ಸಂಜಯ್ ಲೀಲಾ ಬನ್ಸಾಲಿಯ ಚಿತ್ರಗಳಲ್ಲೆಲ್ಲ ವೇಶ್ಯಾವಾಟಿಕೆ ಇದ್ದೇ ಇರುತ್ತೆ ಏಕೆ?

Published : May 08, 2024, 12:49 PM IST

ದೇವದಾಸ್, ಗಂಗೂಬಾಯಿ ಕಾಠಿವಾಡಿ, ಬಾಜಿರಾವ್ ಮಸ್ತಾನಿ, ಹೀರಾಮಂಡಿ- ಹೀಗೆ ಸಂಜಯ್ ಲೀಲಾ ಬನ್ಸಾಲಿಯ ಚಿತ್ರಗಳೆಲ್ಲದರಲ್ಲೂ ವೇಶ್ಯಾವಾಟಿಕೆ ಹೈಲೈಟ್ ಆಗುತ್ತದೆ. ಇದಕ್ಕೆ ಕಾರಣವನ್ನು ನಿರ್ದೇಶಕರೇ ಹೇಳಿದ್ದಾರೆ. 

PREV
112
ಸಂಜಯ್ ಲೀಲಾ ಬನ್ಸಾಲಿಯ ಚಿತ್ರಗಳಲ್ಲೆಲ್ಲ ವೇಶ್ಯಾವಾಟಿಕೆ ಇದ್ದೇ ಇರುತ್ತೆ ಏಕೆ?

ಬಾಲಿವುಡ್ ಚಲನಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರವು ಎಷ್ಟು ದೊಡ್ಡ ಹಿಟ್ ಆಗಲಿದೆ ಎಂಬುದನ್ನು ಅವರ ಚಿತ್ರದ ಸೆಟ್‌ಗಳನ್ನು ನೋಡಿಯೇ ನಿರ್ಣಯಿಸಬಹುದು. 

212

ಅಷ್ಟು ಸುಂದರವಾದ ಅದ್ಧೂರಿ ಸೆಟ್‌ಗಳು ನಮ್ಮನ್ನು ಆ ಚಿತ್ರದ ಆಯಾ ಕಾಲಕ್ಕೆ ಕೊಂಡೊಯ್ಯುತ್ತವೆ. ಅಂದಿನ ಶ್ರೀಮಂತಿಕೆಯನ್ನು ಸಾರುತ್ತವೆ. ಪ್ರತಿ ದೃಶ್ಯವನ್ನೂ ಶ್ರೀಮಂತಿಕೆಯಿಂದ ಸುಂದರವಾಗಿ ತೋರಿಸುವುದು ಹೇಗೆಂಬ ಕಲೆಯೂ ಬನ್ಸಾಲಿಗಿದೆ. 
 

312
Sanjay Leela Bhansali

ಇದೆಲ್ಲದರ ನಡುವೆ ವೀಕ್ಷಕರು ಗಮನಿಸಬೇಕಾದ್ದೇನೆಂದರೆ, ಸಂಜಯ್ ಲೀಲಾ ಬನ್ಸಾಲಿಯ ಬಹುತೇಕ ಎಲ್ಲ ಚಿತ್ರಗಳಲ್ಲಿ ವೇಶ್ಯೆಯರು , ಅವರ ಬದುಕು, ರೆಡ್ ಲೈಟ್ ಏರಿಯಾಗಳ ಚಿತ್ರಣ ಇದ್ದೇ ಇರುತ್ತದೆ. ಈ ದೃಶ್ಯವನ್ನು ನಿರ್ದೇಶಕರು ತುಂಬಾ ಸುಂದರವಾಗಿ ಪ್ರಸ್ತುತಪಡಿಸುತ್ತಾರೆ. 

412

ಹೌದು, ಸಧ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಹೀರಾಮಂಡಿಯಂತೂ ಸಂಪೂರ್ಣ ವೇಶ್ಯೆಯರ ಕತೆಯನ್ನೇ ಹೊಂದಿದೆ.

512

ಇದಲ್ಲದೆ, ಅವರ ಅತ್ಯಂತ ಹಿಟ್ ಚಿತ್ರ ದೇವದಾಸ್‌‌ನಲ್ಲಿ ಮಾಧುರಿ ಧೀಕ್ಷಿತ್ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಇದೊಂತೂ ದಾಖಲೆಗಳ ಮೇಲೆ ದಾಖಲೆ ಮಾಡಿತ್ತು.

