ಬಾಲಿವುಡ್ ಪವರ್‌ಫುಲ್ ಕಪಲ್ ಶಾರುಖ್ ಖಾನ್, ಗೌರಿ ಖಾನ್ 1991ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.
ಲಕ್ಷುರಿಯಸ್‌ಜೀವನವನ್ನು ನಡೆಸುತ್ತಿರುವ ಈ ದಂಪತಿಆರ್ಯನ್ ಖಾನ್ (23), ಸುಹಾನಾ ಖಾನ್ (20) ಮತ್ತು ಅಬ್ರಾಮ್ ಖಾನ್ (7) ಎಂಬ ಮಕ್ಕಳನ್ನು ಹೊಂದಿದ್ದಾರೆ.
ಬಾಲಿವುಡ್‌ನ ಬಾದ್‌ಶಾ ಖಾನ್ ಸೂಪರ್‌ಸ್ಟಾರ್ ಮತ್ತು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.
ಮತ್ತೊಂದೆಡೆ, ಅವರ ಪತ್ನಿ ಗೌರಿ ದೇಶದ ಪ್ರಮುಖ ಇಂಟಿರೀಯರ್ ಡಿಸೈನರ್ಸ್‌ನಲ್ಲಿ ಒಬ್ಬರು.
ಮುಖೇಶ್ ಅಂಬಾನಿ, ರಾಬರ್ಟೊ ಕವಾಲ್ಲಿ, ರಾಲ್ಫ್ ಲಾರೆನ್ ಮತ್ತು ಅನೇಕರ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ ಗೌರಿ.
ಚಿಲ್ಲೀಸ್ ಎಂಟರ್ಟೈನ್ಮೆಂಟ್ ಎಂಬ ಪ್ರೊಡಕ್ಷನ್ ಹೌಸ್ ಹೊಂದಿರುವ ಗೌರಿ ಖಾನ್ 2018ರಲ್ಲಿ, ಫಾರ್ಚೂನ್ ಮ್ಯಾಗ್‌ಜೀನ್‌ನ '50 ಮೊಸ್ಟ್ ಪವರ್‌ಫುಲ್ ವಿಮೆನ್' ಪಟ್ಟಿಯಲ್ಲಿ ಒಬ್ಬರಾಗಿದ್ದರು.
ಗೌರಿ ಮತ್ತು ಎಸ್‌ಆರ್‌ಕೆ ಅವರ ವಾರ್ಷಿಕ ಆದಾಯ ಸುಮಾರು 256 ಕೋಟಿ ರೂ.
ಶಾರುಖ್ ಖಾನ್ನಿವ್ವಳ ಮೌಲ್ಯ 5100 ಕೋಟಿ ರೂ ಹಾಗೂ ಗೌರಿ ಖಾನ್‌ರಆಸ್ತಿ ಮೌಲ್ಯ ಸುಮಾರು 1600 ಕೋಟಿ ರೂ.
ಶಾರುಖ್ ಖಾನ್ ಮುಂಬೈನಲ್ಲಿ ಆರು ಅಂತಸ್ತಿನ 26,328 ಚದರ ಅಡಿ ಮನೆ ಮತ್ತು ದುಬೈನ ಪಾಮ್ ಜುಮೇರಾದಲ್ಲಿ ವಿಲ್ಲಾ ಹೊಂದಿದ್ದಾರೆ.
ಜನವರಿ 2019ರಲ್ಲಿ ಅವರ ಮನೆ ಮನ್ನತ್‌ನ ಬೆಲೆ ಸುಮಾರು 200 ಕೋಟಿ ರೂ. ಮತ್ತು ಅವರ ದುಬೈನ ಮನೆ 24 ಕೋಟಿಗಳು ಎಂದು ಅಂದಾಜಿಸಲಾಗಿತ್ತು.
ಬಾಲಿವುಡ್ ನಟಿ ಜುಹಿ ಚಾವ್ಲಾ ಜೊತೆಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೀಮ್ ಕೋಲ್ಕತಾ ನೈಟ್ ರೈಡರ್ಸ್ ಸಹ-ಮಾಲೀಕರಾಗಿದ್ದಾರೆ ಶಾರುಖ್. ಈ ಟೀಮ್‌ನ ಮೌಲ್ಯ 600 ಕೋಟಿ ರೂ ಎಂದು ಹೇಳಲಾಗುತ್ತದೆ.