ಸಲ್ಮಾನ್ ಖಾನ್ ಕೈಲಿ ಸದಾ ಇರುತ್ತೆ ನೀಲಿ ಬ್ರೇಸ್ಲೆಟ್ ; ನಟನನ್ನು ಈ ಕಲ್ಲು ಹೇಗೆ ಕಾಪಾಡುತ್ತೆ ಅಂದ್ರೆ..

First Published | Apr 13, 2024, 4:24 PM IST

3000 ಕೋಟಿಗೂ ಅಧಿಕ ಆಸ್ತಿ ಒಡೆಯ, ಬಾಲಿವುಡ್‌ನ ಟಾಪ್ ಹೀರೋಗಳಲ್ಲೊಬ್ಬರೆನಿಸಿದ ಸಲ್ಮಾನ್ ಖಾನ್ ಕೈಲಿ ಸದಾ ನೀಲಿ ಬ್ರೇಸ್ಲಟ್ ಧರಿಸಿರುತ್ತಾರೆ. ಈ ಕಲ್ಲಿನ ಹಿಂದಿದೆ ಜ್ಯೋತಿಷ್ಯ ನಂಬಿಕೆ.

ಸಲ್ಮಾನ್ ಖಾನ್ ಎಂದರೆ ನಟನಿಗೆ ಹೆಚ್ಚು ಪರಿಚಯ ಬಗ್ಗೆ ಹೇಳಬೇಕಾಗಿಲ್ಲ. ಬಾಲಿವುಡ್‌ನ ಬ್ಯಾಡ್ ಬಾಯ್ ಎನಿಸಿಕೊಂಡರೂ, ನಟನ ಪ್ರಸಿದ್ಧತೆ, ಅಭಿಮಾನಿ ಬಳಗಕ್ಕೇನೂ ಕೊರತೆ ಇಲ್ಲ. 

ತಮ್ಮ ಆಯಸ್ಕಾಂತೀಯ ವ್ಯಕ್ತಿತ್ವ ಹಾಗೂ ವಿಶಿಷ್ಠ ನಟನಾ ಕೌಶಲ್ಯದಿಂದ ಸದಾ ಸುದ್ದಿಯಲ್ಲಿರೋ ಸಲ್ಲೂ ಭಾಯ್ ನೋಡಿದವರೆಲ್ಲರಿಗೂ ಅವರ ಕೈಲಿರೋ ನೀಲಿ ಬ್ರೇಸ್ಲೆಟ್ ಖಂಡಿತಾ ಕಣ್ಣಿಗೆ ಬಿದ್ದಿರುತ್ತೆ.

Tap to resize

ನಟ ಎಲ್ಲೇ ಹೋಗಲಿ, ಏನೇ ಮಾಡಲಿ ಈ ನೀಲಿ ಬ್ರೇಸ್ಲೆಟ್ ಜೊತೆಯಲ್ಲಿದ್ದೇ ಇರುತ್ತೆ. ದಿನಕ್ಕೊಂದು ರೀತಿಯ ಚಿನ್ನದ, ವಜ್ರದ ಬ್ರೇಸ್ಲೆಟ್ ಹಾಕಿಕೊಳ್ಳಬಹುದಾದ ನಟ ಎಲ್ಲವನ್ನೂ ಬಿಟ್ಟು ಇದೊಂದನ್ನೇ ಈ ರೀತಿ ಸದಾ ಧರಿಸಿರೋಕೆ ಕಾರಣ ಏನು, ಈ ನೀಲಿ ಕಲ್ಲಿನ ವೈಶಿಷ್ಠ್ಯತೆ ಏನು?

ಇದೇ ಡಿಟ್ಟೋ ಬ್ರೇಸ್ಲೆಟ್ಟನ್ನು ಸಲ್ಮಾನ್ ತಂದೆ ಸಲೀಂ ಧರಿಸುತ್ತಿದ್ದರಂತೆ. ಸಲ್ಮಾನ್ ಸಣ್ಣವರಿರುವಾಗ ಅದರೊಂದಿಗೆ ಆಟವಾಡುತ್ತಿದ್ದರಂತೆ. ಯಾವಾಗ ನಟ ಕೆಲಸ ಮಾಡಲು ಶುರು ಮಾಡಿದರೋ, ಆಗ ಅವರ ತಂದೆ ಇದನ್ನು ಮಗನಿಗೆ ಉಡುಗೊರೆಯಾಗಿ ನೀಡಿದರು. 

ಈ ಬ್ರೇಸ್ಲೆಟ್ ಹೆಸರು ಫಿರೋಜಾ ಎಂದು ನಟ ಬಹಿರಂಗಪಡಿಸಿದ್ದಾರೆ. ಈ ಕಲ್ಲು ತನ್ನ ಮೇಲೆ ಬರುವ ಎಲ್ಲಾ ನಕಾರಾತ್ಮಕತೆಯನ್ನು ತಾನು ಮೊದಲು ತೆಗೆದುಕೊಳ್ಳುತ್ತದಂತೆ. 

ಅದು ಹಾಗೆ ಸಲ್ಮಾನ್ ಮೇಲೆ ಬರುವ ದುಷ್ಟ ಶಕ್ತಿ ತೆಗೆದುಕೊಂಡಾಗೆಲ್ಲ ಒಡೆದು ಹೋಗುತ್ತದೆ. ಇದುವರೆಗೂ ಈ ನೀಲಿ ಹರಳು 7 ಬಾರಿ ಒಡೆದು ಹೋಗಿದೆ ಎಂದು ನಟ ಹೇಳಿದ್ದಾರೆ.

ಇದು ವೈಡೂರ್ಯವಾಗಿದ್ದು, ನಕಾರಾತ್ಮಕತೆಯನ್ನು ತಾನೇ ಸೆಳೆದು ಧರಿಸಿದವರಿಗೆ ತೊಂದರೆಯಾಗದಂತೆ ಕಾಯುತ್ತದೆ ಎಂಬ ನಂಬಿಕೆ ಇದೆ. 

ಸಧ್ಯ ನಟನು ಕಿಕ್2, ದಿ ಬುಲ್, ಟೈಗರ್ ವರ್ಸಸ್ ಪಠಾಣ್ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಅಭಿಮಾನಿಗಳು ಇದಕ್ಕಾಗಿ ಕಾಯುತ್ತಿದ್ದಾರೆ. 

Latest Videos

click me!