಲಿಯನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ತಾವು ಸರೊಗೆಸಿಗೆ ಮೊರೆ ಹೋಗಲು ನಿರ್ಧರಿಸಿದ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಶಿಲ್ಪಾ ಆಟೋಇಮ್ಯೂನ್‌ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮತ್ತೊಂದು ಬಾರಿ ಮಗು ಪಡೆಯುವುದು ಅಸಾಧ್ಯವಾಯಿತು ಎಂದು ಹೇಳಿದ್ದಾರೆ. ಈ ನಟಿ ಬಾಡಿಗೆ ತಾಯಿ ಮೂಲಕ ಮಗು ಪಡೆದಾಗ ನೆಟ್ಟಿಗರ ಟ್ರೋಲ್‌ಗೆ ಸಹ ಗುರಿಯಾಗಿದ್ದರು.

ಮಗ ವಿಯಾನ್ ಅನ್ನು ಸಿಂಗಲ್‌ ಚೈಲ್ಡ್‌ ರೀತಿಯಲ್ಲಿ ಬೆಳೆಸುವುದು ನಂಗೆ ಇಷ್ಟವಿರಲಿಲ್ಲ. ನಂಗೆ ಒಬ್ಬ ತಂಗಿ ಇರುವ ಹಾಗೆ, ಅವನಿಗೂ ತಂಗಿ ಅಥವಾ ತಮ್ಮ ಬೇಕು ಎಂದು ಬಯುಸುತ್ತಿದ್ದೆ. ಏಕೆಂದರೆ ಅದು ಅವಶ್ಯಕ ಎಂದು 44 ವರ್ಷದ ಶಿಲ್ಪಾಹೇಳಿದ್ದಾರೆ.
ಒಂದು ಸಮಯದಲ್ಲಿ ಮಗುವನ್ನು ದತ್ತು ಪಡೆಯಲು ಯತ್ನಿಸಿದ್ದೆ. ಅದಕ್ಕಾಗಿ 4 ವರ್ಷಗಳ ಕಾಲ ಕಾದೆ, ಕೊನೆಗೆ ಇರೀಟೇಟ್‌ ಆಗಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ನಿರ್ಧರಿಸಿದೆ,ಎಂದು ಪಿಂಕ್‌ವಿಲ್ಲಾಗೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಬಾಯಿ ಬಿಟ್ಟ ಬಂಟ್‌ ಬೆಡಗಿ.
Tap to resize

ಗರ್ಭಿಣಿಯಾದಾಗ ಆಟೋಇಮ್ಯೂನ್‌ ಕಾಯಿಲೆಯಿಂದ ಬಳಲಿದ್ದೆ. ಆ ಕಾರಣದಿಂದ ಹಲವು ಬಾರಿ ನನಗೆ ಮಿಸ್‌ಕ್ಯಾರೇಜ್‌ ಆಯಿತು. ಕೊನೆಗೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಡಿಸೈಡ್‌ ಮಾಡಿದ್ದೆವು ಎಂದಿದ್ದಾರೆ ನಟಿ.
ಶಿಲ್ಪಾ ರಾಜ್‌ರ ಮಗು ಸಮೀಷಾಳ ಜನ್ಮ ಫೆಬ್ರವರಿ 15ರಂದು ಆಗಿತ್ತು. ಆದರೆ ಫೆಬ್ರವರಿ 21ರಂದು ಮಹಾಶಿವರಾತ್ರಿಯ ದಿನದಂದು ತಮ್ಮ ಫ್ಯಾನ್ಸ್‌ಗಳೊಂದಿಗೆ ಈ ಸಿಹಿ ಸುದ್ದಿಯನ್ನು ಶೇರ್‌ ಮಾಡಿಕೊಂಡ ದಂಪತಿ.
ಕರಾವಳಿ ಮೂಲದವರಾದ ಶಿಲ್ಪಾ ಶೆಟ್ಟಿ ಬಂಟ್ ಸಮುದಾಯಕ್ಕೆ ಸೇರಿದವರಾಗಿದ್ದು, ಅಲ್ಲಿ ಹೆಣ್ಣು ಮಕ್ಕಳದ್ದೆ ಪಾರುಪತ್ಯ ಹೆಚ್ಚು.
ಅವರಿಗೆ ಸದಾ ಒಂದು ಹೆಣ್ಣು ಮಗು ಹೊಂದುವ ಆಸೆ ಇತ್ತು ಮತ್ತು 21 ವರ್ಷಗಳ ಮೊದಲೇ ಹೆಸರನ್ನು ಸಹ ಯೋಚಿಸಿದ್ದರು, ಎಂದು ಶಿಲ್ಪಾ ಒಂದು ಸಂದರ್ಶನದಲ್ಲಿ ಹೇಳಿದ್ದರು.
ಶಿಲ್ಪಾರಿಗೆ ವಿಯಾನ್‌ ಎಂಬ ಒಂದು ಗಂಡು ಮಗುವಿದೆ. 2012ರಲ್ಲಿ ಶಿಲ್ಪಾ ಗಂಡುಮಗುವಿಗೆ ಜನ್ಮ ನೀಡಿದ್ದು.
ಶಿಲ್ಪಾ ರಾಜ್‌ಕುಂದ್ರಾರ ಭೇಟಿ ಲಂಡನ್‌ ಅಲ್ಲಿ ಆಗಿದ್ದು. ಬಿಗ್‌ ಬ್ರದರ್‌ ರಿಯಾಲಿಟಿ ಶೋ ಗೆಲ್ಲುವ ಮೂಲಕ ಅಲ್ಲಿ ಫೇಮಸ್‌ ಆಗಿದ್ದರು ಬಾಲಿವುಡ್‌ ಸ್ಟಾರ್‌ ಹಾಗೂ ರಾಜ್‌ ಅಲ್ಲಿ ಫೇಮಸ್‌ ಬ್ಯುಸ್‌ನೇಸ್‌ ಮ್ಯಾನ್‌.
22 ನವೆಂಬರ್‌ 2009ರಂದು ರಾಜ್‌ ಕುಂದ್ರಾರ ಎರಡನೆ ಹೆಂಡತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರಾವಳಿ ಕುವರಿ.

Latest Videos

click me!