612

ಬಾಜಿರಾವ್ ಮಸ್ತಾನಿ ಚಿತ್ರದಲ್ಲೂ ವೇಶ್ಯಾಗೃಹದ ದೃಶ್ಯ ಕಂಡುಬಂದಿದೆ. ಚಿತ್ರದ ಅದ್ಧೂರಿತನ, ಬಳಸುವ ಬಟ್ಟೆಗಳು, ಆಭರಣಗಳು, ದೀಪದ ಬೆಳಕಿನಲ್ಲಿ ಜಗಮಗಿಸುವ ಕೋಟೆಕೊತ್ತಲಗಳು ಎಲ್ಲವೂ ಅದ್ಬುತವಾಗಿದ್ದವು. 

712

ಇನ್ನು ಆಲಿಯಾ ಭಟ್ ಕಾಣಿಸಿಕೊಂಡಿರುವ ಗಂಗೂಬಾಯಿ ಕಾಠಿವಾಡಿಯಂತೂ ವೇಶ್ಯೆಯರದೇ ಕತೆ ಹೊಂದಿದೆ. ವೇಶ್ಯೆಯರ ನಡುವಿನ ಜಗಳವನ್ನೂ ಕಾಣಬಹುದು. 

812

ಬನ್ಸಾಲಿಯವರ ಪ್ರಾಜೆಕ್ಟ್ ಹೀರಾಮಂಡಿ - ಡೈಮಂಡ್ ಬಜಾರ್ ವೇಶ್ಯೆಯರ ಪಾತ್ರಗಳನ್ನು ಒಳಗೊಂಡಿದೆ ಮತ್ತು ಈ ವೆಬ್ ಸರಣಿಯು ಲಾಹೋರ್‌ನ ಹೀರಾಮಂಡಿ ಪ್ರದೇಶವನ್ನು ಆಧರಿಸಿದೆ. 

912

ಬನ್ಸಾಲಿಯವರ ಬಹುತೇಕ ಚಿತ್ರಗಳಲ್ಲಿ ರೆಡ್ ಲೈಟ್ ಏರಿಯಾಗಳು ಮತ್ತು ವೇಶ್ಯೆಯರ ದೃಶ್ಯಗಳು ಏಕೆ ಹೆಚ್ಚು ಗೋಚರಿಸುತ್ತವೆ ಎಂಬುದನ್ನು ಸ್ವತಃ ಸಂಜಯ್ ಲೀಲಾ ಬನ್ಸಾಲಿ ಬಹಿರಂಗಪಡಿಸಿದ್ದಾರೆ.

1012

ಮುಂಬೈನ ರೆಡ್ ಲೈಟ್ ಪ್ರದೇಶವಾದ ಕಾಮಾಟಿಪುರದ ಬಳಿ ಇದ್ದ ಮನೆಯಲ್ಲಿ ತಾನು ಬೆಳೆದಿರುವುದಾಗಿ ಬನ್ಸಾಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಚಾವಡಿಯಲ್ಲಿ ಇರುವಾಗ ವೈಶ್ಯರ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದಾಗಿ ಹೇಳಿದ್ದಾರೆ. 

1112

ಇಲ್ಲಿ ವೇಶ್ಯೆಯರು ಸ್ವಲ್ಪವೇ ಹಣಕ್ಕಾಗಿ ತನ್ನನ್ನು ಹೇಗೆ ಮಾರಿಕೊಳ್ಳುತ್ತಿದ್ದಳು ಎಂಬುದನ್ನು ಬಾಲ್ಯದಲ್ಲಿ ಕಂಡಿರುವುದರಿಂದ ವಿಷಯಗಳು ಮನಸ್ಸಿನಲ್ಲಿ ನೆಲೆಗೊಂಡಿವೆ ಎಂದಿದ್ದಾರೆ ಬನ್ಸಾಲಿ.

1212

ದುಃಖದಿಂದ ತುಂಬಿರುತ್ತಿದ್ದ ವೇಶ್ಯೆಯರು ಅದನ್ನು ಮೇಕಪ್ ಮೂಲಕ ಮುಚ್ಚಿ ಹಾಕುತ್ತಿದ್ದರು. ಇದನ್ನು ಶಾಲೆಗೆ ಹೋಗುವಾಗ ನೋಡುತ್ತಿದ್ದೆ ಮತ್ತು ಈ ವಿಷಯಗಳು ನನ್ನನ್ನು ತುಂಬಾ ಪ್ರಭಾವಿಸಿವೆ ಎಂದು ಬನ್ಸಾಲಿ ತಿಳಿಸಿದ್ದಾರೆ. 

click me!

Recommended Stories