'ಕಾಂತಾರ' ಕನ್ನಡದಲ್ಲಿ ಮಾಡಿದ ಸಿನಿಮಾವಾದರೂ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು. 16 ಕೋಟಿ ಬಜೆಟ್‌ನೊಂದಿಗೆ, ಚಿತ್ರವು 400 ಕೋಟಿಗಳಷ್ಟು ಗಲ್ಲಾಪೆಟ್ಟಿಗೆಯನ್ನು ಗಳಿಸಿತು. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ನಟನೆ ಎಲ್ಲರ ಗಮನ ಸೆಳೆಯಿತು. ಚಿತ್ರದಲ್ಲಿ ಸರಳವಾಗಿ ಲೀಲಾ ಪಾತ್ರದಲ್ಲಿ ಮಿಂಚಿದ ಸಪ್ತಮಿಗೌಡಗೆ ಈಗ ಟಾಲಿವುಡ್‌ನಲ್ಲಿ ಅವಕಾಶ ಸಿಕ್ಕಿದೆ.